ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿ: ಮೊದಲ ಸುತ್ತಲ್ಲೇ ಕಿದಂಬಿ ಶ್ರೀಕಾಂತ್‌ ಔಟ್‌

By Kannadaprabha News  |  First Published Nov 30, 2023, 10:34 AM IST

ಮಾಜಿ ವಿಶ್ವ ನಂ.1 ಶ್ರೀಕಾಂತ್‌ ತೈವಾನ್‌ನ ಚಿಯಾ ಹೊ ಲೀ ವಿರುದ್ಧ 21-23, 8-21 ಗೇಮ್‌ಗಳಲ್ಲಿ ಪರಾಭವಗೊಂಡರು. ಇದೇ ವೇಳೆ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 16 ವರ್ಷದ ಉನ್ನತಿ ಹೂಡಾ ಭಾರತದವರೇ ಆದ ಆಕರ್ಷಿ ಕಶ್ಯಪ್‌ ವಿರುದ್ಧ ಗೆದ್ದು 2ನೇ ಸುತ್ತಿಗೇರಿದರು.


ಲಖನೌ: ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಮಾಜಿ ವಿಶ್ವ ನಂ.1 ಶ್ರೀಕಾಂತ್‌ ತೈವಾನ್‌ನ ಚಿಯಾ ಹೊ ಲೀ ವಿರುದ್ಧ 21-23, 8-21 ಗೇಮ್‌ಗಳಲ್ಲಿ ಪರಾಭವಗೊಂಡರು. ಇದೇ ವೇಳೆ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 16 ವರ್ಷದ ಉನ್ನತಿ ಹೂಡಾ ಭಾರತದವರೇ ಆದ ಆಕರ್ಷಿ ಕಶ್ಯಪ್‌ ವಿರುದ್ಧ ಗೆದ್ದು 2ನೇ ಸುತ್ತಿಗೇರಿದರು.

ಟೋಟನ್‌ಹ್ಯಾಮ್ ಜತೆ ಬೆಂಗ್ಳೂರಿನ ಕಿಕ್‌ಸ್ಟಾರ್ಟ್‌ ಎಫ್‌ಸಿ ಸಹಭಾಗಿತ್ವ

Tap to resize

Latest Videos

undefined

ಬೆಂಗಳೂರು: ಕರ್ನಾಟಕದ ಜನಪ್ರಿಯ ಫುಟ್ಬಾಲ್‌ ಕ್ಲಬ್‌ಗಳಲ್ಲಿ ಒಂದಾದ ಕಿಕ್‌ಸ್ಟಾರ್ಟ್‌ ಎಫ್‌ಸಿ, ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನ ಪ್ರಸಿದ್ಧ ಕ್ಲಬ್‌ಗಳಲ್ಲಿ ಒಂದಾದ ಟೋಟನ್‌ಹ್ಯಾಮ್‌ ಹಾಟ್‌ಸ್ಪರ್‌ ಜೊತೆ ಸಹಭಾಗಿತ್ವಕ್ಕೆ ಸಹಿ ಹಾಕಿದೆ. ಟೋಟನ್‌ಹ್ಯಾಮ್‌ನ ರಾಯಭಾರಿಗಳಾದ ಲೆಡ್ಲಿ ಕಿಂಗ್ ಮತ್ತು ಓಸ್ವಾಲ್ಡೊ ಆರ್ಡಿಲ್ಸ್ ನಗರಕ್ಕೆ ಆಗಮಿಸಿ ಒಪ್ಪಂದಕ್ಕೆ ಸಹಿ ಹಾಕಿದರು. ಜಾಗತಿಕ ಮಟ್ಟದಲ್ಲಿ ರಾಜ್ಯದ ಆಟಗಾರರು ಗುರುತಿಸಿಕೊಳ್ಳಲು ಈ ಸಹಭಾಗಿತ್ವ ನೆರವಾಗಲಿದೆ ಎಂದು ಕಿಕ್‌ಸ್ಟಾರ್ಟ್‌ ಎಫ್‌ಸಿ ಆಡಳಿತ ಮಂಡಳಿ ಭರವಸೆ ವ್ಯಕ್ತಪಡಿಸಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಆಯ್ಕೆ ಇಂದು; ರೋಹಿತ್ ಶರ್ಮಾ ಲಭ್ಯತೆ ಅನುಮಾನ?

ರಾಷ್ಟ್ರೀಯ ಫುಟ್ಬಾಲ್‌: ಇಂದು ಕರ್ನಾಟಕ vs ಕೇರಳ

ಬೆಂಗಳೂರು: ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ಟೂರ್ನಿಯಲ್ಲಿ ಫೈನಲ್‌ ಸುತ್ತಿಗೇರುವ ಗುರಿಯೊಂದಿಗೆ ಕಣಕ್ಕಿಳಿದಿರುವ ಕರ್ನಾಟಕ, ಗುರುವಾರ ಗುಂಪು ಹಂತದ ತನ್ನ 4ನೇ ಪಂದ್ಯದಲ್ಲಿ ಕೇರಳ ವಿರುದ್ಧ ಸೆಣಸಲಿದೆ. ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು, 1 ಡ್ರಾನೊಂದಿಗೆ 7 ಅಂಕ ಕಲೆಹಾಕಿ ‘ಸಿ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕ ಮತ್ತೊಂದು ಜಯದೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ.

ಕೇರಳ ಆಡಿರುವ 3 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದ್ದು, 2 ಪಂದ್ಯಗಳನ್ನು ಸೋತಿದೆ. ಗುರುವಾರ ಬೆಂಗಳೂರಲ್ಲಿ ‘ಸಿ’ ಗುಂಪಿನ ಮತ್ತೆರಡು ಪಂದ್ಯಗಳು ನಡೆಯಲಿದ್ದು, ತ್ರಿಪುರಾ-ಚಂಡೀಗಢ ಹಾಗೂ ಅಸ್ಸಾಂ-ಸಿಕ್ಕಿಂ ತಂಡಗಳು ಮುಖಾಮುಖಿಯಾಗಲಿವೆ.

click me!