ಕೆಪಿಎಲ್ ಲೀಗ್'ನಿಂದ ಕಿಚ್ಚ ಸುದೀಪ್ ಅಂಡ್ ಟೀಮ್ ಔಟ್..!

Published : Aug 05, 2017, 01:53 PM ISTUpdated : Apr 11, 2018, 01:10 PM IST
ಕೆಪಿಎಲ್ ಲೀಗ್'ನಿಂದ ಕಿಚ್ಚ ಸುದೀಪ್ ಅಂಡ್ ಟೀಮ್ ಔಟ್..!

ಸಾರಾಂಶ

ರಾಕ್ ಸ್ಟಾರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳು ಟೂರ್ನಿಯಿಂದ ಔಟ್ ಆದರೆ, ಕಲ್ಯಾಣಿ ಬ್ಲಾಸ್ಟರ್ಸ್ ಎಂಬ ಹೊಸ ತಂಡವು ಸೇರ್ಪಡೆಯಾಗಿದೆ. ಕಲ್ಯಾಣಿ ಮೋಟಾರ್ಸ್ ಸಂಸ್ಥೆ ಒಡೆತನದ ಕಲ್ಯಾಣಿ ಬ್ಲಾಸ್ಟರ್ಸ್ ತಂಡವು ಈ ಸೀಸನ್'ನಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದೆ.

ಬೆಂಗಳೂರು(ಆ. 05): ಕೆಪಿಎಲ್ 6ನೇ ಸೀಸನ್'​ನಿಂದ ನಟ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್​​ ತಂಡ ಹೊರಬಿದ್ದಿದೆ. ಈ ಮೂಲಕ ಸಿನಿಮಾ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ಕಳೆದ ಮೂರು ವರ್ಷ ಕೆಪಿಎಲ್'​ನಲ್ಲಿ ಆಡಿ ಮನರಂಜನೆ ನೀಡಿದ್ದ ಚಿತ್ರ ನಟರ ತಂಡ ಈ ಸಲ ಆಡ್ತಿಲ್ಲ. ಕೆಪಿಎಲ್'​ನಲ್ಲಿ ಆಡುವಂತೆ ರಾಕ್​ ಸ್ಟಾರ್ಸ್​ ತಂಡದೊಂದಿಗೆ ಮೂರು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಮೂರು ವರ್ಷ ಆಡಿಸಲಾಗಿತ್ತು. ಈ ಸಲ ಸುದೀಪ್ ತಂಡವನ್ನ ಆಹ್ವಾನಿಸಿಲ್ಲ. ಹೊಸ ಬಿಡ್'​ನೊಂದಿಗೆ ಹೊಸ ತಂಡಗಳನ್ನ ಸಿದ್ದಪಡಿಸಿದ್ದೇವೆ. ಹೀಗಾಗಿ ಈ ಸಲ 7 ತಂಡಗಳು ಕೆಪಿಎಲ್'​ನಲ್ಲಿ ಆಡಲಿವೆ ಎಂದು  ಕೆಎಸ್​ಸಿಎ ವಕ್ತಾರ ವಿನಯ್ ಮೃತ್ಯುಂಜಯ ಸುವರ್ಣ ನ್ಯೂಸ್​ಗೆ ತಿಳಿಸಿದ್ದಾರೆ.

ಬೆಂಗಳೂರಿಗೆ ಕಲ್ಯಾಣಿ:
ರಾಕ್ ಸ್ಟಾರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳು ಟೂರ್ನಿಯಿಂದ ಔಟ್ ಆದರೆ, ಕಲ್ಯಾಣಿ ಬ್ಲಾಸ್ಟರ್ಸ್ ಎಂಬ ಹೊಸ ತಂಡವು ಸೇರ್ಪಡೆಯಾಗಿದೆ. ಕಲ್ಯಾಣಿ ಮೋಟಾರ್ಸ್ ಸಂಸ್ಥೆ ಒಡೆತನದ ಕಲ್ಯಾಣಿ ಬ್ಲಾಸ್ಟರ್ಸ್ ತಂಡವು ಈ ಸೀಸನ್'ನಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದೆ.

ಕೆಪಿಎಲ್-7ರಲ್ಲಿ ಆಡುವ ತಂಡಗಳು:
1) ಕಲ್ಯಾಣಿ ಬ್ಲಾಸ್ಟರ್ಸ್
2) ಬಿಜಾಪುರ ಬುಲ್ಸ್
3) ಬೆಳಗಾವಿ ಪ್ಯಾಂಥರ್ಸ್
4) ಬಳ್ಳಾರಿ ಟಸ್ಕರ್ಸ್
5) ಹುಬ್ಬಳ್ಳಿ ಟೈಗರ್ಸ್
6) ಮೈಸೂರು ವಾರಿಯರ್ಸ್
7) ನಮ್ಮ ಶಿವಮೊಗ್ಗ

ಹೊರಗುಳಿದ ತಂಡಗಳು:
1) ರಾಕ್ ಸ್ಟಾರ್ಸ್
2) ಮಂಗಳೂರು ಯುನೈಟೆಡ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫುಟ್‌ಬಾಲ್ ಅಂಗಳಕ್ಕೆ ತಟ್ಟಿದ ಯುದ್ಧದ ಬಿಸಿ; ಅಮೆರಿಕದ ಮಣ್ಣಿನಲ್ಲಿ ಫಿಫಾ ವಿಶ್ವಕಪ್ ಆಡಲ್ಲ ಎಂದ ಇರಾನ್?
T20 World Cup 2026: ಭಾರತ-ಇಂಗ್ಲೆಂಡ್ ಸೆಮಿಫೈನಲ್ ಮ್ಯಾಚ್ ರದ್ದಾದ್ರೆ ಯಾರಿಗೆ ಸಿಗುತ್ತೆ ಫೈನಲ್ ಟಿಕೆಟ್? ಐಸಿಸಿ ನಿಯಮವೇನು?