ಚೊಚ್ಚಲ ಖೋ ಖೋ ವಿಶ್ವಕಪ್: ಸಂಗೀತ ದಿಗ್ಗಜ ರಿಕಿ ಕೇಜ್ ಬೆಂಬಲ

By Naveen Kodase  |  First Published Jan 13, 2025, 3:02 PM IST

ಖೋ ಖೋ ವಿಶ್ವಕಪ್ 2025 ದೆಹಲಿಯಲ್ಲಿ ಸದ್ದು ಮಾಡ್ತಿದೆ! ಭಾರತ ಸೇರಿ 39 ದೇಶಗಳ ತಂಡಗಳು ಪ್ರಶಸ್ತಿಗಾಗಿ ಸೆಣಸಾಡ್ತಿವೆ. ರಿಕಿ ಕೇಜ್ ಕೂಡ ಈ ಸಾಂಪ್ರದಾಯಿಕ ಕ್ರೀಡೆಗೆ ಬೆಂಬಲ ನೀಡಿದ್ದಾರೆ.


ಖೋ ಖೋ ವಿಶ್ವಕಪ್ 2025: ಭಾರತ ಈಗ ಆಧ್ಯಾತ್ಮ ಮತ್ತು ಸಂಸ್ಕೃತಿ ಜೊತೆಗೆ ಕ್ರೀಡೆಯ ದೊಡ್ಡ ಕಾರ್ಯಕ್ರಮದ ಕೇಂದ್ರವಾಗಿದೆ. ಒಂದೆಡೆ ಮಹಾಕುಂಭ 2025 ಶುರುವಾಗಿದ್ದರೆ, ಇನ್ನೊಂದೆಡೆ ಖೋ ಖೋ ವಿಶ್ವ ಚಾಂಪಿಯನ್‌ಶಿಪ್ ಕೂಡ ಆರಂಭವಾಗಿದೆ. ಪ್ರಸಿದ್ಧ ಸಂಗೀತಗಾರ ರಿಕಿ ಕೇಜ್ ಈ ಸಾಂಪ್ರದಾಯಿಕ ಕ್ರೀಡೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಖೋ ಖೋ ವಿಶ್ವಕಪ್‌ಗೆ ಶುಭ ಹಾರೈಸಿದ್ದಾರೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್, ವಿಶ್ವ ಮಟ್ಟದಲ್ಲಿ ಭಾರತೀಯ ಸಂಗೀತಕ್ಕೆ ಮನ್ನಣೆ ತಂದುಕೊಟ್ಟವರು, ದೆಹಲಿಯಲ್ಲಿ ನಡೆಯುತ್ತಿರುವ ಖೋ ಖೋ ವಿಶ್ವಕಪ್ ಬಗ್ಗೆ ಮಾತನಾಡಿದ್ದಾರೆ. ಹೊಸ, ಆಧುನಿಕ ರೂಪದಲ್ಲಿ ವಿವಿಧ ದೇಶಗಳ ತಂಡಗಳು ಈ ಕ್ರೀಡೆಯಲ್ಲಿ ಭಾಗವಹಿಸುತ್ತಿವೆ. ಖೋ ಖೋ ವಿಶ್ವಕಪ್ ನೋಡಿ, ಆಟಗಾರರನ್ನು ಪ್ರೋತ್ಸಾಹಿಸಿ ಅಂತ ಕರೆ ನೀಡಿದ್ದಾರೆ.

Tap to resize

Latest Videos

ಇಂದಿನಿಂದ ಖೋ ಖೋ ವಿಶ್ವಕಪ್: ಚೊಚ್ಚಲ ಆವೃತ್ತಿಯ ಟೂರ್ನಿಗೆ ನವದೆಹಲಿ ಆತಿಥ್ಯ

Kho-kho 2025 आज से दिल्ली में शुरू हो रहा है। ग्रैमी पुरस्कार विजेता रिकी केज ने सभी से यह खेल देखने को आग्रह किया। pic.twitter.com/Ltxxao1Xdd

— Asianetnews Hindi (@AsianetNewsHN)

ಖೋ ಖೋ ವಿಶ್ವಕಪ್ ಯಾವಾಗ ಶುರು?

ಜನವರಿ 13 ರಿಂದ 19 ರವರೆಗೆ ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಖೋ ಖೋ ವಿಶ್ವಕಪ್ ನಡೆಯುತ್ತಿದೆ. ಭಾರತ ಸೇರಿ 39 ದೇಶಗಳು ಭಾಗವಹಿಸುತ್ತಿವೆ. ಪುರುಷ ಮತ್ತು ಮಹಿಳಾ ವಿಭಾಗಗಳೆರಡೂ ಏಕಕಾಲದಲ್ಲಿ ನಡೆಯುತ್ತಿವೆ.

ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

click me!