ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ವಿದರ್ಭ ಹಾಗೂ ಹರ್ಯಾಣ ಸೆಮಿಫೈನಲ್ ಪ್ರವೇಶಿಸಿವೆ. ಕ್ವಾರ್ಟರ್ ಫೈನಲ್‌ನಲ್ಲಿ ಗುಜರಾತ್ ವಿರುದ್ಧ ಹರ್ಯಾಣ 2 ವಿಕೆಟ್ ಜಯಗಳಿಸಿತು, ರಾಜಸ್ಥಾನ ವಿರುದ್ಧ ವಿದರ್ಭ 9 ವಿಕೆಟ್ ಜಯಗಳಿಸಿತು.
ವಡೋದರಾ: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ವಿದರ್ಭ ಹಾಗೂ ಹರ್ಯಾಣ ಸೆಮಿಫೈನಲ್ ಪ್ರವೇಶಿಸಿವೆ. ಭಾನುವಾರ ಕ್ವಾರ್ಟರ್ ಫೈನಲ್‌ನಲ್ಲಿ ಗುಜರಾತ್ ವಿರುದ್ಧ ಹರ್ಯಾಣ 2 ವಿಕೆಟ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ 45.2 ಓವರ್‌ಗಳಲ್ಲಿ 196ಕ್ಕೆ ಆಲೌಟಾಯಿತು. ಹೇಮಂಗ್ ಪಟೇಲ್ 54 ರನ್ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹರ್ಯಾಣ 44.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು.
ವಿದರ್ಭಕ್ಕೆ 9 ವಿಕೆಟ್ ಜಯ: ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ರಾಜಸ್ಥಾನ ವಿರುದ್ಧ ವಿದರ್ಭ 9 ವಿಕೆಟ್ ಜಯಗಳಿಸಿತು. ರಾಜಸ್ಥಾನ 8 ವಿಕೆಟ್‌ಗೆ 291 ರನ್ ಗಳಿಸಿತು. ದೊಡ್ಡ ಗುರಿ ಬೆನ್ನತ್ತಿದ ವಿದರ್ಭ 43.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು. ಧ್ರುವ್ ಶೋರೆ ಔಟಾಗದೆ 118, ನಾಯಕ ಕರುಣ್ ನಾಯರ್ (82 ಎಸೆತಗಳಲ್ಲಿ ಔಟಾಗದೆ 122) ಸತತ 4ನೇ ಶತಕ ಸಿಡಿಸಿದರು. ರೆಡ್ ಹಾಟ್ ಫಾರ್ಮ್‌ನಲ್ಲಿರುವ ಕರುಣ್ ನಾಯರ್, ಅವರ ಪ್ರದರ್ಶನದ ಮೇಲೆ ಟೀಂ ಇಂಡಿಯಾ ಆಯ್ಕೆ ಸಮಿತಿ ಕಣ್ಣಿಟ್ಟಿದ್ದು, ಮುಂಬರುವ ಟೂರ್ನಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಂದಿನಿಂದ ಖೋ ಖೋ ವಿಶ್ವಕಪ್: ಚೊಚ್ಚಲ ಆವೃತ್ತಿಯ ಟೂರ್ನಿಗೆ ನವದೆಹಲಿ ಆತಿಥ್ಯ
🚨 Record Alert 🚨
Vidarbha captain Karun Nair has now hit the joint-most 💯s in a season in the , equalling N Jagadeesan's (2022-23) tally of 5 centuries! 😮
📽️ Relive his fantastic knock of 122* vs Rajasthan in quarterfinal 🔥 | pic.twitter.com/AvLrUyBgKv
ಸತತ 4 ಶತಕ: ಕರುಣ್ ದಾಖಲೆ
ಕರುಣ್ ಸತತ 4ನೇ ಪಂದ್ಯದಲ್ಲೂ ಶತಕ ಬಾರಿಸಿದರು. ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 3ನೇ, ವಿಶ್ವದ 5ನೇ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾ ಗಿದ್ದಾರೆ. ಎನ್.ಜಗದೀಶನ್ ಸತತ 5 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ದೇವದತ್ ಪಡಿಕ್ಕಲ್, ಶ್ರೀಲಂಕಾದ ಕುಮಾರ ಸಂಗಕ್ಕರ, ದಕ್ಷಿಣ ಆಫ್ರಿಕಾದ ಆಲ್ವರೊ ಪೀರ್ಟಸನ್ ಸತತ 4 ಪಂದ್ಯಗಳಲ್ಲಿ ಶತಕ ಬಾರಿಸಿದ್ದಾರೆ.
ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ
ಹರ್ಯಾಣ ಹಾಗೂ ಕರ್ನಾಟಕ, ಜ.15
ವಿದರ್ಭ ಹಾಗೂ ಮಹಾರಾಷ್ಟ್ರ, ಜ.16