‘ಪೋಷಕರು ಈಗ ಬದಲಾಗಿದ್ದಾರೆ. ಮೊದಲು ಕ್ರೀಡೆಯಿಂದ ತಮ್ಮ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತದೆ ಎಂದು ಭಯಪಡುತ್ತಿದ್ದರು. ಶೈಕ್ಷಣಿಕ ಸಾಧನೆ ಸಂಭ್ರಮಿಸುವ ಜೊತೆಗೆ ಕ್ರೀಡಾ ಸಾಧನೆಗಳನ್ನು ಕೂಡಾ ಸಂಭ್ರಮಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.
ಗುವಾಹಟಿ: ಸೋಲುಗಳಿಂದ ಬೇಸರಗೊಳ್ಳಬೇಡಿ. ಸೋಲನ್ನು ಕಲಿಕೆಗೆ ಇರುವ ಅವಕಾಶವಾಗಿ ಬಳಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮವಾರ 4ನೇ ಆವೃತ್ತಿ ಖೇಲೋ ಇಂಡಿಯಾ ವಿವಿ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಸಂದೇಶದ ಮೂಲಕ ಯುವ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
‘ಪೋಷಕರು ಈಗ ಬದಲಾಗಿದ್ದಾರೆ. ಮೊದಲು ಕ್ರೀಡೆಯಿಂದ ತಮ್ಮ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತದೆ ಎಂದು ಭಯಪಡುತ್ತಿದ್ದರು. ಶೈಕ್ಷಣಿಕ ಸಾಧನೆ ಸಂಭ್ರಮಿಸುವ ಜೊತೆಗೆ ಕ್ರೀಡಾ ಸಾಧನೆಗಳನ್ನು ಕೂಡಾ ಸಂಭ್ರಮಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.
ಕ್ರೀಡಾಕೂಟಕ್ಕೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಚಾಲನೆ ನೀಡಿದರು. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ. ಸಿಕ್ಕಿಂ, ನಾಗಲ್ಯಾಂಡ್ ಹಾಗೂ ತ್ರಿಪುರಾದಲ್ಲಿ ಗೇಮ್ಸ್ ನಡೆಯಲಿದ್ದು, 4500+ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ದೇಸಿ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ಬೇಡ: BCCI ಖಡಕ್ ವಾರ್ನಿಂಗ್
ಪ್ರೊ ಲೀಗ್: ಶೂಟೌಟ್‌ನಲ್ಲಿ ಸ್ಪೇನ್ ವಿರುದ್ಧ ಗೆದ್ದ ಭಾರತ
ರೂರ್ಕೆಲಾ: ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಸೋಮವಾರ ಸ್ಪೇನ್ ವಿರುದ್ಧ ಶೂಟೌಟ್‌ನ ಸಡನ್ ಡೆತ್‌ನಲ್ಲಿ 8-7 ಗೋಲುಗಳಿಂದ ಜಯಗಳಿಸಿದೆ. ನಿಗದಿತ ಅವಧಿಯಲ್ಲಿ ಇತ್ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶ ನಿರ್ಧರಿಸಲು ಶೂಟೌಟ್ ಮೊರೆ ಹೋಗಲಾಯಿತು. ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಭಾರತ 4ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಪ್ರೊ ಕಬಡ್ಡಿ ಲೀಗ್: ಜೈಪುರ, ಪುಣೆಗೆ 16ನೇ ಗೆಲುವು
ಪಂಚಕುಲ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ತಲಾ 16ನೇ ಗೆಲುವು ದಾಖಲಿಸಿವೆ. ಲೀಗ್ ಹಂತದ ಕೊನೆ ಪಂದ್ಯದಲ್ಲಿ ಜೈಪುರ ತಂಡ ಸೋಮವಾರ ಗುಜರಾತ್ ಜೈಂಟ್ಸ್ ವಿರುದ್ಧ 45-36 ಅಂಕಗಳಿಂದ ಜಯಗಳಿಸಿತು. ಜೈಪುರದ ಅರ್ಜುನ್ ದೇಶ್ವಾಲ್ 13 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಗುಜರಾತ್‌ನ ಪರ್ತೀಕ್ ದಹಿಯಾ(14 ಅಂಕ) ಹೋರಾಟ ವ್ಯರ್ಥವಾಯಿತು. ಮತ್ತೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಪುಣೆ ತಂಡ 51-36 ಅಂಕಗಳಿಂದ ಜಯಭೇರಿ ಬಾರಿಸಿತು. ಪುಣೆಗೆ ಇನ್ನೊಂದು ಪಂದ್ಯ ಬಾಕಿ ಇದೆ.