ದೇಸಿ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ಬೇಡ: BCCI ಖಡಕ್ ವಾರ್ನಿಂಗ್

By Kannadaprabha News  |  First Published Feb 20, 2024, 9:02 AM IST

ಈ ಬಗ್ಗೆ ಕಳೆದ ವಾರ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಹಲವು ಆಟಗಾರರಿಗೆ ಪತ್ರ ಬರೆದಿದ್ದಾರೆ. ಕೇಂದ್ರೀಯ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರರನ್ನು ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಿದ್ದರೆ ಅವರು ದೇಸಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು. ತಪ್ಪಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.


ನವದೆಹಲಿ(ಫೆ.20): ಭಾರತದ ಯುವ ಕ್ರಿಕೆಟಿಗರು ದೇಸಿ ಕ್ರಿಕೆಟ್‌ನಲ್ಲಿ ಆಡುವುದನ್ನು ತಪ್ಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿ) ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದು, ದೇಸಿ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಹೆಚ್ಚಿನ ಆದ್ಯತೆ ನೀಡುವುದು ಬೇಡ ಎಂದು ಖಡಕ್‌ ಸೂಚನೆ ಕೊಟ್ಟಿದೆ. ತಪ್ಪಿದರೆ ತೀವ್ರ ಪರಿಣಾಮ ಎದುರಿಸಿ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಈ ಬಗ್ಗೆ ಕಳೆದ ವಾರ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಹಲವು ಆಟಗಾರರಿಗೆ ಪತ್ರ ಬರೆದಿದ್ದಾರೆ. ಕೇಂದ್ರೀಯ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರರನ್ನು ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಿದ್ದರೆ ಅವರು ದೇಸಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು. ತಪ್ಪಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

Tap to resize

Latest Videos

500-501 ವಿಕೆಟ್‌ ನಡುವೆ ನಡೆದಿದ್ದು ಅನೇಕ: ಅಶ್ವಿನ್ ಪತ್ನಿ ಪ್ರೀತಿ ಭಾವನಾತ್ಮಕ ಪೋಸ್ಟ್

‘ದೇಸಿ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡುವ ಪ್ರವೃತ್ತಿ ಆತಂಕಕ್ಕೆ ಕಾರಣವಾಗಿದೆ. ಹಲವು ಆಟಗಾರರು ಐಪಿಎಲ್‌ಗಾಗಿ ದೇಸಿ ಕ್ರಿಕೆಟ್‌ನಿಂದ ದೂರ ಉಳಿಯುತ್ತಿದ್ದಾರೆ.ಇದು ಸರಿಯಲ್ಲ. ದೇಸಿ ಕ್ರಿಕೆಟ್‌ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬು. ಅದು ತನ್ನ ಮೌಲ್ಯ ಕಳೆದುಕೊಳ್ಳಬಾರದು’ ಎಂದು ಹೇಳಿದ್ದಾರೆ.

ದೇಸಿ ಟೂರ್ನಿಗಳ ಪ್ರದರ್ಶನ ರಾಷ್ಟ್ರೀಯ ತಂಡದ ಆಯ್ಕೆಗೆ ನಿರ್ಣಾಯಕ ಮಾನದಂಡವಾಗಿ ಉಳಿದಿದೆ. ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ ನಮ್ಮ ಉದ್ದೇಶ ಸ್ಪಷ್ಟ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕಿದ್ದರೆ ದೇಸಿ ಕ್ರಿಕೆಟ್‌ನಲ್ಲಿ ಆಡಲೇಬೇಕು ಎಂದು ತಾಕೀತು ಮಾಡಿದ್ದಾರೆ.

ರಣಜಿ ಟ್ರೋಫಿ: ಗರಿಷ್ಠ ರನ್‌ ಚೇಸ್‌ ದಾಖಲೆ ನಿರ್ಮಿಸಿದ ರೈಲ್ವೇಸ್‌

ಅಗರ್ತಾಲಾ: ರಣಜಿ ಟ್ರೋಫಿ ಇತಿಹಾಸದಲ್ಲೇ ಗರಿಷ್ಠ ರನ್‌ ಬೆನ್ನತ್ತಿ ಗೆದ್ದ ದಾಖಲೆನ್ನು ರೈಲ್ವೇಸ್‌ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ. ಸೋಮವಾರ ತ್ರಿಪುರ ವಿರುದ್ಧದ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ರೈಲ್ವೇಸ್‌ 378 ರನ್‌ಗಳ ಗುರಿ ಬೆನ್ನಟ್ಟಿ ಗೆದ್ದು ಹೊಸ ದಾಖಲೆ ಬರೆಯಿತು. 2019-20ರಲ್ಲಿ ಉತ್ತರಪ್ರದೇಶ ವಿರುದ್ಧ ಸೌರಾಷ್ಟ್ರ ತಂಡ 372 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದು ಈ ವರೆಗಿನ ದಾಖಲೆಯಾಗಿತ್ತು.

ಐಪಿಎಲ್ ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟ: ಧೋನಿ ನಾಯಕ, ಹಿಟ್‌ಮ್ಯಾನ್‌ಗಿಲ್ಲ ಸ್ಥಾನ..!

ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟಾಗಿದ್ದ ತ್ರಿಪುರಾ, ಕೇವಲ 105 ರನ್‌ಗೆ ರೈಲ್ವೇಸ್‌ಅನ್ನು ಕಟ್ಟಿಹಾಕಿ 44 ರನ್‌ಗಳ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ 333 ರನ್‌ ಗಳಿಸಿದ ತ್ರಿಪುರಾ ತಂಡ ರೈಲ್ವೇಸ್‌ ಗೆಲುವಿಗೆ 378 ರನ್‌ ಗುರಿ ನೀಡಿತ್ತು. ಅಜೇಯ 169 ರನ್‌ ಸಿಡಿಸಿ ಕೊನೆವರೆಗೂ ಕ್ರೀಸ್‌ನಲ್ಲಿದ್ದ ಪ್ರಥಮ್‌ ಸಿಂಗ್‌ ಹಾಗೂ 106 ಚಚ್ಚಿದ ಮೊಹಮದ್‌ ಸೈಫ್‌ ರೈಲ್ವೇಸ್‌ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು.

ಗರಿಷ್ಠ ರನ್‌ ದಾಖಲೆ

ರನ್‌ ಗೆದ್ದತಂಡ  ಎದುರಾಳಿ

378/5 ರೈಲ್ವೇಸ್‌ - ತ್ರಿಪುರಾ

372/4 ಸೌರಾಷ್ಟ್ರ - ಉತ್ತರಪ್ರದೇಶ\B

371/4 ಅಸ್ಸಾಂ - ಸರ್ವೀಸಸ್‌

360/4 ರಾಜಸ್ತಾನ - ವಿದರ್ಭ

359/4 ಉತ್ತರಪ್ರದೇಶ - ಮಹಾರಾಷ್ಟ್ರ
 

click me!