ಇಂದಿನಿಂದ ಖೇಲೋ ಇಂಡಿಯಾ ಗೇಮ್ಸ್‌, ಮಧ್ಯ ಪ್ರದೇಶ ಆತಿಥ್ಯ

Published : Jan 30, 2023, 08:44 AM IST
ಇಂದಿನಿಂದ ಖೇಲೋ ಇಂಡಿಯಾ ಗೇಮ್ಸ್‌, ಮಧ್ಯ ಪ್ರದೇಶ ಆತಿಥ್ಯ

ಸಾರಾಂಶ

ಇಂದಿನಿಂದ ಖೇಲೋ ಇಂಡಿಯಾ ಯೂತ್ ಗೇಮ್ಸ್ ಆರಂಭ ಮಧ್ಯಪ್ರದೇಶದ 8 ನಗರಗಳಲ್ಲಿ ಕ್ರೀಡಾಕೂಟ ಆಯೋಜನೆ ಕರ್ನಾಟಕದಿಂದ 224 ಮಂದಿ ಕ್ರೀಡಾಕೂಟದಲ್ಲಿ ಭಾಗಿ

ಭೋಪಾಲ್‌(ಜ.30): 5ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ಗೆ ಸೋಮವಾರ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಚಾಲನೆ ಸಿಗಲಿದೆ. ಇಂದೋರ್‌, ಗ್ವಾಲಿಯರ್‌ ಸೇರಿದಂತೆ ರಾಜ್ಯದ 8 ನಗರಗಳಲ್ಲಿ ಕೂಟ ಆಯೋಜನೆಗೊಳ್ಳಲಿದ್ದು, ಸೈಕ್ಲಿಂಗ್‌ ಸ್ಪರ್ಧೆ ನವದೆಹಲಿಯಲ್ಲಿ ನಡೆಯಲಿದೆ. ಫೆ.11ರಂದು ಗೇಮ್ಸ್‌ ಮುಕ್ತಾಯಗೊಳ್ಳಲಿದೆ. ದೇಶದ ವಿವಿಧ ಕಡೆಗಳಿಂದ 6000ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೇ ಮೊದಲ ಬಾರಿ ರೋಯಿಂಗ್‌, ಕಯಾಕಿಂಗ್‌ ಸೇರಿದಂತೆ ಜಲ ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಮಲ್ಲಕಂಬ, ಕಳರಿಪಯಟ್ಟು, ಥಾಂಗ್‌ ಟಾ ಸೇರಿದಂತೆ ಒಟ್ಟು 27 ಕ್ರೀಡೆಗಳು ನಡೆಯಲಿವೆ.

ರಾಜ್ಯದ 244 ಮಂದಿ: ಗೇಮ್ಸ್‌ನಲ್ಲಿ ಕರ್ನಾಟಕದ 244 ಮಂದಿ ಪಾಲ್ಗೊಳ್ಳಲಿದ್ದು, ಈ ಬಾರಿಯೂ ಅಗ್ರ 3ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಮೊದಲ 3 ಆವೃತ್ತಿಗಳಲ್ಲೂ 4ನೇ ಸ್ಥಾನ ಪಡೆದುಕೊಂಡಿದ್ದ ರಾಜ್ಯ, ಕಳೆದ ಬಾರಿ 22 ಚಿನ್ನ ಸೇರಿ 67 ಪದಕಗಳನ್ನು ಗೆದ್ದು ತೃತೀಯ ಸ್ಥಾನಿಯಾಗಿತ್ತು.

ಟಿಟಿ: ಯಶಸ್ವಿನಿಗೆ ಚಿನ್ನದ ಗುರಿ

ಭೋಪಾಲ್‌: 3ನೇ ಬಾರಿ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕದ ತಾರಾ ಟೇಬಲ್‌ ಟೆನಿಸ್‌ ಪಟು ಯಶಸ್ವಿನಿ ಘೋರ್ಪಡೆ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌(ಟಾಫ್ಸ್‌) ಯೋಜನೆಯಲ್ಲಿ ಸ್ಥಾನ ಪಡೆದಿರುವ ಬೆಂಗಳೂರಿನ ಯಶಸ್ವಿನಿ 2020ರಲ್ಲಿ ಗುವಾಹಟಿಯಲ್ಲಿ ನಡೆದ ಯೂತ್‌ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದರು. 

Hockey World Cup: ಕಮ್‌ಬ್ಯಾಕ್ ಕಿಂಗ್‌ ಜರ್ಮನಿಗೆ ಹಾಕಿ ವಿಶ್ವಕಿರೀಟ..!

ಕಳೆದ ಆವೃತ್ತಿಯಲ್ಲಿ ಪದಕ ಪಡೆಯಲು ವಿಫಲರಾಗಿದ್ದರು. ತಾರಾ ಟಿಟಿ ಆಟಗಾರ್ತಿ ಮನಿಕಾ ಬಾತ್ರಾ ತಮ್ಮ ರೋಲ್‌ ಮಾಡೆಲ್‌ ಎಂದು ಹೇಳಿಕೊಳ್ಳುವ ಯಶಸ್ವಿನಿ ಏಷ್ಯನ್‌ ಕಿರಿಯರ ಚಾಂಪಿಯನ್‌ಶಿಪ್‌ನ ಮಿಶ್ರ ಡಬಲ್ಸ್‌ ಚಿನ್ನ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದಿದ್ದಾರೆ.

ನೆದರ್‌ಲೆಂಡ್‌್ಸಗೆ ಕಂಚು

ಭುವನೇಶ್ವರ: 3 ಬಾರಿ ಚಾಂಪಿಯನ್‌, ಕಳೆದೆರಡು ಆವೃತ್ತಿಗಳ ರನ್ನರ್‌-ಅಪ್‌ ನೆದರ್‌ಲೆಂಡ್‌್ಸ ಈ ಬಾರಿ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಭಾನುವಾರ ಆಸ್ಪ್ರೇಲಿಯಾ ವಿರುದ್ಧ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಡಚ್‌ ಪಡೆ 3-1 ಗೋಲುಗಳ ಗೆಲುವು ಸಾಧಿಸಿತು. 2002, 2010ರಲ್ಲೂ 3ನೇ ಸ್ಥಾನಿಯಾಗಿದ್ದ ಡಚ್‌ಗೆ ಇದು 3ನೇ ಕಂಚು. 3 ಬಾರಿ ಪ್ರಶಸ್ತಿ ಗೆದ್ದಿದ್ದ ಆಸ್ಪ್ರೇಲಿಯಾ 1998ರ ಬಳಿಕ ಮತ್ತೊಮ್ಮೆ 4ನೇ ಸ್ಥಾನಿಯಾಯಿತು.

9ನೇ ಸ್ಥಾನಕ್ಕೆ ಭಾರತ ತೃಪ್ತಿ

ರೂರ್ಕೆಲಾ: ತವರಿನಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್‌ ಪಂದ್ಯಾವಳಿಯನ್ನು ಭಾರತ 9ನೇ ಸ್ಥಾನದೊಂದಿಗೆ ಮುಕ್ತಾಯಗೊಳಿಸಿದೆ. 9-12ನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5-2 ಗೋಲುಗಳಲ್ಲಿ ಗೆಲುವು ಸಾಧಿಸಿತು. ವೇಲ್ಸ್‌ ವಿರುದ್ಧ 6-0 ಜಯ ಸಾಧಿಸಿದ ಅರ್ಜೆಂಟೀನಾ ಸಹ ಭಾರತದೊಂದಿಗೆ 9ನೇ ಸ್ಥಾನ ಹಂಚಿಕೊಂಡಿತು.

4ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದ ಭಾರತ ಮೊದಲಾರ್ಧದ ಅಂತ್ಯಕ್ಕೆ 2-0 ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಭಾರತ 3, ದ.ಆಫ್ರಿಕಾ 2 ಗೋಲು ದಾಖಲಿಸಿದವು. ಭಾರತ ಪರ ಅಭಿಷೇಕ್‌, ಹರ್ಮನ್‌ಪ್ರೀತ್‌, ಶಮ್ಶೇರ್‌, ಆಕಾಶ್‌ದೀಪ್‌, ಸುಖ್‌ಜೀತ್‌ ಸಿಂಗ್‌ ತಲಾ ಒಂದು ಗೋಲು ಬಾರಿಸಿದರು. 2018ರ ವಿಶ್ವಕಪ್‌ನಲ್ಲಿ ಭಾರತ 6ನೇ ಸ್ಥಾನ ಪಡೆದಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!