ತಮಿಳಿನಲ್ಲಿ ವಿಜಯ್​-ಕರುಣ್ ಗೇಮ್ ಪ್ಲಾನ್

Published : Dec 20, 2016, 07:45 AM ISTUpdated : Apr 11, 2018, 01:04 PM IST
ತಮಿಳಿನಲ್ಲಿ ವಿಜಯ್​-ಕರುಣ್ ಗೇಮ್ ಪ್ಲಾನ್

ಸಾರಾಂಶ

ಬ್ಯಾಟಿಂಗ್ ಮಾಡುವಾಗ ಇಬ್ಬರು ಬ್ಯಾಟ್ಸ್​​​ಮನ್​ಗಳು ಗೇಮ್ ಪ್ಲಾನ್ ಬಗ್ಗೆ ಮಾತನಾಡುವುದು ಸಹಜ. ಆದರೆ ಎದುರಾಳಿಗೆ ಗೊತ್ತಿರುವ ಭಾಷೆಯಲ್ಲಿ ಮಾತನಾಡಿದರೆ ಅವರ ಯೋಜನೆ ಎದುರಾಳಿಗೆ ಗೊತ್ತಾಗಿಬಿಡುತ್ತೆ. ಹೀಗಾಗಿ ಎದುರಾಳಿಗೆ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಾರೆ. 

ಚೆನ್ನೈ (ಡಿ. 20):  ಬ್ಯಾಟಿಂಗ್ ಮಾಡುವಾಗ ಇಬ್ಬರು ಬ್ಯಾಟ್ಸ್​​​ಮನ್​ಗಳು ಗೇಮ್ ಪ್ಲಾನ್ ಬಗ್ಗೆ ಮಾತನಾಡುವುದು ಸಹಜ. ಆದರೆ ಎದುರಾಳಿಗೆ ಗೊತ್ತಿರುವ ಭಾಷೆಯಲ್ಲಿ ಮಾತನಾಡಿದರೆ ಅವರ ಯೋಜನೆ ಎದುರಾಳಿಗೆ ಗೊತ್ತಾಗಿಬಿಡುತ್ತೆ. ಹೀಗಾಗಿ ಎದುರಾಳಿಗೆ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಾರೆ. 

ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್​​ನಲ್ಲಿ ಬ್ಯಾಟಿಂಗ್ ವೇಳೆ ಕರುಣ್ ನಾಯರ್ ಮತ್ತು ಮುರಳಿ ವಿಜಯ್ ತಮಿಳಿನಲ್ಲಿ ಮಾತಾಡಿಕೊಳ್ಳುತ್ತಿದ್ದರು. ವಿಜಯ್ ತಮಿಳುನಾಡಿನವರು. ಕರುಣ್ ಕರ್ನಾಟಕದವರು. ನಾಯರ್​ಗೆ ತಮಿಳು ಬರುವುದರಿಂದ ತಮಿಳಿನಲ್ಲೇ ವಿಜಯ್ ಕೆಲ ಸಲಹೆ ನೀಡುತ್ತಿದ್ದರು. ರಾಹುಲ್ ಮಾಡಿದ ತಪ್ಪನ್ನು ಕರುಣ್ ಮಾಡದಂತೆ ವಿಜಯ್ ಆಗಾಗ ಸಲಹೆ ಕೊಡುತ್ತಿದ್ದರು. ಈ ಸಲಹೆ ಮೇರೆಗೆ ಕರುಣ್ ಚೊಚ್ಚಲ ಶತಕ ಬಾರಿಸಿದ್ರು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡಿದ್ರೆ ನಮ್ಮ ಗೇಮ್ ಪ್ಲಾನ್​ ಇಂಗ್ಲೆಂಡ್ ಆಟಗಾರರಿಗೆ ತಿಳಿಯುತ್ತದೆ ಅನ್ನೋ ಕಾರಣಕ್ಕೆ ಈ ಪ್ಲಾನ್ ಮಾಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಐಪಿಎಲ್ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್‌ ಕೊಹ್ಲಿ!
ಐಪಿಎಲ್ ಪ್ರೇಮಿಗಳಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ: ಪಂದ್ಯದ ದಿನ ಮುಂಜಾನೆ 2 ಗಂಟೆಯವರೆಗೆ ರೈಲು ಸಂಚಾರ