ಗಂಡು ಮಗುವಿಗೆ ಜನ್ಮವಿತ್ತ ಅಜರೆಂಕಾ

By Suvarna Web DeskFirst Published Dec 20, 2016, 7:06 AM IST
Highlights

ಎರಡು ಬಾರಿ ಆಸ್ಟ್ರೇಲಿಯನ್ ಚಾಂಪಿಯನ್ ಎನಿಸಿರುವ ಅಜರೆಂಕಾ ಮಗುವಿನೊಂದಿಗಿರುವ ಬಾವಚಿತ್ರವನ್ನು ಸಾಮಾಜಿಕ ಜಾಲತಾಣವಾದ ಟ್ವೀಟರ್‌'ಗೆ ಅಪ್‌ಲೋಡ್ ಮಾಡಿದ್ದಾರೆ.

ಲಂಡನ್: ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ಬೇಲಾರಸ್‌'ನ ವಿಕ್ಟೋರಿಯಾ ಅಜರೆಂಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಅಜರೆಂಕಾ ಅವರಿಗೆ ಇದು ಮೊದಲ ಮಗುವಾಗಿದೆ ಎಂದು ಆಕೆಯ ಪತಿ ಬಿಲ್ಲೆ ಮೆಕ್‌'ಕೆಜ್ಯೂ ಹೇಳಿದ್ದಾ.

ಎರಡು ಬಾರಿ ಆಸ್ಟ್ರೇಲಿಯನ್ ಚಾಂಪಿಯನ್ ಎನಿಸಿರುವ ಅಜರೆಂಕಾ ಮಗುವಿನೊಂದಿಗಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣವಾದ ಟ್ವೀಟರ್‌'ಗೆ ಅಪ್‌ಲೋಡ್ ಮಾಡಿದ್ದಾರೆ.

‘‘ಇಂದು ನಾನು ಅತ್ಯಂತ ಕಠಿಣ ಯುದ್ಧವನ್ನು ಗೆದ್ದಿದ್ದೇನೆ. ನನಗೆ ಗಂಡು ಮಗು ಹುಟ್ಟಿದೆ. ಹೆಚ್ಚು ಸಂತಸವಾಗಿದೆ’’ ಎಂದು ಅಜರೆಂಕಾ ಟ್ವೀಟ್ ಮಾಡಿದ್ದಾರೆ.

 

Today I had my hardest fight and my very best victory! Our son was born healthy and happy! So thankful and blessed! Thank you 🙏🏻❤ pic.twitter.com/zsoFRivnvQ

— victoria azarenka (@vika7) 20 December 2016

ವಿಶ್ವದ ಇತರೆ ಟೆನಿಸ್ ಆಟಗಾರರು ಕೂಡ ಅಜರೆಂಕಾಗೆ ಶುಭಾಶಯ ಕೋರಿದ್ದಾರೆ.

 

click me!