ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿ ಕರ್ನಾಟಕದ ಕ್ರೀಡಾ ಸಾಧಕರು

By Kannadaprabha NewsFirst Published Jan 3, 2024, 10:52 AM IST
Highlights

ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಪ್ಯಾರಾ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ಗಳಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಹುದ್ದೆ ನೀಡುವುದಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಬೆಂಗಳೂರು(ಜ.03): ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ಸೇರಿದಂತೆ ಜಾಗತಿಕ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಸಾಧನೆ ಮಾಡಿದ್ದ ಕರ್ನಾಟಕದ ಅಥ್ಲೀಟ್‌ಗಳು ಸದ್ಯ ರಾಜ್ಯ ಸರ್ಕಾರದ ಹುದ್ದೆ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಅರ್ಹರ ಹೆಸರುಗಳನ್ನು ಸೂಚಿಸುವಂತೆ ಕ್ರೀಡಾ ಇಲಾಖೆಯಿಂದ ರಾಜ್ಯ ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದ್ದು, ಶೀಘ್ರದಲ್ಲೇ ನೇಮಕಾತಿ ನಡೆಯುವ ಸಾಧ್ಯತೆಯಿದೆ.

ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಪ್ಯಾರಾ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ಗಳಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಹುದ್ದೆ ನೀಡುವುದಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಇತ್ತೀಚೆಗಷ್ಟೇ ಕ್ರೀಡಾ ಇಲಾಖೆಯು ವಿವಿಧ ಸಂಸ್ಥೆಗಳಿಗೆ ಪತ್ರ ಬರೆದು ಕಳೆದ 8 ಆವೃತ್ತಿಗಳ ಕ್ರೀಡಾಕೂಟಗಳಲ್ಲಿ ಪದಕ ಸಾಧನೆ ಮಾಡಿದ ಅರ್ಹರ ಹೆಸರು ಸೂಚಿಸುವಂತೆ ಕೋರಿದೆ. ಶೀಘ್ರದಲ್ಲೇ ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌ ಸಂಸ್ಥೆಗಳು ಸಾಧಕರ ಹೆಸರನ್ನು ಕ್ರೀಡಾ ಇಲಾಖೆಗೆ ಸಲ್ಲಿಸುವ ನಿರೀಕ್ಷೆಯಿದೆ.

ಆಸೀಸ್ ಎದುರು ಭಾರತಕ್ಕೆ ಹ್ಯಾಟ್ರಿಕ್ ಸೋಲು, ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಕಾಂಗರೂ ಪಡೆ

ಪ್ಯಾರಾ ಅಥ್ಲೀಟ್‌ಗಳಾದ ಎಚ್‌.ಎನ್‌.ಗಿರೀಶ್‌, ರಕ್ಷಿತಾ ರಾಜು, ರಾಧಾ ವೆಂಕಟೇಶ್‌, ಶಕೀನಾ ಖಾತೂನ್‌ ಸೇರಿದಂತೆ ಹಲವರಿಗೆ ಹುದ್ದೆ ಸಿಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಜಾಗತಿಕ ಮಟ್ಟದ ಕ್ರೀಡಾಕೂಟಗಳ ಪದಕ ಸಾಧನೆ ಮಾಡಿದವರ ಹೆಸರುಗಳನ್ನು ಸರ್ಕಾರಿ ಹುದ್ದೆಗೆ ಸೂಚಿಸುವಂತೆ ಕ್ರೀಡಾ ಇಲಾಖೆ ಪತ್ರ ನೀಡಿದ ಬಗ್ಗೆ ನನೆ ಗೊತ್ತಿಲ್ಲ. ಪತ್ರ ಇನ್ನೂ ನಮ್ಮ ಕೈ ಸೇರಿಲ್ಲ. ಪತ್ರ ಬಂದ ಬಳಿಕ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ -ಟಿ.ಅನಂತರಾಜು ಕಾರ್ಯದರ್ಶಿ, ರಾಜ್ಯ ಒಲಿಂಪಿಕ್‌ ಸಂಸ್ಥೆ

ಸಾಧಕರ ಹೆಸರನ್ನು ಸೂಚಿಸುವಂತೆ ನಮಗೆ ಕ್ರೀಡಾ ಇಲಾಖೆಯಿಂದ ಪತ್ರ ಬಂದಿದೆ. ಆದರೆ ಸಾಧಕರ ಹೆಸರು ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ರಾಷ್ಟ್ರೀಯ ಸಮಿತಿ ನಮಗೆ ಸೂಚನೆ ನೀಡಬೇಕು. ಆ ಬಳಿಕ ಪರಿಶೀಲನೆ ನಡೆಸಿ, ಹೆಸರು ಸೂಚಿಸುತ್ತೇವೆ - ಮಹೇಶ್‌ ಗೌಡ, ಪ್ರಧಾನ ಕಾರ್ಯದರ್ಶಿ, ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ

ಹೊಸ ಮೈಂಡ್‌ಸೆಟ್‌ನೊಂದಿಗೆ ಕಣಕ್ಕಿಳಿಯಲು ವಿರಾಟ್ ರೆಡಿ..! 2024ರಲ್ಲೂ ಕೊಹ್ಲಿಗಾಗಿ ಕಾಯ್ತಿವೆ ದಾಖಲೆಗಳು..!

ಯಾವೆಲ್ಲಾ ಹುದ್ದೆ?

ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ, ಸ್ನಾತಕ ಪದವಿ ಪಡೆದಿರುವ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಿಗೆ ಗ್ರೂಪ್‌-ಎ, ಏಷ್ಯನ್‌ ಗೇಮ್ಸ್‌, ಪ್ಯಾರಾ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ಸಾಧಕರಿಗೆ ಗ್ರೂಪ್‌-ಬಿ ಹುದ್ದೆ ಲಭಿಸಲಿವೆ. ಇನ್ನು ಸ್ನಾತಕ ಪದವಿ ಪಡೆಯದಿರುವ ಕ್ರೀಡಾ ಸಾಧಕರು ಸಮೂಹ-ಸಿ, ಗ್ರೂಪ್‌-ಡಿ ಹುದ್ದೆ ಪಡೆಯಲಿದ್ದಾರೆ.
 

click me!