National Shooting Trials: ಮಹಿಳೆಯರ ಏರ್ ಪಿಸ್ತೂಲ್ T6 ಗೆದ್ದ ದಿವ್ಯಾ ಟಿಎಸ್‌

By Santosh NaikFirst Published Aug 31, 2022, 5:17 PM IST
Highlights

ಕರ್ನಾಟಕದ ದಿವ್ಯಾ ಟಿಎಸ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಟಿ6 ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್ ಅನ್ನು ಡಾ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಹರಿಯಾಣದ ರಿದಮ್ ಸಾಂಗ್ವಾನ್ ವಿರುದ್ಧ 16-12 ರಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು.

ಬೆಂಗಳೂರು (ಆ.31): ಕರ್ನಾಟಕ ರಾಜ್ಯದ ಬೆಂಗಳೂರಿನ ದಿವ್ಯಾ ಟಿ.ಎಸ್. ಅವರು ದೆಹಲಿಯಲ್ಲಿ  ಮಂಗಳವಾರ ತುಘಲಕಾಬಾದ್‌ನ ಡಾ. ಕರ್ಣಿ ಸಿಂಗ್ ರೇಂಜ್‌ನಲ್ಲಿ ಮುಕ್ತಾಯಗೊಂಡ ಆರನೇ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್‌ನಲ್ಲಿ ಮಹಿಳಾ ಏರ್ ಪಿಸ್ತೂಲ್‌ನಲ್ಲಿ ರಿದಮ್ ಸಾಂಗ್ವಾನ್ ಅವರನ್ನು ಸೋಲಿಸಿ ಚಿನ್ನದ ಪದಕ ಜಯಿಸಿದರು. ಇಲ್ಲಿನ ಕರ್ಣಿ ಸಿಂಗ್ ಶೂಟಿಂಗ್ ರೇಂಜ್ (ಡಿಕೆಎಸ್‌ಎಸ್‌ಆರ್)ನಲ್ಲಿ ನಡೆದ ಫೈನಲ್‌ನಲ್ಲಿ ದಿವ್ಯಾ 16-12ರಲ್ಲಿ ಹರಿಯಾಣದ ರಿದಮ್ ಸಾಂಗ್ವಾನ್ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದುಕೊಂಡರು. ಆದರೆ, ರಿದಮ್ ಸಂಗ್ವಾನ್‌ ಯೂತ್ ಮತ್ತು ಜೂನಿಯರ್ ಮಹಿಳೆಯರ ಏರ್ ಪಿಸ್ತೂಲ್ T6 ಟ್ರಯಲ್ಸ್ ಎರಡನ್ನೂ ಗೆದ್ದು ಡಬಲ್‌ ಮೆಡಲ್‌ ಸಾಧನೆ ಮಾಡಿದರು. ಜೂನಿಯರ್ ಮಹಿಳೆಯರ ಫೈನಲ್‌ನಲ್ಲಿ ರಿದಮ್ ಯುಪಿಯ ದಿವಾನ್ಶಿ ಧಾಮಾ ಅವರನ್ನು 16-8 ರಿಂದ ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದರೆ, ಯೂತ್ ಫೈನಲ್‌ನಲ್ಲಿ ಅವರು 16-2 ರಲ್ಲಿ ಯುಪಿ ಹುಡುಗಿ ಮಾನ್ಸಿ ಆನಂದ್ ಅವರನ್ನು ಸೋಲಿಸಿದರು. ಮಹಿಳೆಯರ ಏರ್ ಪಿಸ್ತೂಲ್‌ನಲ್ಲಿ ಉತ್ತರ ಪ್ರದೇಶದ ನೇಹಾ 582 ಅಂಕಗಳೊಂದಿಗೆ 283 ಶೂಟರ್‌ಗಳಿಂದ ಅರ್ಹತಾ ಹಂತದಲ್ಲಿ ಅಗ್ರಸ್ಥಾನ ಪಡೆದುಕೊಂಡರೆ, ದಿವ್ಯಾ ಮತ್ತು ರಿದಮ್ ಕ್ರಮವಾಗಿ 576 ಮತ್ತು 575 ರೊಂದಿಗೆ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಫೈನಲ್‌ನಲ್ಲಿ (Final) ದಿವ್ಯಾ ಟಿಎಸ್‌ 8-10 ರಿಂದ ಹಿನ್ನಡೆ ಸಾಧಿಸಿದ ನಂತರ, ದಿವ್ಯಾ ಮುಂದಿನ ಐದು ಶಾಟ್‌ಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದರು. ಕೊನೆಗೆ ವಿಜೇತರನ್ನು ನಿರ್ಧಾರ ಮಾಡಲು ಒಂದೇ ಶಾಟ್‌ನ ಗುರಿ ನಿಗದಿ ಮಾಡಲಾಗಿತ್ತು. ಇದರಲ್ಲಿ ದಿವ್ಯಾ ಟಿಎಸ್‌  (Divya TS) 10.3ಗೆ ಗುರಿ ಇಡುವ ಮೂಲಕ ಚಾಂಪಿಯನ್‌ ಆದರು.

Ganesh Chaturthi: ಗಣೇಶನೊಂದಿಗೆ ಡೇವಿಡ್‌ ವಾರ್ನರ್ ಪೋಸ್ಟ್‌, ಭಾರತದ ಅಭಿಮಾನಿಗಳು ಫುಲ್‌ ಖುಷ್‌!

ಏಷ್ಯನ್ ಗೇಮ್ಸ್‌ನಲ್ಲಿ (Asian games) ಪದಕ ವಿಜೇತೆ ಶ್ವೇತಾ ಸಿಂಗ್‌ಗಿಂತ ಮುಂದಿರುವ ಅನುರ್ದಹಾ ದೇವಿ ಮೂರನೇ ಸ್ಥಾನ ಪಡೆದುಕೊಂಡರು. ಅರ್ಹತಾ ಟಾಪರ್ ನೇಹಾ ತೋಮರ್ (582) ಅವರು ಹರ್ನವ್‌ದೀಪ್ ಕೌರ್ ಅವರನ್ನು 0.4 ಪಾಯಿಂಟ್‌ಗಳಿಂದ ಸೋಲಿಸಿ ಐದನೇ ಸ್ಥಾನ ಪಡೆದರು. ಫೈನಲ್‌ನ ಪ್ರತಿ ಶಾಟ್‌ನಲ್ಲೂ ರಿದಮ್ (Ritham) ಉತ್ತಮ ನಿವರ್ಹಣೆ ತೋರುತ್ತಿದ್ದರು.  ಎಲ್ಲಾ ಈವೆಂಟ್‌ಗಳಲ್ಲಿ ಸ್ಪರ್ಧಿಸುವಂತೆ'', 10 ಮೀ ಮತ್ತು 25 ಮೀ ಈವೆಂಟ್‌ಗಳಲ್ಲಿ ತನ್ನ ಒಟ್ಟಾರೆ ಪ್ರದರ್ಶನದಿಂದ ಸಾಕಷ್ಟು ಸಂತೋಷವಾಗಿದೆ ಎಂದು ರಿದಮ್ ಹೇಳಿದರು.

Asia Cup 2022: ಪಾಕ್‌ ವೇಗಿ ರೌಫ್‌ಗೆ ಆಟೋಗ್ರಾಫ್ ಜೆರ್ಸಿ ಗಿಫ್ಟ್‌ ನೀಡಿದ ವಿರಾಟ್ ಕೊಹ್ಲಿ..!

ಫಲಿತಾಂಶಗಳು: 10ಮೀ ಏರ್ ಪಿಸ್ತೂಲ್: ಮಹಿಳೆಯರು: 1. ದಿವ್ಯಾ ಟಿ.ಎಸ್. 16 (249.4) 578; 2. ರಿದಮ್ ಸಾಂಗ್ವಾನ್ 12 (246.7) 576; 3. ಅನುರಾಧಾ ದೇವಿ 246.6 (574); 4. ಶ್ವೇತಾ ಸಿಂಗ್ 243.8 (575).
 

click me!