ವಿನಯ್ ಕುಮಾರ್ ಬಳಿಕ ಮತ್ತೊರ್ವ ಕ್ರಿಕೆಟಿಗ ಕರ್ನಾಟಕಕ್ಕೆ ಗುಡ್‌ಬೈ!

By Web Desk  |  First Published Sep 1, 2019, 3:51 PM IST

ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಮುಂದಿನ ಆವೃತ್ತಿಯಲ್ಲಿ ಪುದುಚೇರಿ ತಂಡದ ಪರ ಆಡಲಿದ್ದಾರೆ. ವಿನಯ್ ಕರ್ನಾಟಕ ತೊರೆದ ಬೆನ್ನಲ್ಲೇ ಇದೀಗ ಮತ್ತೊರ್ವ ಆಲ್ರೌಂಡರ್ ತವರಿಗೆ ಗುಡ್ ಬೈ ಹೇಳುತ್ತಿದ್ದಾರೆ.


ಬೆಂಗಳೂರು(ಸೆ.01): ಕರ್ನಾಟಕ ತಂಡದಿಂದ ಹಿರಿಯ ಕ್ರಿಕೆಟಿಗರು ವಲಸೆ ಹೋಗುತ್ತಿರುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಕರ್ನಾಟಕವನ್ನು ಚಾಂಪಿಯನ್ ತಂಡವನ್ನಾಡಿ ಮಾಡಿದ ನಾಯಕ ವಿನಯ್ ಕುಮಾರ್, ತವರಿಗೆ ಗುಡ್‌ಬೈ ಹೇಳಿ ಪುದುಚೇರಿ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊರ್ವ ಕ್ರಿಕೆಟಿಗ ಕರ್ನಾಟಕಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಕ್ರಿಕೆಟ್‌ಗೆ ವಿನಯ್‌ ಕುಮಾರ್ ಗುಡ್‌ಬೈ!

Latest Videos

undefined

ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಇದೀಗ ನಾಗಾಲ್ಯಾಂಡ್ ಸೇರಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ NOC(non objection certificate)ಪಡೆದುಕೊಂಡಿರುವ ಬಿನ್ನಿ ಶೀಘ್ರದಲ್ಲೇ ಅಧೀಕೃತ ಪ್ರಕಟಣೆ ಹೊರಡಿಸಲಿದ್ದಾರೆ.

ಇದನ್ನೂ ಓದಿ: ಮಯಾಂತಿ ಲ್ಯಾಂಗರ್-ಸ್ಟುವರ್ಟ್ ಬಿನ್ನಿ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

ಪ್ರಸಕ್ತ ಆವೃತ್ತಿಯಲ್ಲಿ ಬಿನ್ನಿ, ನಾಗಾಲ್ಯಾಂಡ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಸೆಪ್ಟೆಂಬರ್ 10 ರಂದು ಸ್ಟುವರ್ಟ್ ಬಿನ್ನಿ ನಾಗಾಲ್ಯಾಂಡ್ ಪ್ರಿ ಸೀಸನ್ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದಿಂದ ಸ್ಟುವರ್ಟ್ ಬಿನ್ನಿ, ಮಹಾರಾಷ್ಟ್ರದಿಂದ ಯೋಗೇಶ್ ಟಕವಾಲೆ ಹಾಗೂ ಶ್ರೀಕಾಂತ್ ಮುಂಡೆ ನಾಗಾಲ್ಯಾಂಡ್ ತಂಡ ಸೇರಿಕೊಳ್ಳಲಿದ್ದಾರೆ. ಅನನುಭವಿ ತಂಡವಾಗಿರುವ ನ್ಯಾಗಾಲ್ಯಾಂಡ್ ಇದೀಗ ಸ್ಟಾರ್ ಕ್ರಿಕೆಟಿಗರ ಸೇರ್ಪಡೆಯಿಂದ ಬಲಿಷ್ಠ ತಂಡವಾಗಿ ಮಾರ್ಪಟ್ಟಿದೆ.

ಕರ್ನಾಟಕ ಹಿರಿಯ ಕ್ರಿಕೆಟಿಗ ಸಿಎಂ ಗೌತಮ್ ಕೂಡ ಇತರ ರಾಜ್ಯದ ಪರ ಆಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಛೆಗೆ NOCಗಾಗಿ ಅರ್ಜಿ ಸಲ್ಲಿಸಿದ್ದಾರೆ.

click me!