ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಶ್ವಿನ್ ಸೇರ್ಪಡೆಯಾದರೆ ಸಂತೋಷ ಎಂದ ಗಂಗೂಲಿ

By Web Desk  |  First Published Sep 1, 2019, 2:13 PM IST

ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿಸಿಕೊಳ್ಳಲು ಇಷ್ಟಪಡುತ್ತೇವೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಮೂಲಕ ಅಶ್ವಿನ್ ಡೆಲ್ಲಿ ಸೇರ್ಪಡೆ ಬಹುತೇಕ ಖಚಿತವಾಗಿದೆ.


ನವದೆಹಲಿ[ಸೆ.01]: ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ರವಿಚಂದ್ರನ್ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿಸಿಕೊಳ್ಳಲು ಸಂತಸಪಡುತ್ತೇವೆ ಎಂದು ಡೆಲ್ಲಿ ತಂಡದ ಸಲಹೆಗಾರ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಅಶ್ವಿನ್‌ಗೆ ಮತ್ತೊಂದು ಶಾಕ್, ಕನ್ನಡಿಗ KL ರಾಹುಲ್‌ಗೆ ಜಾಕ್‌ಪಾಟ್..?

Tap to resize

Latest Videos

undefined

12ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕರಾಗಿದ್ದ ಅಶ್ವಿನ್’ರನ್ನು ಇತ್ತೀಚೆಗಷ್ಟೇ ನಾಯಕತ್ವ ಪಟ್ಟದಿಂದ ಕೆಳಗಿಳಿಸಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಬದಲಿ ಆಟಗಾರನ ರೂಪದಲ್ಲಿ ಅಶ್ವಿನ್’ರನ್ನು ಇನ್ನೊಂದು ತಂಡಕ್ಕೆ ಬಿಟ್ಟುಕೊಡಲು ಸಿದ್ದವಿರುವುದಾಗಿಯೂ ತಿಳಿಸಿತ್ತು. ಕಳೆದೆರಡು ಆವೃತ್ತಿಯಲ್ಲಿ ಪಂಜಾಬ್ ಪರ ಕಣಕ್ಕಿಳಿದಿದ್ದ ಅಶ್ವಿನ್ 28 ಪಂದ್ಯಗಳನ್ನಾಡಿ, 28 ವಿಕೆಟ್ ಕಬಳಿಸಿದ್ದರು. ಇನ್ನು ಬ್ಯಾಟಿಂಗ್’ನಲ್ಲಿ 146 ರನ್ ಬಾರಿಸಿದ್ದಾರೆ. 

ಸೌರವ್ ಗಂಗೂಲಿ ದಾಖಲೆ ಮುರಿದ ವಿರಾಟ್!

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಅಶ್ವಿನ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಅಶ್ವಿನ್ ಎರಡು ಪಂದ್ಯಗಳಲ್ಲೂ ಬೆಂಚ್ ಕಾಯಿಸಿದ್ದು, ರವೀಂದ್ರ ಜಡೇಜಾಗೆ ತಂಡದಲ್ಲಿ ತಂಡದಲ್ಲಿ ಸ್ಥಾನ ನೀಡಲಾಗಿದೆ. 
 

click me!