ಎಮರ್ಜಿಂಗ್‌ ಏಷ್ಯಾಕಪ್‌ ಕ್ರಿಕೆಟ್ : ಭಾರತ ತಂಡಕ್ಕೆ ಕನ್ನಡಿಗ ಶರತ್‌ ನಾಯಕ!

Published : Oct 01, 2019, 11:22 AM IST
ಎಮರ್ಜಿಂಗ್‌ ಏಷ್ಯಾಕಪ್‌ ಕ್ರಿಕೆಟ್ : ಭಾರತ ತಂಡಕ್ಕೆ ಕನ್ನಡಿಗ ಶರತ್‌ ನಾಯಕ!

ಸಾರಾಂಶ

ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟಿಸಲಾಗಿದೆ. ವಿಶೇಷ ಅಂದರೆ ಕನ್ನಡಿಗ ಶರತ್ ಭಾರತ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬಿಸಿಸಿಐ ಪ್ರಕಟಿಸಿರುವ ತಂಡದ ವಿವರ ಇಲ್ಲಿದೆ.

ನವದೆಹಲಿ(ಅ.01): ಮುಂಬರುವ ಉದಯೋನ್ಮುಖ (ಎಮರ್ಜಿಂಗ್‌) ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡದ ನೇತೃತ್ವವನ್ನು ಕರ್ನಾಟಕದ ಬಿ.ಆರ್‌. ಶರತ್‌ ನಿರ್ವಹಿಸುತ್ತಿದ್ದಾರೆ. 14 ಆಟಗಾರರ ತಂಡವನ್ನು ಸೋಮವಾರ ಮುಂಬೈನಲ್ಲಿ ಪ್ರಕಟಿಸಲಾಗಿದೆ. ಭಾರತ ಕಿರಿಯರ ತಂಡದಲ್ಲಿ ಶರತ್‌ ಏಕೈಕ ಕನ್ನಡಿಗ ಎನಿಸಿದ್ದಾರೆ.

 ಇದನ್ನೂ ಓದಿ: ದುರಾಡಳಿತ ವಿರುದ್ಧ ಬ್ಯಾಟ್ ಬೀಸಿ! ರಾಜಕೀಯ ಆಯ್ತು, ಕ್ರಿಕೆಟ್‌ಗೂ ಚುನಾವಣೆ ಬಿಸಿ

ನವೆಂಬರ್‌ನಿಂದ ಟೂರ್ನಿ ಆರಂಭವಾಗಲಿದ್ದು, ಎಲ್ಲಾ ಪಂದ್ಯಗಳು ಬಾಂಗ್ಲಾದೇಶದಲ್ಲಿ ನಡೆಯಲಿವೆ. ಗಾಯದಿಂದ ಚೇತರಿಸಿಕೊಂಡು 19 ತಿಂಗಳು ಬಳಿಕ ಯುವ ವೇಗಿ ಕಮಲೇಶ್‌ ನಾಗರಕೋಟಿ ಭಾರತ ಕಿರಿಯರ ತಂಡಕ್ಕೆ ಮರಳಿದ್ದಾರೆ.

 ಇದನ್ನೂ ಓದಿ: ಏಷ್ಯಾಕಪ್ 2020: ಬಿಸಿಸಿಐಗೆ ಪಾಕ್‌ ಗಡು​ವು

ತಂಡ: ಶರತ್‌ ಬಿ.ಆರ್‌. (ನಾಯಕ), ವಿನಾಯಕ ಗುಪ್ತಾ, ಚಿನ್ಮಯ್‌ ಸುತಾರ್‌, ಯಶ್‌ ರಾಥೋಡ್‌, ಆರ್ಮನ್‌ ಜಾಫರ್‌, ಸನ್ವೀರ್‌ ಸಿಂಗ್‌, ಕಮಲೇಶ್‌, ಹೃತಿಕ್‌, ಎಸ್‌.ಎ. ದೇಸಾಯಿ, ಆಶ್‌ರ್‍ದೀಪ್‌ ಸಿಂಗ್‌, ಎಸ್‌.ಆರ್‌. ದುಬೆ, ಸೂರಜ್‌, ರೇಖಾಡೆ, ಕುಲ್ದೀಪ್‌ ಯಾದವ್‌.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ
ಅಬ್ಬಬ್ಬಾ..! ಲಿಯೋನೆಲ್ ಮೆಸ್ಸಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಒಂದು ದಿನದ ಚಾರ್ಜ್ ಇಷ್ಟೊಂದಾ?