ಪಾಕ್ ಪಂದ್ಯ ಬಹಿಷ್ಕಾರ - ಮೌನ ಮುರಿದ ಕಪಿಲ್ ದೇವ್!

By Web Desk  |  First Published Feb 26, 2019, 5:20 PM IST

ಪಾಕ್ ಭಯೋತ್ಪಾದನಾ ಸಂಘಟನೆಗಳು ನಡೆಸಿದ ಪುಲ್ವಾಮಾ ದಾಳಿಗೆ ಭಾರತೀಯ ಸೆನೆ ತಕ್ಕ ಪಾಠ ಕಲಿಸಿದೆ. ಇದೀಗ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸಿ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಕಪಿಲ್ ದೇವ್ ಮೌನ ಮುರಿದಿದ್ದಾರೆ.
 


ನವದೆಹಲಿ(ಫೆ.26): ಪುಲ್ವಾಮಾ ದಾಳಿಗೆ ಭಾರತ ವಾಯುಸೇನೆ ತಕ್ಕ ತಿರುಗೇಟು ನೀಡಿದೆ. ಗಡಿ ನಿಯಂತ್ರಣ  ರೇಖೆ ದಾಟಿ ಪಾಕಿಸ್ತಾನ ಪ್ರವೇಶಿಸಿದ ಭಾರತೀಯ ವಾಯುಸೇನೆ ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸಗೊಳಿಸಿದೆ. ಇದೀಗ ದೇಶದೆಲ್ಲಡೆ ಸಂಭ್ರಮಾಚರಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಪಾಕಿಸ್ತಾನ ವಿರುದ್ದ ವಿಶ್ವಕಪ್ ಪಂದ್ಯ ಬಹಿಷ್ಕಾರ ಕುರಿತು ಮೌನ ಮುರಿದಿದ್ದಾರೆ.

ಇದನ್ನೂ ಓದಿ: ಉಗ್ರರನ್ನು ಬೆಂಬಲಿಸುವ ಪಾಕ್ ತಂಡವನ್ನು ಬಹಿಷ್ಕರಿಸಿ: ವಿನೋದ್ ರಾಯ್

Tap to resize

Latest Videos

ಕ್ರೀಡಾಪಟು ಬಳಿ ಯಾವತ್ತೂ ಪಂದ್ಯ ಬಹಿಷ್ಕರಿಸುವಂತೆ ಆಗ್ರಹಿಸಬೇಡಿ. ಕ್ರೀಡಾಪಟುವಿಗೆ ಕ್ರೀಡೆ ಹೊರತು ಪಡಿಸಿದರೆ ಇನ್ನೇನು ಗೊತ್ತಿಲ್ಲ. ಹೀಗಾಗಿ ಯಾರಾದರು ಪಂದ್ಯ ಬಹಿಷ್ಕರಿಸಿ ಎಂದಾಗ ಕ್ರಿಕೆಟಿಗನಾಗಿ ಅದರ ನೋವು ನನಗೆ ಅರ್ಥವಾಗುತ್ತೆ ಎಂದು ಕಪಿಲ್ ಹೇಳಿದ್ದಾರೆ. 

ಇದನ್ನೂ ಓದಿ: ವಿಶ್ವಕಪ್ 2019: ಬದ್ಧವೈರಿ ಪಾಕ್‌ಗೆ 2 ಅಂಕ ನೀಡಲು ಇಷ್ಟಪಡೋದಿಲ್ಲ - ಸಚಿನ್

ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡುತ್ತಿದೆ ಹಾಗೂ ಮುಂದೆಯೂ ನೀಡಲಿದೆ. ಮೈದಾನದಲ್ಲಿ ನಾವು ಪಂದ್ಯ ಗೆಲ್ಲೋ ಮೂಲಕ ನಮ್ಮ ಸಾಮರ್ಥ್ಯ ತೋರಿಸಬೇಕಿದೆ ಎಂದು ಕಪಿಲ್ ಹೇಳಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ಕೂಡ ಪಾಕಿಸ್ತಾನ ವಿರುದ್ದದ ವಿಶ್ವಕಪ್ ಪಂದ್. ಬಹಿಷ್ಕರಿಸುವುದು ಸೂಕ್ತವಲ್ಲ ಎಂದಿದ್ದರು. 

click me!