ಇಂಡೋ-ಪಾಕ್ ವಿಶ್ವಕಪ್ ಪಂದ್ಯ: ಐಸಿಸಿ ತ್ರೈಮಾಸಿಕ ಸಭೆ ಮೇಲೆ ಎಲ್ಲರ ಚಿತ್ತ!

Published : Feb 26, 2019, 12:00 PM IST
ಇಂಡೋ-ಪಾಕ್ ವಿಶ್ವಕಪ್ ಪಂದ್ಯ: ಐಸಿಸಿ ತ್ರೈಮಾಸಿಕ ಸಭೆ ಮೇಲೆ ಎಲ್ಲರ ಚಿತ್ತ!

ಸಾರಾಂಶ

ಆರಂಭವಾಗಲಿರುವ ಐಸಿಸಿ ತ್ರೈಮಾಸಿಕ ಸಭೆಯಲ್ಲಿ ಪಾಕಿಸ್ತಾನವನ್ನು ಬಹಿಷ್ಕರಿಸುವ ಯಾವ ಪ್ರಸ್ತಾಪವೂ ಭಾರತದ ಮುಂದಿಲ್ಲ ಎಂದಿದ್ದಾರೆ. ಐಸಿಸಿಗೆ ಬರೆದ ಪತ್ರಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇಷ್ಟೇ ಅಲ್ಲ ಐಸಿಸಿಗೆ ಮತ್ತೊಂದು ರಾಷ್ಟ್ರವನ್ನು ಬಹಿಷ್ಕರಿಸುವ ಅಧಿಕಾರವಿಲ್ಲ.

ದುಬೈ(ಫೆ.26): ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ದೇಶಗಳನ್ನು ಕ್ರಿಕೆಟ್‌ನಿಂದಲೇ ದೂರವಿಡಬೇಕು ಎಂದು ಬಿಸಿಸಿಐ ಬರೆದಿದ್ದ ಪತ್ರಕ್ಕೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯಿಂದ ಮನ್ನಣೆ ಸಿಗುವ ಲಕ್ಷಣಗಳು ತೋರುತ್ತಿಲ್ಲ. ಬುಧವಾರದಿಂದ ಇಲ್ಲಿ ತ್ರೈಮಾಸಿಕ ಸಭೆ ಬುಧವಾರದಿಂದ ಆರಂಭಗೊಳ್ಳಲಿದ್ದು, ಪಾಕಿಸ್ತಾನವನ್ನು ಬಹಿಷ್ಕರಿಸುವ ಕುರಿತು ಪ್ರಸ್ತಾಪವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಐಸಿಸಿ ಕಾರ್ಯನಿರ್ವಹಣೆ ಬಗ್ಗೆ ಅರಿವಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕ್ ಮೇಲೆ ಬಾಂಬ್ ದಾಳಿ: ಸೆಹ್ವಾಗ್ ಟ್ವೀಟ್ ಅದ್ಬುತ!

‘ಯಾವುದೇ ಕ್ರಿಕೆಟ್‌ ಮಂಡಳಿಯನ್ನು ಮತ್ತೊಂದು ಮಂಡಳಿಯನ್ನು ಬಹಷ್ಕರಿಸುವಂತೆ ಕೇಳುವ ಪರಿಸ್ಥಿತಿಯಲ್ಲಿ ಐಸಿಸಿ ಇಲ್ಲ. ಆ ರೀತಿ ಮಾಡಲು ಅಧಿಕಾರಿವೂ ಇಲ್ಲ. ಇದೊಂದು ರಾಜತಾಂತ್ರಿಕ ಸಮಸ್ಯೆಯಾಗಿದ್ದು, ಸರ್ಕಾರ ಈ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ. ಸದಸ್ಯ ರಾಷ್ಟ್ರಗಳು ಯಾವುದೇ ಸಮಸ್ಯೆ ಕುರಿತು ಐಸಿಸಿ ಸಭೆಗಳಲ್ಲಿ ಚರ್ಚಿಸುವ ಹಕ್ಕು ಹೊಂದಿವೆ. ಆದರೆ ಅದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ’ ಎಂದು ಹಲವು ಐಸಿಸಿ ಸಭೆಗಳಲ್ಲಿ ಪಾಲ್ಗೊಂಡಿದ್ದ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಿಯರಿಗೆ ವಿಸಾ ನಿರಾಕರಣೆ - ಬೆಂಗಳೂರು ಸ್ನೂಕರ್ ಟೂರ್ನಿ ಮುಂದೂಡಿಕೆ!

ಸುರಕ್ಷತೆ ಕುರಿತು ವಿವರ: ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ಐಸಿಸಿಗೆ ಬರೆದಿದ್ದ ಪತ್ರದಲ್ಲಿ ವಿಶ್ವಕಪ್‌ ವೇಳೆ ಭಾರತೀಯ ಆಟಗಾರರಿಗೆ, ಅಧಿಕಾರಿಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಕೋರಿದ್ದರು. ಈ ಸಂಬಂಧ, ತ್ರೈಮಾಸಿಕ ಸಭೆಯಲ್ಲಿ ಐಸಿಸಿ ಭದ್ರತೆಗಾಗಿ ಕೈಗೊಳ್ಳಲಾಗುತ್ತಿರುವ ಕ್ರಮಗಳು, ಆಟಗಾರರ ಸುರಕ್ಷತೆಗೆ ಮಾಡುತ್ತಿರುವ ವ್ಯವಸ್ಥೆಗಳ ಕುರಿತು ಸಂಪೂರ್ಣ ವಿವರ ನೀಡಲಿದೆ ಎನ್ನಲಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!