ಕಂಠೀರವ ಕ್ರೀಡಾಂಗಣ ಅಥ್ಲೀಟ್‌ಗಳಿಗೆ ಮಾತ್ರ: ಮುತ್ತಪ್ಪ ರೈ

By Web DeskFirst Published Sep 20, 2018, 11:24 AM IST
Highlights

ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಮತ್ತು ಅಥ್ಲೆಟಿಕ್ಸ್ ಪದಾಧಿಕಾರಿಗಳ ಸಮ್ಮುಖದಲ್ಲಿ ಮುತ್ತಪ್ಪ ರೈ ಕೆಎಎನ 8ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. 

ಬೆಂಗಳೂರು[ಸೆ.20]: ರಾಜ್ಯದಲ್ಲಿ ಕ್ರೀಡೆಯ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಆಗುತ್ತಿರುವ ತೊಡಕನ್ನು ಮನಗಂಡು ಶೀಘ್ರದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ (ಕೆಎಎ) ನೂತನ ಅಧ್ಯಕ್ಷರಾದ ಎನ್. ಮುತ್ತಪ್ಪ ರೈ ಹೇಳಿದರು. 

ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಮತ್ತು ಅಥ್ಲೆಟಿಕ್ಸ್ ಪದಾಧಿಕಾರಿಗಳ ಸಮ್ಮುಖದಲ್ಲಿ ಮುತ್ತಪ್ಪ ರೈ ಕೆಎಎನ 8ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಆ ಬಳಿಕ ಮಾತನಾಡಿದ ಅವರು, ‘ಗ್ರಾಮೀಣಾ ಭಾಗದಿಂದ ಕ್ರೀಡೆಯನ್ನು ಪೋಷಿಸುವಂತಹ ಕಾರ್ಯ ಆಗಬೇಕಿದೆ. ಇಂತಹ ಕಾರ್ಯಕ್ರಮಗಳು ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ. ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಈ ಉದ್ದೇಶದಿಂದಾಗಿ ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಕೈಗೊಳ್ಳಲಿದ್ದೇವೆ. ಅಂತಾರಾಷ್ಟ್ರೀಯ ಅಥ್ಲೀಟ್‌ಗಳು, ಮಾಜಿ ಕೋಚ್ ಮತ್ತು ಕ್ರೀಡಾ ತಜ್ಞರೊಂದಿಗೆ ಸಮಾಲೋಚಿಸಿ ಕ್ರೀಡೆಯ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಇದೇ ವೇಳೆ ಕೆಎಎ ಹಿರಿಯ ಉಪಾಧ್ಯಕ್ಷರಾಗಿ ಮಹಾದೇವ್, ಉಪಾಧ್ಯಕ್ಷರಾಗಿ ಸದಾನಂದ ನಾಯಕ್, ಹಿರೇಮಠ್, ಸೋಮಶೇಖರ್, ಭಾರತಿ, ಕಾರ್ಯದರ್ಶಿಯಾಗಿ ರಾಜವೇಲು, ಜಂಟಿ ಕಾರ್ಯದರ್ಶಿಯಾಗಿ ಅಜಯ್ ಕುಮಾರ್, ಪ್ರಭಾಕರ್, ಕಲ್ಲೇಶ್, ಶ್ರೀನಿವಾಸ್ ಮತ್ತು ಖಜಾಂಚಿಯಾಗಿ ಸುನಿಲ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

click me!
Last Updated Sep 20, 2018, 12:21 PM IST
click me!