ಶ್ರೀಕಾಂತ್ ಡೆನ್ಮಾರ್ಕ್‌ನ ರಸ್ಮಸ್ ಗೆಮ್ಕೆ ವಿರುದ್ಧ 21-09, 21-19 ಗೇಮ್‌ಗಳಲ್ಲಿ ಜಯ ಪಡೆದರು. ಪ್ರಿ ಕ್ವಾರ್ಟರ್‌ನಲ್ಲಿ ಅವರು ಥಾಯ್ಲೆಂಡ್‌ನ ಸಪ್ಪನ್ಯು ಅವಿಹಿಂಗ್ಸಾನನ್ ವಿರುದ್ಧ ಸೆಣಸಲಿದ್ದಾರೆ.
ಚಾಂಗಜೌ(ಚೀನಾ): ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಭಾರತ ಮಿಶ್ರ ಫಲ ಅನುಭವಿಸಿತು. ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್ ಆರಂಭಿಕ ಸುತ್ತಿನಲ್ಲಿ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಎಚ್.ಎಸ್.ಪ್ರಣಯ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.
ಬುಧವಾರ, ಶ್ರೀಕಾಂತ್ ಡೆನ್ಮಾರ್ಕ್‌ನ ರಸ್ಮಸ್ ಗೆಮ್ಕೆ ವಿರುದ್ಧ 21-09, 21-19 ಗೇಮ್‌ಗಳಲ್ಲಿ ಜಯ ಪಡೆದರು. ಪ್ರಿ ಕ್ವಾರ್ಟರ್‌ನಲ್ಲಿ ಅವರು ಥಾಯ್ಲೆಂಡ್‌ನ ಸಪ್ಪನ್ಯು ಅವಿಹಿಂಗ್ಸಾನನ್ ವಿರುದ್ಧ ಸೆಣಸಲಿದ್ದಾರೆ. ಪ್ರಣಯ್, ಹಾಂಕಾಂಗ್‌ನ ಲಾಂಗ್ ಅಂಗೂಸ್ ಎದುರು 16-21, 12-21 ಗೇಮ್‌ಗಳಲ್ಲಿ ಸೋಲುಂಡರು.
ಅಶ್ವಿನಿ ಜೋಡಿಗೆ ಜಯ: ಮಿಶ್ರ ಡಬಲ್ಸ್ ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಸಾಯಿರಾಜ್ ಜೋಡಿ, ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ವಿಜೇತ ಇಂಗ್ಲೆಂಡ್‌ನ ಮಾರ್ಕಸ್ ಎಲ್ಲಿಸ್ ಮತ್ತು ಲೌರೆನ್ ಸ್ಮಿತ್ ಜೋಡಿ ವಿರುದ್ಧ 21-13, 20-22, 21-17 ಗೇಮ್‌ಗಳಲ್ಲಿ ಗೆಲುವು ಸಾಧಿಸಿತು. ಪ್ರಿ ಕ್ವಾರ್ಟರ್‌ನಲ್ಲಿ ಭಾರತೀಯ ಜೋಡಿ, ಚೀನಾದ ಜೆಂಗ್ ಸಿವೆಯಿ ಮತ್ತು ಹುಂಗ್ ಯಕಿಯಾಂಗ್ ಜೋಡಿಯನ್ನು ಎದುರಿಸಲಿದೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ ಮಲೇಷ್ಯಾ ಜೋಡಿ ಎದುರು ಸೋತು ಹೊರಬಿತ್ತು. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ-ಸಿಕ್ಕಿ ರೆಡ್ಡಿ ಜೋಡಿ ಅಭಿಯಾನ ಸಹ ಅಂತ್ಯಗೊಂಡಿತು.