
ಚೆನ್ನೈ(ಜು.20): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹ ಮಾಲೀಕತ್ವದ ಪ್ರೊ ಕಬಡ್ಡಿ ತಂಡ 'ತಮಿಳ್ ತಲೈವಾಸ್'ನ ರಾಯಭಾರಿಯಾಗಿ ಖ್ಯಾತ ನಟ ಕಮಲ್ ಹಾಸನ್ ನೇಮಕಗೊಂಡಿದ್ದಾರೆ. ಇದರೊಂದಿಗೆ ಪ್ರೊ ಕಬಡ್ಡಿ 5ನೇ ಆವೃತ್ತಿಗೆ ಮತ್ತಷ್ಟು ತಾರಾ ಮೆರಗು ಸಿಕ್ಕಂತಾಗಿದೆ.
ತಮಿಳ್ ತಲೈವಾಸ್ ತಂಡದ ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಕಮಲ್, 'ಕಬಡ್ಡಿ ಆಟದೊಂದಿಗೆ ನನ್ನನ್ನು ಗುರುತಿಸಿಕೊಂಡಿರುವುದು ಅತ್ಯಂತ ಗೌರವದ ಸಂಗತಿ. ನನ್ನನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ತಂಡದ ಮಾಲೀಕರಿಗೆ ಅಭಾರಿಯಾಗಿದ್ದೇನೆ' ಎಂದಿದ್ದಾರೆ.
ಇನ್ನು ತಂಡದ ಜೆರ್ಸಿ ಬಿಡುಗಡೆ ಸಮಾರಂಭ ಇಂದು ಚೆನ್ನೈನಲ್ಲಿ ನಡೆಯಲಿದ್ದು, ಸಚಿನ್ ತೆಂಡೂಲ್ಕರ್ ಅವರೊಂದಿಗೆ ತೆಲಗು ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್ ತೇಜ ಪಾಲ್ಗೊಳ್ಳಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.