ಲಂಕಾ ಸರಣಿಗೆ ರಾಹುಲ್ ನ್ಯೂ ಹೇರ್ ಸ್ಟೈಲ್

Published : Jul 20, 2017, 03:51 PM ISTUpdated : Apr 11, 2018, 01:10 PM IST
ಲಂಕಾ ಸರಣಿಗೆ ರಾಹುಲ್ ನ್ಯೂ ಹೇರ್ ಸ್ಟೈಲ್

ಸಾರಾಂಶ

ಗಾಯದ ಸಮಸ್ಯೆಯಿಂದ ಐಪಿಎಲ್ ಹಾಗೂ ಚಾಂಪಿಯನ್ಸ್ ಟ್ರೋಫಿ ಮಿಸ್ ಮಾಡಿಕೊಂಡಿದ್ದ ರಾಹುಲ್, ಲಂಕಾ ಸರಣಿ ಮೂಲಕ ಹೊಸ ಗೆಟಪ್'ನಲ್ಲಿ ಮಿಂಚು ಹರಿಸಲು ಮುಂದಾಗಿದೆ.

ಬೆಂಗಳೂರು(ಜು.20): ಟೀಂ ಇಂಡಿಯಾದ ಪ್ರತಿಭಾನ್ವಿತ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಸಾಕಷ್ಟು ವಿಶ್ರಾಂತಿಯ ಬಳಿಕ ಶ್ರೀಲಂಕಾ ನೆಲದಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ಸಾದಾ-ಸೀದ ಸಿಂಪಲ್ ಹುಡುಗನಾಗಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಕಾಲಿಟ್ಟ ಕನ್ನಡಿಗ ಕೆ.ಎಲ್ ರಾಹುಲ್, ಟೀಂ ಇಂಡಿಯಾದಲ್ಲಿ ಭದ್ರವಾಗಿ ಬೇರೂರುತ್ತಿದ್ದಂತೆ ತಮ್ಮ ಲುಕ್ ಕೂಡಾ ಬದಲಾಯಿಸಿಕೊಳ್ಳುತ್ತಿದ್ದಾರೆ. ಅದಕ್ಕೀಗ ಹೊಸ ಸೇರ್ಪಡೆಯೆಂಬಂತೆ ಲಂಕಾ ಸರಣಿಗೆ ವಿಚಿತ್ರ ಹಾಗೂ ವಿನೂತನ ಹೇರ್'ಸ್ಟೈಲ್ ಮಾಡಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.

ಗಾಯದ ಸಮಸ್ಯೆಯಿಂದ ಐಪಿಎಲ್ ಹಾಗೂ ಚಾಂಪಿಯನ್ಸ್ ಟ್ರೋಫಿ ಮಿಸ್ ಮಾಡಿಕೊಂಡಿದ್ದ ರಾಹುಲ್, ಲಂಕಾ ಸರಣಿ ಮೂಲಕ ಹೊಸ ಗೆಟಪ್'ನಲ್ಲಿ ಮಿಂಚು ಹರಿಸಲು ಮುಂದಾಗಿದೆ.

ಹೇಗಿದೆ ರಾಹುಲ್ ನ್ಯೂ ಹೇರ್ ಸ್ಟೈಲ್.. ನೋಡಿ ನೀವೆ ಕಣ್ತುಂಬಿಕೊಳ್ಳಿ..

ರಾಹುಲ್ ಈ ಮೊದಲು ವಿಚಿತ್ರ ಟ್ಯಾಟೂ ಹಾಗೂ ಹೇರ್ ಸ್ಟೈಲ್ ಮೂಲಕ ಗಮನ ಸೆಳೆದಿದ್ದರು.  

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ind vs pak ಪಂದ್ಯದಲ್ಲಿ ಭಾವನಾತ್ಮಕ ಕ್ಷಣ: ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ VIDEO
Ind Vs Pak: ನಿಮ್ಮ ವಯಸ್ಸೆಷ್ಟು? ಎಂದು ಕೇಳಿದ ಪಾಕಿಸ್ತಾನಿ ಫ್ಯಾನ್‌! ಭಾರತೀಯ ಅಜ್ಜಿ ಕೊಟ್ಟ ಖಡಕ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ!