ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಈ ಟೂರ್ನಿಯನ್ನು ಆಯೋಜಿಸಿದೆ. ಪಂದ್ಯಾವಳಿಯಲ್ಲಿ ಏಷ್ಯಾದ 4 ತಂಡಗಳ ಜತೆ ಕೀನ್ಯಾ ಹಾಗೂ ಅರ್ಜೆಂಟೀನಾ ಕಣಕ್ಕಿಳಿಯಲಿದೆ. 6 ತಂಡಗಳನ್ನು ತಲಾ 3ರಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ ಹಾಗೂ ಕೀನ್ಯಾ ‘ಎ’ ಗುಂಪಿನಲ್ಲಿದ್ದರೆ, ‘ಬಿ’ ಗುಂಪಿನಲ್ಲಿ ಇರಾನ್, ಕೊರಿಯಾ ಹಾಗೂ ಅರ್ಜೆಂಟೀನಾ ಸ್ಥಾನ ಪಡೆದಿವೆ. ತಂಡಗಳು ತಲಾ 2 ಬಾರಿ ಗುಂಪು ಹಂತದಲ್ಲಿ ಮುಖಾಮುಖಿಯಾಗಲಿವೆ.
ದುಬೈ[ಜೂ.22]: ಕಬಡ್ಡಿ ದೈತ್ಯ ಭಾರತ ಇಂದಿನಿಂದ ಆರಂಭಗೊಳ್ಳಲಿರುವ ‘ಕಬಡ್ಡಿ ಮಾಸ್ಟರ್ಸ್ ದುಬೈ 2018’ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಈ ಪಂದ್ಯಾವಳಿಯಲ್ಲಿ ಭಾರತ, ಪಾಕಿಸ್ತಾನ, ಇರಾನ್ ಹಾಗೂ ಕೊರಿಯಾಗೆ ಆಗಸ್ಟ್ 18ರಿಂದ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಸಿದ್ಧತೆ ನಡೆಸಲು ಅನುಕೂಲ ಮಾಡಿಕೊಡಲಿದೆ.
ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಈ ಟೂರ್ನಿಯನ್ನು ಆಯೋಜಿಸಿದೆ. ಪಂದ್ಯಾವಳಿಯಲ್ಲಿ ಏಷ್ಯಾದ 4 ತಂಡಗಳ ಜತೆ ಕೀನ್ಯಾ ಹಾಗೂ ಅರ್ಜೆಂಟೀನಾ ಕಣಕ್ಕಿಳಿಯಲಿದೆ. 6 ತಂಡಗಳನ್ನು ತಲಾ 3ರಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ ಹಾಗೂ ಕೀನ್ಯಾ ‘ಎ’ ಗುಂಪಿನಲ್ಲಿದ್ದರೆ, ‘ಬಿ’ ಗುಂಪಿನಲ್ಲಿ ಇರಾನ್, ಕೊರಿಯಾ ಹಾಗೂ ಅರ್ಜೆಂಟೀನಾ ಸ್ಥಾನ ಪಡೆದಿವೆ. ತಂಡಗಳು ತಲಾ 2 ಬಾರಿ ಗುಂಪು ಹಂತದಲ್ಲಿ ಮುಖಾಮುಖಿಯಾಗಲಿವೆ. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜೂ.22ರಿಂದ 27ರವರೆಗೂ ಗುಂಪು ಹಂತದ ಪಂದ್ಯಗಳು ನಡೆಯಲಿದ್ದು, ಜೂ.29ಕ್ಕೆ ಸೆಮಿಫೈನಲ್ ಪಂದ್ಯಗಳು, ಜೂ.30ಕ್ಕೆ ಫೈನಲ್ ನಡೆಯಲಿದೆ.
ಇದನ್ನು ಓದಿ: ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಗೆ ಭಾರತ ತಂಡ ಪ್ರಕಟ
ಬಲಿಷ್ಠವಾಗಿದೆ ಭಾರತ ತಂಡ: ಅನೂಪ್ ಕುಮಾರ್ ಅನುಪಸ್ಥಿತಿಯಲ್ಲಿ ತಾರಾ ರೈಡರ್ ಅಜಯ್ ಠಾಕೂರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ರಾಹುಲ್ ಚೌಧರಿ, ಪ್ರದೀಪ್ ನರ್ವಾಲ್, ರೋಹಿತ್ ಕುಮಾರ್, ರಿಶಾಂಕ್ ದೇವಾಡಿಗ ಹಾಗೂ ಮೋನು ಗೋಯತ್‌ರಂತಹ ಪ್ರಚಂಡ ರೈಡರ್‌ಗಳ ಬಲ ಭಾರತ ತಂಡಕ್ಕಿದೆ. ದೀಪಕ್ ಹೂಡಾ, ಮಂಜೀತ್ ಚಿಲ್ಲಾರ್, ಸುರೀಂದರ್ ನಾಡಾ, ಗಿರೀಶ್ ಎರ್ನಾಕ್‌ರಂತಹ ಅನುಭವಿ ಆಲ್ರೌಂಡರ್ ಹಾಗೂ ಡಿಫೆಂಡರ್‌ಗಳು ಭಾರತ ತಂಡ ಸಮತೋಲನದಿಂದ ಕೂಡಲು ಕಾರಣರಾಗಿದ್ದಾರೆ. ಭಾರತ ತಂಡಕ್ಕೆ ಶ್ರೀನಿವಾಸ ರೆಡ್ಡಿ ಕೋಚ್ ಆಗಿದ್ದು, ಏಷ್ಯನ್ ಗೇಮ್ಸ್’ಗೂ ಮುನ್ನ ಈ ಟೂರ್ನಿ ಸೆಮಿಫೈನಲ್ ಇದ್ದಂತೆ ಎಂದಿದ್ದಾರೆ.
ಭಾರತ, ಕೊರಿಯಾದಿಂದ ಪ್ರಬಲ ಪೈಪೋಟಿ ನಿರೀಕ್ಷೆ ಮಾಡುತ್ತಿದೆ. ಪ್ರತಿ ದಿನ 2 ಪಂದ್ಯಗಳು ನಡೆಯಲಿದ್ದು, ಇಂದು 2ನೇ ಪಂದ್ಯದಲ್ಲಿ ಇರಾನ್ ಹಾಗೂ ಕೊರಿಯಾ ತಂಡಗಳು ಸೆಣಸಾಡಲಿವೆ.
ಪಂದ್ಯ ಆರಂಭ: ಭಾರತ-ಪಾಕಿಸ್ತಾನ, ರಾತ್ರಿ 8ಕ್ಕೆ. ಇರಾನ್-ಕೊರಿಯಾ, ರಾತ್ರಿ 9ಕ್ಕೆ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2