ಅರ್ಜೆಂಟೀನಾಗೆ ಶಾಕ್ ಕೊಟ್ಟ ಕ್ರೊವೇಷಿಯಾ; ಮೆಸ್ಸಿ ಮತ್ತೆ ಫೇಲ್

First Published Jun 22, 2018, 10:37 AM IST
Highlights

ಪಂದ್ಯದ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಅರ್ಜೆಂಟೀನಾ, ಕ್ರೊವೇಷಿಯಾದ ಆಟಗಾರರನ್ನು ನಿಂತ್ರಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು. ನಂತರದ ಅವಧಿಯಲ್ಲಿ ಆಕ್ರಮಣಾಕಾರಿ ಆಟಕ್ಕೆ ಮುಂದಾದರೂ ಗೋಲುಗಳಿಸಲು ಸಾಧ್ಯವಾಗಲಿಲ್ಲ. 

ನಿಜ್ನಿ[ಜೂ.22]: ದ್ವಿತಿಯಾರ್ಧದಲ್ಲಿ ರೆಬಿಕ್, ಮೊಡ್ರಿಕ್ ಮತ್ತು ರಾಕ್ಟಿಕ್ ದಾಖಲಿಸಿದ ಅದ್ಭುತ ಗೋಲುಗಳ ನೆರವಿನಿಂದ ಕ್ರೊವೇಷಿಯಾ, ’ಡಿ’ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 3-0 ಗೋಲುಗಳಿಂದ ಗೆಲುವು ದಾಖಲಿಸಿತು. ಈ ಜಯದೊಂದಿಗೆ 6 ಅಂಕ ಗಳಿಸಿದ ಕ್ರೊವೇಷಿಯಾ ಪ್ರಿ ಕ್ವಾರ್ಟರ್ ಹಂತಕ್ಕೇರಿತು. ಈ ಸೋಲಿನೊಂದಿಗೆ ಅರ್ಜೆಂಟೀನಾ ನಾಕೌಟ್ ಹಾದಿ ದುರ್ಗಮಗೊಂಡಿದೆ.  

ಪಂದ್ಯದ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಅರ್ಜೆಂಟೀನಾ, ಕ್ರೊವೇಷಿಯಾದ ಆಟಗಾರರನ್ನು ನಿಂತ್ರಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು. ನಂತರದ ಅವಧಿಯಲ್ಲಿ ಆಕ್ರಮಣಾಕಾರಿ ಆಟಕ್ಕೆ ಮುಂದಾದರೂ ಗೋಲುಗಳಿಸಲು ಸಾಧ್ಯವಾಗಲಿಲ್ಲ. ಎಷ್ಟೋ ಬಾರಿ ಗೋಲುಪೆಟ್ಟಿಗೆಯತ್ತ ಚೆಂಡನ್ನು ಕೊಂಡೊಯ್ದರೂ ಗೋಲುಗಳಿಸುವುದು ಅಸಾಧ್ಯವಾಗಿತ್ತು. ಮೊದಲಾರ್ಧದ ಆಟದಲ್ಲಿ ಕ್ರೊವೇಷಿಯಾಕ್ಕೆ ಗೋಲುಗಳಿಸುವ ಅವಕಾಶಗಳು ಸಾಕಷ್ಟು ದೊರೆತಿದ್ದವು. ದ್ವಿತೀಯಾರ್ಧದ ಆಟದಲ್ಲಿ ಅರ್ಜೆಂಟೀನಾ ಆಟಗಾರರ ಆರಂಭದಲ್ಲಿ ಬಿರುಸಿನ ಆಟವಾಡಿದರು. ಆದರೆ ಎದುರಾಳಿ ಕ್ರೊವೇಷಿಯಾದ ರಕ್ಷಣಾ ಕೋಟೆಯನ್ನು ದಾಟುವುದಕ್ಕೆ ಸಾಧ್ಯವಾಗಲಿಲ್ಲ.

53ನೇ ನಿಮಿಷದಲ್ಲಿ ಅರ್ಜೆಂಟೀನಾದ ಗೋಲ್ ಕೀಪರ್ ವಿಲ್ಲೆ ಕಬಲ್ಲೆರೊ, ಫಾರ್ವರ್ಡ್ ಆಟಗಾರನಿಗೆ ಚೆಂಡನ್ನು ಪಾಸ್ ನೀಡಿದ್ದರು. ಅದೇ ಸಮಯದಲ್ಲಿ ಅಲ್ಲಿಯೇ ನಿಂತಿದ್ದ ಕ್ರೊವೇಷಿಯಾದ ಆಂಟೆ ರೆಬಿಕ್ ಚೆಂಡನ್ನು ಸುಲಭವಾಗಿ ತಡೆದು ಗೋಲು ಪೆಟ್ಟಿಗೆಗೆ ಸೇರಿಸಿದರು. 80ನೇ ನಿಮಿಷದಲ್ಲಿ ಮೊಡ್ರಿಕ್ ಮತ್ತು 90+1ನೇ ನಿಮಿಷದಲ್ಲಿ ರಾಕ್ಟಿಕ್, ಅರ್ಜೆಂಟೀನಾ ಗೋಲ್ ಕೀಪರ್‌ನ್ನು ವಂಚಿಸಿ ಆಕರ್ಷಕ ಗೋಲು ದಾಖಲಿಸಿದರು.
ಅಂತಿಮವಾಗಿ ಇದೇ ಅಂತರವನ್ನು ಕಾಯ್ದುಕೊಂಡ ಕ್ರೊವೇಷಿಯಾ ಪಂದ್ಯ ಜಯಿಸಿತು. 

click me!