
ರಷ್ಯಾ[ಜೂ.21]: ಬಲಿಷ್ಠ ಫ್ರಾನ್ಸ್ ತಂಡ ಪೆರು ತಂಡವನ್ನು 1-0 ಗೋಲುಗಳಿಂದ ಮಣಿಸಿ ಪ್ರೀಕ್ವಾರ್ಟರ್ ಹಂತ ಪ್ರವೇಶಿಸಿದೆ.
‘ಸಿ’ ಗುಂಪಿನ ಪಂದ್ಯದಲ್ಲಿ ಕೆಲ್ಯಾನ್ ಮಾಪ್ಪೆ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಫ್ರಾನ್ಸ್ ಭರ್ಜರಿ ಜಯ ದಾಖಲಿಸಿದೆ. ಪಂದ್ಯದ 34ನೇ ನಿಮಿಷದಲ್ಲಿ ಆ್ಯಂಟೋನಿ ಗ್ರೀಜ್’ಮನ್ ನೀಡಿದ ಪಾಸ್’ನ್ನು ಯಶಸ್ವಿಯಾಗಿ ಬಳಸಿಕೊಂಡ ಮಾಪ್ಪೆ ಭರ್ಜರಿ ಗೋಲು ಸಿಡಿಸಿದರು. ಮೊದಲಾರ್ಧ ಮುಕ್ತಾಯಕ್ಕೆ ಫ್ರಾನ್ಸ್ 1-0 ಗೋಲುಗಳ ಮುನ್ನಡೆ ಕಾಯ್ದುಕೊಂಡಿತ್ತು.
ದ್ವಿತಿಯಾರ್ಧದಲ್ಲೂ ಫ್ರಾನ್ಸ್ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಪೆರು ತಂಡಕ್ಕೆ ಗೋಲು ಬಾರಿಸಲು ಅವಕಾಶ ನೀಡಲಿಲ್ಲ. ಕೊನೆಯವರೆಗೂ ಪೆರು ಗೋಲು ಬಾರಿಸಲು ಯತ್ನಿಸಿತಾದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಪೆರುವಿನ ನಾಕೌಟ್ ಪ್ರವೇಶದ ಕನಸು ಭಗ್ನವಾಯಿತು.
ಆಡಿದ 2 ಪಂದ್ಯಗಳಲ್ಲಿ 2 ಗೆದ್ದು ಅಂಕಪಟ್ಟಿಯಲ್ಲಿ ಫ್ರಾನ್ಸ್ ಮೊದಲ ಸ್ಥಾನದಲ್ಲಿ, ಡೆನ್ಮಾರ್ಕ್ ಒಂದು ಗೆಲುವು ಒಂದು ಡ್ರಾನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪೆರು ಎರಡೂ ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬಿದ್ದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.