ರಾಷ್ಟ್ರೀಯ ಕಿರಿಯರ ಈಜು: ಮತ್ತೆ ಮುಂದುವರೆದ ಕರ್ನಾಟಕದ ಪ್ರಾಬಲ್ಯ

Published : Jul 20, 2022, 09:43 AM IST
ರಾಷ್ಟ್ರೀಯ ಕಿರಿಯರ ಈಜು: ಮತ್ತೆ ಮುಂದುವರೆದ ಕರ್ನಾಟಕದ ಪ್ರಾಬಲ್ಯ

ಸಾರಾಂಶ

ರಾಷ್ಟ್ರೀಯ ಕಿರಿಯರ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಸ್ವಿಮ್ಮರ್‌ಗಳು ಶೈನಿಂಗ್ ರಾಜ್ಯದ ಈಜುಪಟುಗಳಿಂದ ಮತ್ತೆರಡು ರಾಷ್ಟ್ರೀಯ ದಾಖಲೆ ನಿರ್ಮಾಣ ಕೂಟದಲ್ಲಿ ಕರ್ನಾಟಕ 29 ಚಿನ್ನ, 20 ಬೆಳ್ಳಿ ಹಾಗೂ 13 ಕಂಚು ಸೇರಿ ಒಟ್ಟು 62 ಪದಕಗಳನ್ನು ಗೆದ್ದಿದೆ

ಭುವನೇಶ್ವರ‌(ಜು.20): ಕಿರಿಯರ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪ್ರಾಬಲ್ಯ ಮುಂದುವರಿಸಿದ್ದು, ರಾಜ್ಯದ ಈಜುಪಟುಗಳು ಮತ್ತೆರಡು ರಾಷ್ಟ್ರೀಯ ದಾಖಲೆಗಳನ್ನು ಬರೆದಿದ್ದಾರೆ. ಮಂಗಳವಾರ ನೀನಾ ವೆಂಕಟೇಶ್‌ ಬಾಲಕಿಯರ 15-17 ವರ್ಷದೊಳಗಿನ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರು 28.27 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಕಳೆದ ವರ್ಷ ಬೆಂಗಳೂರಿನಲ್ಲಿ 28.51 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಾವೇ ನಿರ್ಮಿಸಿದ್ದ ದಾಖಲೆ ಮುರಿದರು. 

ಪಶ್ಚಿಮ ಬಂಗಾರದ 16ರ ನೀಲಬ್ಜಾ ಘೋಷ್‌(28.85 ಸೆ.) ಹಾಗೂ ಪಂಜಾಬ್‌ನ ಜಸ್ನೂರ್‌ ಕೌರ್‌(28.97 ಸೆ.) ಕ್ರಮವಾಗಿ ಬೆಳ್ಳಿ, ಕಂಚು ಗೆದ್ದುಕೊಂಡರು. ಇದೇ ವೇಳೆ ಕರ್ನಾಟದಕ ಧಿನಿಧಿ 12-14 ವರ್ಷದೊಳಗಿನ ಬಾಲಕಿಯರ 50 ಮೀ. ಬಟರ್‌ಫ್ಲೈನಲ್ಲಿ ರಾಷ್ಟ್ರೀಯ ದಾಖಲೆ ಬರೆದರು. ಅವರು 28.93 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ತನಿಷಿ ಗುಪ್ತಾ(29.45 ಸೆ.) ದಾಖಲೆ ಮುರಿದರು. ಇನ್ನು, ಬಾಲಕರ 200 ಮಿ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಾಜ್ಯದ ಉತ್ಕರ್ಷ್‌ ಪಾಟಿಲ್‌ 2 ನಿ. 06.77 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, ಬಾಲಕಿಯರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ ವೀರೇಂದ್ರಕುಮಾರ್‌ ಸಹ ಬಂಗಾರ ಪಡೆದರು.

ಕೂಟದಲ್ಲಿ ಕರ್ನಾಟಕ 29 ಚಿನ್ನ, 20 ಬೆಳ್ಳಿ ಹಾಗೂ 13 ಕಂಚು ಸೇರಿದಂತೆ ಒಟ್ಟು 62 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ 32, ತೆಲಂಗಾಣ 16 ಪದಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲು ಅವಿನಾಶ್ ವಿಫಲ

ಯುಜೀನ್: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕದ ಭರವಸೆ ಹುಟ್ಟಿಸಿದ್ದ 3000 ಮೀಟರ್‌ ಸ್ಪೀಪಲ್‌ಚೇಸ್‌ ಪಟು ಭಾರತದ ಅವಿನಾಶ್‌ ಸಾಬ್ಳೆ ಪದಕ ಗೆಲ್ಲಲು ವಿಫಲರಾಗಿದ್ದಾರೆ. ಕೂಟದ ನಾಲ್ಕನೇ ದಿನವಾದ ಸೋಮವಾರ ಮಹಾರಾಷ್ಟ್ರದ 27 ವರ್ಷದ ಸಾಬ್ಳೆ ಪುರುಷರ ವಿಭಾಗದಲ್ಲಿ 8 ನಿಮಿಷ 31.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸಾಬ್ಳೆ 8 ನಿ. 12.48 ಸೆಕೆಂಡ್‌ಗಳ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದು, ಅದೇ ಪ್ರದರ್ಶನ ತೋರಿದ್ದರೆ ಚಿನ್ನದ ಪದಕ ಗೆಲ್ಲುತ್ತಿದ್ದರು. 

World Athletics Championships: ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲಲು ಮುರುಳಿ ಶ್ರೀಶಂಕರ್ ಫೇಲ್‌..!

ಅರ್ಹತಾ ಸುತ್ತಿನಲ್ಲಿ ಅವರು ಹೀಟ್ಸ್‌ನಲ್ಲಿ 3, ಒಟ್ಟಾರೆ 7ನೇ ಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದ್ದರು. 2019ರ ಚಾಂಪಿಯನ್‌ಶಿಪ್‌ನಲ್ಲಿ ಅವರು 13ನೇ ಸ್ಥಾನ ಪಡೆದಿದ್ದರು. ಇನ್ನು, ಮೊರಕ್ಕೋದ ಸೋಫಿಯಾನ್‌ ಬಕ್ಕಾಲಿ (8 ನಿ. 25.23 ಸೆ.) ಚಿನ್ನ, ಇಥಿಯೋಪಿಯಾದ ಲಮೀಚಾ ಗಿರ್ಮಾ(8 ನಿ. 26.01 ಸೆ.) ಬೆಳ್ಳಿ ಗೆದ್ದುಕೊಂಡರು. ಕಳೆದ ಬಾರಿಯ ಚಾಂಪಿಯನ್‌ ಕೀನ್ಯಾದ ಕಿಪ್ರುಟೋ(8 ನಿ.27.92 ಸೆ) ಕಂಚು ತಮ್ಮದಾಗಿಸಿಕೊಂಡರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು!
ಐಪಿಎಲ್ ಮಿನಿ ಹರಾಜು: ಅನ್‌ಕ್ಯಾಪ್ಡ್‌ ಆಟಗಾರರಿಗೆ ಜಾಕ್‌ಪಾಟ್; 8 ಆಟಗಾರರನ್ನು ಖರೀದಿಸಿದ ಆರ್‌ಸಿಬಿ!