ರಾಜಭವನದಲ್ಲಿ 44ನೇ ಚೆಸ್‌ ಒಲಿಂಪಿಯಾಡ್‌ ಟಾರ್ಚ್ ರಿಲೇ

By Santosh Naik  |  First Published Jul 19, 2022, 10:39 AM IST

ತಮಿಳುನಾಡು ಆತಿಥ್ಯದಲ್ಲಿ ನಡೆಯಲಿರುವ 44ನೇ ಆವೃತ್ತಿಯ ಚೆಸ್‌ ಒಲಿಂಪಿಯಾಡ್‌ನ ಟಾರ್ಚ್‌ ರಿಲೇ ಸೋಮವಾರ ಕರ್ನಾಟಕಕ್ಕೆ ಆಗಮಿಸಿತು. ಬೆಂಗಳೂರಿನ ರಾಜಭನವನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗ್ಲೆಹೊಟ್‌ ಈ ರಿಲೆಯಲ್ಲಿ ಸ್ವಾಗತಿಸಿದರು.
 


ಬೆಂಗಳೂರು (ಜುಲೈ 19): ಜುಲೈ 28ರಿಂದ ಆ.10ರ ವರೆಗೆ ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ನಡೆಯಲಿರುವ 44ನೇ ಚೆಸ್‌ ಒಲಿಂಪಿಯಾಡ್‌ನ ಟಾರ್ಚ್ ರಿಲೇ ಸೋಮವಾರ ಬೆಂಗಳೂರಿಗೆ ಆಗಮಿಸಿತು. ರಾಜಭವನದಲ್ಲಿ ನಡೆದ ಸರಳ ಕಾರ‍್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಟಾಚ್‌ರ್‍ ರಿಲೇಯನ್ನು ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು, ‘75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಚೆಸ್‌ ಒಲಿಂಪಿಯಾಡ್‌ ಆಯೋಜಿಸಿದ್ದು ನಮಗೆ ಹೆಮ್ಮೆಯ ಸಂಗತಿ. ಟೂರ್ನಿಯ ಮೂಲಕ ಭಾರತ ವಿಶ್ವದಲ್ಲೇ ಹೆಮ್ಮೆ ಪಡುವಂತೆ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿ ಒಲಿಂಪಿಯಾಡ್‌ಗೆ ಟಾರ್ಚ್ ರಿಲೇ ಪರಿಚಯಿಸಲಾಗಿದ್ದು, ಭಾರತದ 75 ನಗರಗಳಲ್ಲಿ ಸಂಚರಿಸಲಿವೆ. ಕಾರ‍್ಯಕ್ರಮದಲ್ಲಿ ರಾಜ್ಯ ಕ್ರೀಡಾ ಸಚಿವ ಡಾ.ನಾರಾಯಣಗೌಡ, ಕರ್ನಾಟದ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ‍್ಯದರ್ಶಿ ಶಾಲಿನಿ ರಜನೀಶ್‌ ಸೇರಿದಂತೆ ಹಲವರಿದ್ದರು. ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಗ್ರ್ಯಾಂಡ್ ಮಾಸ್ಟರ್ ಜಿಎ ಸ್ಟ್ಯಾನಿ ಅವರಿಂದ ಜ್ಯೋತಿ ಸ್ವೀಕರಿಸಿದರು. ಗ್ರ್ಯಾಂಡ್ ಮಾಸ್ಟರ್ ಎಂ.ಎಸ್.ತೇಜಕುಮಾರ್ ಮತ್ತು ಗಿರೀಶ್ ಕೌಶಿಕ್ ಅವರು ನಗರದಲ್ಲಿ ಜ್ಯೋತಿಯನ್ನು ಮುಂದಿಟ್ಟುಕೊಂಡು ವಿಧಾನಸೌಧ, ವಿಧಾನಸೌಧಕ್ಕೂ ಭೇಟಿ ನೀಡಿದರು.

ಬೆಂಗಳೂರಿಗೆ ಮುನ್ನ ಭಾನುವಾರ ವಿಶಾಖಪಟ್ಟಣಕ್ಕೆ ಆಗಮಿಸಿದ ಜ್ಯೋತಿ (Chess Olympiad Torch relay) ಆಂಧ್ರಪ್ರದೇಶದ ಕೈಗಾರಿಕೆ, ಹೂಡಿಕೆ ಮತ್ತು ವಾಣಿಜ್ಯ ಸಚಿವ ಗುಡಿವಾಡ ಅಮರನಾಥ್ ಅವರು ಸ್ವರ್ಣ ಭಾರತಿ ಒಳಾಂಗಣ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಮಾಸ್ಟರ್ ಮುಸುನೂರಿ ಲಲಿತ್ ಬಾಬು ಅವರಿಂದ ಜ್ಯೋತಿ ಸ್ವೀಕರಿಸಿದರು.

Tap to resize

Latest Videos

ಇದನ್ನೂ ಓದಿ: INDIA TOUR OF ENGLAND ಇಂಗ್ಲೆಂಡಲ್ಲಿ ಭಾರತ ವೇಗಿಗಳ ಮಿಂಚು!

ಶೂಟಿಂಗ್‌ ವಿಶ್ವಕಪ್‌: ಚಿನ್ನ ಗೆದ್ದ ಮೈರಾಜ್‌ ಅಹ್ಮದ್‌
ಚಾಂಗ್‌ವೊನ್‌(ದ.ಕೊರಿಯಾ):
ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಹಿರಿಯ ಶೂಟರ್‌ ಮೈರಾಜ್‌ ಅಹ್ಮದ್‌ ಖಾನ್‌ ಐತಿಹಾಸಿಕ ಚಿನ್ನದ ಪಕದ ಗೆದ್ದಿದ್ದು, ವಿಶ್ವಕಪ್‌ನ ಸ್ಕೀಟ್‌ ವಿಭಾಗದಲ್ಲಿ ಭಾರತ ಗೆದ್ದ ಮೊದಲ ಚಿನ್ನ ಎನಿಸಿಕೊಂಡಿದೆ. ಸೋಮವಾರ 46 ವರ್ಷದ ಮೈರಾಜ್‌ 37 ಅಂಕಗಳೊಂದಿಗೆ ಕೊರಿಯಾ(36) ಅಂಕಗಳೊಂದಿಗೆಹಾಗೂ ಬ್ರಿಟನ್‌(26) ಸ್ಪರ್ಧಿಗಳನ್ನು ಹಿಂದಿಕ್ಕಿ ಬಂಗಾರಕ್ಕೆ ಕೊರಳೊಡಿದ್ದರು. 2 ಬಾರಿ ಒಲಿಂಪಿಯನ್‌ ಮೈರಾಜ್‌ ಕೂಟದಲ್ಲಿ ಭಾರತದ ಹಿರಿಯ ಶೂಟರ್‌ ಎನಿಸಿಕೊಂಡಿದ್ದು, 2016ರ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು, ಮಹಿಳೆಯರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಭಾರತ ಕಂಚು ಗೆದ್ದುಕೊಂಡಿತು.

ಇದನ್ನೂ ಓದಿ: ಫ್ರೀಸ್ಟೈಲ್ ಈಜಿನಲ್ಲಿ ರಾಷ್ಟ್ರೀಯ ದಾಖಲೆ ಮುರಿದ ನಟ ಮಾಧವನ್ ಪುತ್ರ ವೇದಾಂತ್!

ಕಿರಿಯರ ಈಜು: ಧಿನಿಧಿ ದಾಖಲೆ
ಭುವನೇಶ್ವರ:
ಕಿರಿಯರ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಧಿನಿಧಿ ದೇಸಿಂಘು ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಸೋಮವಾರ ಅವರು ಬಾಲಕಿಯರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ 1 ನಿಮಿಷ 04.01 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಕೊರಳೊಡ್ಡಿದರೆ, ರಾಜ್ಯದವರೇ ಆದ ಹಷಿಕಾ ರಾಮಚಂದ್ರ 1 ನಿ. 04.10 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪಡೆದರು. ಕಳೆದ ವರ್ಷ ಹಷಿಕಾ 1 ನಿ. 05.51 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ಈವರೆಗಿನ ದಾಖಲೆಯಾಗಿತ್ತು. ಇನ್ನು, ಬಾಲಕಿಯರ 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ರಿಧಿಮಾ, ಬಾಲಕರ 400 ಮೀ. ಮೆಡ್ಲೆಯಲ್ಲಿ ನವನೀತ್‌ ಗೌಡ ಚಿನ್ನ ಗೆದ್ದರು. ಬಾಲಕರ 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಇಶಾನ್‌ ಮೆಹ್ರಾ, ಬಾಲಕಿಯರ 100 ಮೀ. ಬಟರ್‌ಫ್ಲೈನಲ್ಲಿ ನೀನಾ ವೆಂಕಟೇಶ್‌ ಕಂಚು, ಬಾಲಕರ 100 ಮೀ. ಫ್ರೀಸ್ಟೈಲ್‌ನಲ್ಲಿ ಕಾರ್ತಿಕೇಯನ್‌ ನಾಯರ್‌ ಬೆಳ್ಳಿ ಪಡೆದರು. ಕೂಟದಲ್ಲಿ ಕರ್ನಾಟಕ ಒಟ್ಟು 49 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ 23, ತೆಲಂಗಾಣ 11 ಪದಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.
 

click me!