ಶ್ರೀಲಂಕಾದ ಟಿ20, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಪ್ರಕಟ : ಕೊಹ್ಲಿ ಮತ್ತೆ ಮಿಸ್ !

Published : Dec 04, 2017, 08:40 PM ISTUpdated : Apr 11, 2018, 12:42 PM IST
ಶ್ರೀಲಂಕಾದ  ಟಿ20, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ  ತಂಡ ಪ್ರಕಟ : ಕೊಹ್ಲಿ ಮತ್ತೆ ಮಿಸ್ !

ಸಾರಾಂಶ

ತಮಿಳುನಾಡಿನ ಆಲ್'ರೌಂಡರ್ ವಾಷಿಂಗ್ಟ್'ನ್ ಸುಂದರ್, ಹರ್ಯಾಣದ ಆಲ್'ರೌಂಡರ್ ದೀಪಕ್ ಹೂಡ, ಕೇರಳದ ಎಡಗೈ ವೇಗಿ ಬಸೀಲದ ತಂಪಿ ಹಾಗೂ ಗುಜರಾತ್'ನ ವೇಗಿ ಜಯದೇವ್ ಉನದ್ಕಟ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮುಂಬೈ(ಡಿ.04): ಬಿಸಿಸಿಐ ಡಿಸೆಂಬರ್ 20ರಿಂದ ಆರಂಭವಾಗುವ ಟಿ20 ಸರಣಿ ಹಾಗೂ 2018ರ ಜನವರಿಯಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಶ್ರೀಲಂಕಾ ಟಿ20 ಸರಣಿಗೆ ವಿರಾಟ್ ಕೊಹ್ಲಿ'ಗೆ ವಿಶ್ರಾಂತಿ ನೀಡಿ ರೋಹಿತ್ ಶರ್ಮಾ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಜನವರಿಯಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿಯೇ ನಾಯಕರಾಗಿರುತ್ತಾರೆ.

ದಕ್ಷಿಣ ಆಫ್ರಿಕಾ  ಟೆಸ್ಟ್ ಸರಣಿಗೆ ಬಹುತೇಕ ಶ್ರೀಲಂಕಾ ವಿರುದ್ಧ ಆಡುತ್ತಿರುವ ತಂಡವನ್ನೇ ಉಳಿಸಿಕೊಳ್ಳಲಾಗಿದ್ದು, ವಿಕೇಟ್ ಕೀಪರ್ ಪಾರ್ಥೀವ್ ಪಟೇಲ್ ಅವರಿಗೆ ಸ್ಥಾನ ನೀಡಲಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ನಾಲ್ವರು ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.

ತಮಿಳುನಾಡಿನ ಆಲ್'ರೌಂಡರ್ ವಾಷಿಂಗ್ಟ್'ನ್ ಸುಂದರ್, ಹರ್ಯಾಣದ ಆಲ್'ರೌಂಡರ್ ದೀಪಕ್ ಹೂಡ, ಕೇರಳದ ಎಡಗೈ ವೇಗಿ ಬಸೀಲದ ತಂಪಿ ಹಾಗೂ ಗುಜರಾತ್'ನ ವೇಗಿ ಜಯದೇವ್ ಉನದ್ಕಟ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಟಿ20 ತಂಡ : ರೋಹಿತ್ ಶರ್ಮಾ(ನಾಯಕ), ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ದಿನೇಶ್  ಕಾರ್ತಿಕ್, ಎಂ.ಎಸ್. ಧೋನಿ,  ಹಾರ್ದಿಕ್  ಪಾಂಡ್ಯ,, ವಿ. ಸುಂದರ್, ಯಜುವೇಂದ್ರ  ಚಹಲ್, ಕುಲ್​ದೀಪ್ ಯಾದವ್, ದೀಪಕ್ ಹೂಡ, ಬುಮ್ರಾ, ಎಂ. ಸಿರಾಜ್, ಬಾಸಿಲ್ ತಂಪಿ, ಉನಾಡ್ಕತ್​

ಟೆಸ್ಟ್ 'ಗೆ ತಂಡ : ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆ.ಎಲ್. ರಾಹುಲ್,ಶಿಖರ್  ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ,ವೃದ್ದೀಮಾನ್  ಸಾಹ, ಆರ್.  ಅಶ್ವಿನ್, ಆರ್.  ಜಡೇಜಾ, ಪಾರ್ಥಿವ್ ಪಟೇಲ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್​, ಮೊಹಮದ್ ಶಮಿ , ಇಶಾಂತ್ ಶರ್ಮಿ​, ಉಮೇಶ್ ಯಾದವ್, ಜೆ. ಬುಮ್ರಾ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!