2019ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಮುಂಬೈ ಇಂಡಿಯನ್ಸ್‌ಗೆ ಬಿಸಿಸಿಐ ಶಾಕ್ ನೀಡಿದೆ. ಬಿಸಿಸಿಐ ಆಡಳಿತ ಸಮಿತಿ ತೆಗೆದುಕೊಂಡಿರುವ ನಿರ್ಧಾರ, ನಾಯಕ ರೋಹಿತ್ ಶರ್ಮಾ ಹಾಗೂ ಫ್ರಾಂಚೈಸಿ ನಿದ್ದೆ ಕಸಿದುಕೊಂಡಿದೆ.
ಮುಂಬೈ(ಜ.01): ಐಪಿಎಲ್ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಗಿಸಿರುವ ಬಿಸಿಸಿಐ, ಇದೀಗ ಶ್ರೀಮಂತ ಲೀಗ್ ಟೂರ್ನಿ ಆಯೋಜಿಸಲು ತಯಾರಿ ನಡೆಸುತ್ತಿದೆ. ಇತ್ತ ಹರಾಜಿನಲ್ಲಿ ಆಟಗಾರರನ್ನ ಖರೀದಿಸಿರುವ ಫ್ರಾಂಚೈಸಿಗಳು ಶೀಘ್ರದಲ್ಲಿ ಆಟಗಾರರ ಕ್ಯಾಂಪ್ ಆಯೋಜಿಸಲಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಆಡಳಿತಿ ಸಮಿತಿ, ಇದೀಗ ಮುಂಬೈ ಇಂಡಿಯನ್ಸ್‌ಗೆ ಶಾಕ್ ನೀಡಿದೆ.
ಇದನ್ನೂ ಓದಿ: ಶ್ರೀಲಂಕಾ ಕ್ರಿಕೆಟ್ ತಂಡ ಅತ್ಯಂತ ಭ್ರಷ್ಟ: ಐಸಿಸಿ
2018ರಲ್ಲಿ ಸತತ ಕ್ರಿಕೆಟ್ ಆಡಿರುವ ವೇಗಿ ಜಸ್‌ಪ್ರೀತ್ ಬುಮ್ರಾಗೆ 2019ರ ಐಪಿಎಲ್‌ನಿಂದ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. 2019ರ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಬಿಸಿಸಿಐ ಆಡಳಿತ ಸಮಿತಿ ಈ ಕ್ರಮ ಕೈಗೊಳ್ಳೋ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಈ ನಿರ್ಧಾರ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಚಿಂತೆಗೆ ಕಾರಣವಾಗಿದೆ.
ಇದನ್ನೂ ಓದಿ: ಮಗಳು ಝೀವಾಳೊಂದಿಗೆ ಮಣ್ಣಲ್ಲಿ ಧೋನಿ ಆಟ
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿಯಾಗಿರುವ ಜಸ್ಪ್ರೀತ್ ಬುಮ್ರಾ ಅಲಭ್ಯರಾದರೆ ತಂಡಕ್ಕೆ ತೀವ್ರ ಹೊಡೆತ ಬೀಳಲಿದೆ. ಫ್ರಾಂಚೈಸಿಗಳ ಮನವಿ ಮೇರೆಗೆ ಕೆಲ ಪಂದ್ಯ ಆಡಲು ಅನುಮತಿ ನೀಡೋ ಸಾಧ್ಯತೆ ಇದೆ. ಬುಮ್ರಾ ಜೊತೆಗೆ ಇತರ ಟೀಂ ಇಂಡಿಯಾ ವೇಗಿಗಳಿಗೂ ವಿಶ್ರಾಂತಿ ಸೂಚನೆ ನೀಡಲು ಬಿಸಿಸಿಐ ಮುಂದಾಗಿದೆ.