ಶ್ರೀಲಂಕಾ ಕ್ರಿಕೆಟ್ ತಂಡ ಅತ್ಯಂತ ಭ್ರಷ್ಟ: ಐಸಿಸಿ

By Web Desk  |  First Published Jan 1, 2019, 3:45 PM IST

‘ಶ್ರೀಲಂಕಾ ಕ್ರಿಕೆಟ್ ಎಲ್ಲ ವಿಭಾಗದಲ್ಲೂ ಭ್ರಷ್ಟವಾಗಿದೆ. ಲಂಕಾ ತಂಡ ಮುಂಚೂಣಿಯಲ್ಲಿದೆ. ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಕೇವಲ ಬುಕ್ಕಿಗಳ ಕಾಟ ಮಾತ್ರವಲ್ಲ, ಸ್ಥಳೀಯ ಪಂದ್ಯಗಳ ಮೇಲೂ ಅಂಡರ್‌ವಲ್ಡ್ ಪ್ರಭಾವವಿದೆ ಎಂದು ಅಲೆಕ್ಸ್ ತಿಳಿಸಿರುವುದಾಗಿ ಫರ್ನಾಂಡೋ ಹೇಳಿದ್ದಾರೆ.


ಕೊಲಂಬೊ[ಜ.01]: ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲೇ ಶ್ರೀಲಂಕಾ ಅತ್ಯಂತ ಭ್ರಷ್ಟ ಎಂದು ಐಸಿಸಿ ಗೌಪ್ಯ ವರದಿ ತಿಳಿಸಿದೆ ಎಂದು ಲಂಕಾದ ಕ್ರೀಡಾ ಸಚಿ ವ ಹರಿನ್ ಫರ್ನಾಂಡೋ ಹೇಳಿದ್ದಾರೆ.

ಸನತ್ ಜಯಸೂರ್ಯ ವಿರುದ್ಧ ಕೇಸ್-ಉತ್ತರಿಸಲು 14 ದಿನ ಕಾಲವಕಾಶ!

ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳ ಸಮಿತಿಯ ಮುಖ್ಯಸ್ಥ ಅಲೆಕ್ಸ್ ಮಾರ್ಷಲ್ ಜತೆ ದುಬೈನಲ್ಲಿ ಸಭೆ ನಡೆಸಿದ ಬಳಿಕ ತವರಿಗೆ ಆಗಮಿಸಿದ ಫರ್ನಾಂಡೋ, ‘ಶ್ರೀಲಂಕಾ ಕ್ರಿಕೆಟ್ ಎಲ್ಲ ವಿಭಾಗದಲ್ಲೂ ಭ್ರಷ್ಟವಾಗಿದೆ. ಲಂಕಾ ತಂಡ ಮುಂಚೂಣಿಯಲ್ಲಿದೆ. ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಕೇವಲ ಬುಕ್ಕಿಗಳ ಕಾಟ ಮಾತ್ರವಲ್ಲ, ಸ್ಥಳೀಯ ಪಂದ್ಯಗಳ ಮೇಲೂ ಅಂಡರ್‌ವರ್ಡ್‌ನ ಪ್ರಭಾವವಿದೆ ಎಂದು ಅಲೆಕ್ಸ್ ತಿಳಿಸಿರುವುದಾಗಿ ಫರ್ನಾಂಡೋ ಹೇಳಿದ್ದಾರೆ.

ಫಿಕ್ಸಿಂಗ್ ನಡೆಸಿದ ಶ್ರೀಲಂಕಾದ ಕ್ರಿಕೆಟಿಗ ಸಸ್ಫೆಂಡ್..!

Latest Videos

undefined

ಕಳೆದ ತಿಂಗಳಷ್ಟೇ ಶ್ರೀಲಂಕಾ ತಂಡದ ವೇಗದ ಬೌಲರ್ ದಿಲ್ಹಾರ ಲೋಕಹೆಟ್ಟಿಗೆ 2007ರಲ್ಲಿ ನಡೆದ ಸೀಮಿತ ಓವರ್’ಗಳ ಪಂದ್ಯದಲ್ಲಿ ಭ್ರಷ್ಟಾಚಾರ ಮಾಡಿದ ಆರೋಪದಡಿ ನಿಷೇಧಕ್ಕೆ ಗುರಿಯಾಗಿದ್ದರು. ಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ, ನುವಾನ್ ಜೋಯ್ಸಾ ಬಳಿಕ ಭ್ರಷ್ಟಾಚಾರ ನಿಗ್ರಹ ಉಲ್ಲಂಘನೆ ಮಾಡಿದ ದ್ವೀಪರಾಷ್ಟ್ರದ ಮೂರನೇ ಕ್ರಿಕೆಟಿಗ ಎನ್ನುವ ಅಪಖ್ಯಾತಿಗೂ ಲೋಕಹೆಟ್ಟಿಗೆ ಪಾತ್ರರಾಗಿದ್ದಾರೆ. 

ಮತ್ತೆ ಭುಗಿಲೆದ್ದಿದೆ ಮ್ಯಾಚ್ ಫಿಕ್ಸಿಂಗ್- ಶ್ರೀಲಂಕಾ ಕೋಚ್ ಅಮಾನತು!

 

click me!