ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ನಂ.1 ಸ್ಥಾನದಲ್ಲಿ ಯಾರಿದ್ದಾರೆ..?

By Web DeskFirst Published Jan 1, 2019, 2:01 PM IST
Highlights

ಚೇತೇಶ್ವರ್ ಪೂಜಾರ 4ನೇ ಸ್ಥಾನ, ರಿಷಭ್ ಪಂತ್ 10 ಸ್ಥಾನ ಜಿಗಿದಿದ್ದು 38ನೇ ರ‍್ಯಾಂಕಿಂಗ್ ಪಡೆದಿದ್ದಾರೆ. ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಕರ್ನಾಟಕದ ಮಯಾಂಕ್ ಅಗರ್‌ವಾಲ್ 67ನೇ ಸ್ಥಾನಕ್ಕೇರಿದ್ದಾರೆ.

ದುಬೈ(ಜ.01): 2018ರ ವರ್ಷದ ಅಂತ್ಯಕ್ಕೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್’ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ದ. ಆಫ್ರಿಕಾದ ವೇಗಿ ಕಗಿಸೊ ರಬಾಡ ಐಸಿಸಿ ಟೆಸ್ಟ್ ಆಟಗಾರರ ರ‍್ಯಾಂಕಿಂಗ್’ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಮೆಲ್ಬರ್ನ್ ಟೆಸ್ಟ್ ಗೆಲುವಿನ ಬಳಿಕ ಪುಟ್ಟ ಬಾಲಕನಿಗೆ ಕೊಹ್ಲಿ ಭರ್ಜರಿ ಗಿಫ್ಟ್!

ಮೆಲ್ಬರ್ನ್ ಟೆಸ್ಟ್‌ನ ಮೊದಲ ಇನಿಂಗ್ಸ್ ನಲ್ಲಿ 82, 2ನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದ ಕೊಹ್ಲಿ 3 ರೇಟಿಂಗ್ ಅಂಕ ಕಳೆದುಕೊಂಡಿದ್ದರು. ಆದರೂ ಕೊಹ್ಲಿ ಮೊದಲ ಸ್ಥಾನದಲ್ಲೆ ಉಳಿದಿದ್ದಾರೆ. 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸ್‌ನ್‌ಗಿಂತ 34 ಅಂಕಗಳ ಅಂತರವನ್ನು ಹೊಂದಿದ್ದಾರೆ. ಈ ವರ್ಷದಲ್ಲಿ ಕೊಹ್ಲಿ ವೃತ್ತಿ ಜೀವನದ ಅತಿ ಹೆಚ್ಚು 937 ರೇಟಿಂಗ್ ಅಂಕ ಪಡೆದಿದ್ದರು. ಪ್ರಸ್ಥುತ 931 ಅಂಕ ಹೊಂದಿದ್ದಾರೆ. ಒಟ್ಟಾರೆ 1322 ರನ್‌ಗಳಿಸಿದ ಶ್ರೇಯ ಕೂಡ ಕೊಹ್ಲಿಯದ್ದಾಗಿದೆ. ಕಳೆದ 135 ದಿನಗಳಿಂದ ಕೊಹ್ಲಿ ಐಸಿಸಿ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಗುಡ್ ನ್ಯೂಸ್: ತಂದೆಯಾದ ರೋಹಿತ್ ಶರ್ಮಾ

ಉಳಿದಂತೆ ಚೇತೇಶ್ವರ್ ಪೂಜಾರ 4ನೇ ಸ್ಥಾನ, ರಿಷಭ್ ಪಂತ್ 10 ಸ್ಥಾನ ಜಿಗಿದಿದ್ದು 38ನೇ ರ‍್ಯಾಂಕಿಂಗ್ ಪಡೆದಿದ್ದಾರೆ. ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಕರ್ನಾಟಕದ ಮಯಾಂಕ್ ಅಗರ್‌ವಾಲ್ 67ನೇ ಸ್ಥಾನಕ್ಕೇರಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ 28, ಮೊಹಮದ್ ಶಮಿ 23ನೇ ಸ್ಥಾನ ಪಡೆದಿದ್ದಾರೆ.

ಕ್ರಿಕೆಟ್‌ಗೂ ಕಾಲಿಟ್ಟಿತು ಕಿಸ್ ಕ್ಯಾಮ್- ಮೈದಾನಲ್ಲೇ ಚುಂಬನ-ವೀಡಿಯೋ ವೈರಲ್!

ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆ್ಯಂಡರ್ಸನ್’ರನ್ನು ಹಿಂದಿಕ್ಕಿ ರಬಾಡ, ಬೌಲಿಂಗ್ ಪಟ್ಟಿಯಲ್ಲಿ ನಂ.1 ಆದರು. 2018ರಲ್ಲಿ ಅಗ್ರಸ್ಥಾನ ಪಡೆದ ಯುವ ವೇಗದ ಬೌಲರ್ ಎಂಬ ಶ್ರೇಯಕ್ಕೆ ರಬಾಡ ಪಾತ್ರರಾಗಿದ್ದಾರೆ. ಈ ವರ್ಷದಲ್ಲಿ ರಬಾಡ 10 ಟೆಸ್ಟ್ ಪಂದ್ಯಗಳಿಂದ 52 ವಿಕೆಟ್ ಪಡೆದಿದ್ದಾರೆ.
 

click me!