ಭಾರತದ ಶೂಟರ್‌ಗಳು ರಿಯೋದಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಟೂರ್ನಿಯಲ್ಲಿ ಭರ್ಜರಿ ಚಿನ್ನದ ಬೇಟೆಯಾಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ತಮ್ಮ ಅಭಿಯಾನ ಮುಕ್ತಾಯಗೊಳಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೊಡಿ...
ರಿಯೋ(ಸೆ.04): ತಾರಾ ಶೂಟರ್‌ಗಳಾದ ಮನು ಭಾಕರ್ ಹಾಗೂ ಸೌರಭ್ ಚೌಧರಿ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ, ಇಲ್ಲಿ ಸೋಮವಾರ ಮುಕ್ತಾಯಗೊಂಡ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತಕ್ಕೆ 5ನೇ ಚಿನ್ನ ದೊರಕಿಸಿಕೊಟ್ಟರು.
ಶೂಟಿಂಗ್ ವಿಶ್ವಕಪ್: ಯಶಸ್ವಿನಿ ಸಿಂಗ್‌ಗೆ ಚಿನ್ನ
5 ಚಿನ್ನ, 2 ಬೆಳ್ಳಿ, 2 ಕಂಚಿನೊಂದಿಗೆ ಒಟ್ಟು 9 ಪದಕ ಗೆದ್ದ ಭಾರತ, ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ವಿಶೇಷ ಎಂದರೆ ಈ ವರ್ಷ ನಡೆದಿರುವ ಎಲ್ಲಾ 4 ಶೂಟಿಂಗ್ ವಿಶ್ವಕಪ್ಗಳಲ್ಲಿ ಭಾರತ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
GOLD number🥇 🥇 🥇 🥇 for India 🇮🇳 at World Cup. & Deepak Kumar beat China’s Yang & Yu 16-6 to win the 10M Air Rifle Mixed team event. Wow! pic.twitter.com/JsVG3iDco7
— NRAI (@OfficialNRAI)ನವದೆಹಲಿ, ಬೀಜಿಂಗ್, ಮ್ಯೂನಿಕ್ ಹಾಗೂ ರಿಯೋನಲ್ಲಿ ನಡೆದ ವಿಶ್ವಕಪ್ಗಳಿಂದ ಭಾರತ 16 ಚಿನ್ನ ಸೇರಿ ಒಟ್ಟು 24 ಪದಕಗಳನ್ನು ಗೆದ್ದಿದೆ. ಚೀನಾ 8 ಚಿನ್ನಗಳೊಂದಿಗೆ 36 ಪದಕ ಗೆದ್ದು 2ನೇ ಸ್ಥಾನದಲ್ಲಿದೆ. ಅಕ್ಟೋಬರ್ 8ರಿಂದ 15ರ ವರೆಗೂ ಯುಇಎನ ಅಲ್ ಐನ್‌ನಲ್ಲಿ ವಿಶ್ವಕಪ್ ಫೈನಲ್ ಟೂರ್ನಿ ನಡೆಯಲಿದೆ.