ಟೆಸ್ಟ್‌ ಅಂಪೈರಿಂಗ್‌ಗೆ ಪದಾರ್ಪಣೆ ಮಾಡಲು ರೆಡಿಯಾದ ನಿತಿನ್

By Kannadaprabha NewsFirst Published Sep 4, 2019, 2:45 PM IST
Highlights

ಭಾರತದ ನಿತಿನ್ ಮೆನನ್ ಟೆಸ್ಟ್ ಕ್ರಿಕೆಟ್‌ಗೆ ಅಂಪೈರ್ ಆಗಿ ಪದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿರುವ ನಿತಿನ್ ಇದೇ ಮೊದಲ ಬಾರಿಗೆ ರೆಡ್ ಬಾಲ್ ಕ್ರಿಕೆಟ್‌ಗೆ ತೀರ್ಪುಗಾರರಾಗಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...  

ಮುಂಬೈ[ಸೆ.04]: ಭಾರತೀಯ ಅಂಪೈರ್‌ ನಿತಿನ್‌ ಮೆನನ್‌ ನ.27ರಂದು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಡೆಹ್ರಾಡೂನ್‌ನಲ್ಲಿ ನಡೆ​ಯ​ಲಿ​ರುವ ಅಫ್ಘಾನಿಸ್ತಾನ ಹಾಗೂ ಪ್ರವಾಸಿ ವೆಸ್ಟ್‌ ಇಂಡೀಸ್‌ ನಡುವಿನ ಪಂದ್ಯ​ದಲ್ಲಿ ಮೈದಾ​ನದ ಅಂಪೈರ್‌ ಆಗಿ ನಿತಿನ್‌ ಕಾರ್ಯ​ನಿರ್ವಹಿ​ಸ​ಲಿ​ದ್ದಾರೆ. 

ಕೆಟ್ಟ ಅಂಪೈರಿಂಗ್‌: ಕ್ರಿಸ್‌, ವಿಲ್ಸನ್‌ ಆ್ಯಷಸ್‌ನಿಂದ ಔಟ್‌!

ಮಧ್ಯ ಪ್ರದೇಶ ಪರ ಅಂಡರ್‌ 16, 19, 23 ಹಾಗೂ ಲಿಸ್ಟ್‌ ‘ಎ’ ಪಂದ್ಯ​ಗ​ಳಲ್ಲಿ ಆಡಿದ್ದ ನಿತಿನ್‌, 2006ರಲ್ಲಿ ಬಿಸಿ​ಸಿಐನ ಅಖಿಲ ಭಾರತ ಅಂಪೈ​ರಿಂಗ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 2007-08ರ ದೇಸಿ ಋುತು​ವಿ​ನಿಂದ ಅಂಪೈರ್‌ ಆಗಿ ಕಾರ್ಯ​ನಿ​ರ್ವ​ಹಿ​ಸಲು ಆರಂಭಿ​ಸಿ​ದರು.

3ನೇ ಅಂಪೈರ್‌ನಿಂದ ನೋಬಾಲ್‌ ತೀರ್ಪು : ಐಸಿಸಿ ಪ್ರಯೋಗ!

57 ಪ್ರಥಮ ದರ್ಜೆ ಪಂದ್ಯ​ಗಳ ಜತೆ 22 ಅಂತಾ​ರಾ​ಷ್ಟ್ರೀಯ ಏಕ​ದಿನ ಹಾಗೂ 9 ಟಿ20, 40 ಐಪಿ​ಎ​ಲ್‌ ಪಂದ್ಯ​ಗ​ಳಲ್ಲಿ ಅವರು ಕಾರ್ಯ​ನಿ​ರ್ವ​ಹಿ​ಸಿ​ದ್ದಾರೆ. 
 

click me!