ISSF ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಬರಲ್ಲ ಪಾಕಿಸ್ತಾನ ಶೂಟರ್ಸ್!

Published : Feb 21, 2019, 09:35 PM IST
ISSF ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಬರಲ್ಲ ಪಾಕಿಸ್ತಾನ ಶೂಟರ್ಸ್!

ಸಾರಾಂಶ

ಪುಲ್ವಾಮಾ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ವ್ಯವಹಾರ ಸುಗಮವಾಗಿ ಸಾಗುತ್ತಿಲ್ಲ. ದಾಳಿಯಿಂದ ಇದೀಗ ಭಾರತದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಶೂಟರ್‌ಗಳು ಪಾಲ್ಗೊಳ್ಳುತ್ತಿಲ್ಲ.  

ನವದೆಹಲಿ(ಫೆ.21): ಭಾರತದ ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿರುವ ISSF ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನದ ಶೂಟರ್‌ಗಳು ಆಗಮಿಸುತ್ತಿಲ್ಲ. ಪುಲ್ವಾಮಾ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದೆಗೆಟ್ಟಿದೆ. ಹೀಗಾಗಿ ಪಾಕಿಸ್ತಾನ ಶೂಟರ್‌ಗಳಿಗೆ ವೀಸಾ ನೀಡಲು ಭಾರತ ವಿಳಂಬ ಮಾಡಿತ್ತು. ಇದೀಗ ಪಾಕಿಸ್ತಾನ ಶೂಟಿಂಗ್ ಫೆಡರೇಶನ್ ಭಾರತ ವೀಸಾ ನೀಡಲೇ ಇಲ್ಲ ಎಂದು ವಿಶ್ವ ಶೂಟಿಂಗ್ ಫೆಡರೇಶನ್‌ಗೆ ದೂರು ನೀಡಿದೆ.

ಇದನ್ನೂ ಓದಿ: ಶೂಟಿಂಗ್‌ ವಿಶ್ವಕಪ್‌: ಪಾಕ್‌ ಶೂಟರ್‌ಗಳಿಗೆ ಭಾರತ ವೀಸಾ

ಪಾಕಿಸ್ತಾನ ಶೂಟರ್‌ಗಳಿಗೆ ಭಾರತ ವೀಸಾ ನೀಡಲೇ ಇಲ್ಲ. ಹೀಗಾಗಿ ಭಾರತದಲ್ಲಿ ನಡೆಯುವ ಶೂಟಿಂಗ್ ವಿಶ್ವಕಪ್‍‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಾಕಿಸ್ತಾನ ಶೂಟಿಂಗ್ ಫೆಡರೇಶನ್ ಆರೋಪಿಸಿದೆ. ಭಾರತ ಸುಳ್ಳು ಹೇಳುತ್ತಿದೆ ಎಂದು ಪಾಕಿಸ್ತಾನ ಶೂಟಿಂಗ್ ಸಂಸ್ಥೆ(NRAP) ಉಪಾಧ್ಯಕ್ಷ ಜಾವೇದ್ ಎಸ್ ಲೋಧಿ ಹೇಳಿದ್ದಾರೆ.

ಇದನ್ನೂ ಓದಿ: ಪುಲ್ವಾಮಾ ದಾಳಿ: ಭಾರತ-ಪಾಕ್ ವಿಶ್ವಕಪ್ ಪಂದ್ಯ - ನಿರ್ಧಾರ ಪ್ರಕಟಿಸಿದ ICC

ಇದಕ್ಕೂ ಮೊದಲು ಭಾರತ ವೀಸಾ ವಿಳಂಬ ಮಾಡಿದೆ. ಹೀಗಾಗಿ ISSF ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದಿತ್ತು. ಇದೀಗ ವೀಸಾ ಸಿಕ್ಕೆ ಇಲ್ಲ ಎಂದು ಹೇಳಿದೆ. ಆದರೆ 2 ಪಾಕಿಸ್ತಾನ ಶೂಟರ್ ಹಾಗೂ ಒರ್ವ ಟೀಂ ಮ್ಯಾನೇಜರ್‌ಗೆ ವೀಸಾ ನೀಡಲಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಫೆ.23 ರಿಂದ ನವದೆಹಲಿಯಲ್ಲಿ ISSF ಶೂಟಿಂಗ್ ವಿಶ್ವಕಪ್ ಆರಂಭಗೊಳ್ಳಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌
ಕೇವಲ ₹10 ಲಕ್ಷ ಕೊಡಿ, ಮೆಸ್ಸಿ ಜತೆಗೆ ಒಂದು ಫೋಟೋ ತೆಗೆಸಿಕೊಳ್ಳಿ! ಕೇವಲ 100 ಮಂದಿಗಷ್ಟೇ ಈ ಚಾನ್ಸ್!