ಇಂಡೋ-ಪಾಕ್ ವಿಶ್ವಕಪ್ ಪಂದ್ಯ: ಬೆಚ್ಚಿ ಬಿದ್ದ ICC

By Web Desk  |  First Published Feb 21, 2019, 6:11 PM IST

ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯವನ್ನ ಬಹಿಷ್ಕರಿಸುವಂತೆ ಆಗ್ರಹ ಹೆಚ್ಚಾಗಿದೆ. ಆದರೆ ಭಾರತ ಆಗ್ರಹಕ್ಕೆ ಐಸಿಸಿ ಬೆಚ್ಚಿ ಬಿದ್ದಿದೆ. ಹೇಗಾದರೂ ಮಾಡಿ ಭಾರತವನ್ನ ಮನಒಲಿಸಿ ಟೂರ್ನಿ ಆಯೋಜನೆ ಮಾಡಲು ಐಸಿಸಿ ಮುಂದಾಗಿದೆ. 


ಲಂಡನ್(ಫೆ.21): ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ಎಲ್ಲಾ ವ್ಯವಹಾರ ನಿಲ್ಲಿಸಲು ಒತ್ತಾಯ ಕೇಳಿಬರುತ್ತಿದೆ. ಅದರಲ್ಲೂ ಪ್ರಮುಖವಾಗಿ ಇಂಡೋ-ಪಾಕ್ ಕ್ರಿಕೆಟ್ ಸಂಪೂರ್ಣ ಸ್ಥಗಿತಗೊಳಿಸುವಂತೆ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. 2019ರ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಬಹಿಷ್ಕರಿಸುವಂತೆ ಆಗ್ರಹ ಹೆಚ್ಚಾಗಿದೆ.

ಇದನ್ನೂ ಓದಿ: ಪಾಕ್ ಜೊತೆ ಕ್ರಿಕೆಟ್ ಮಾತ್ರವಲ್ಲ ಯಾವುದೇ ಕ್ರೀಡೆ ಬೇಡ: ಗಂಗೂಲಿ!

Tap to resize

Latest Videos

ಭಾರತದ ನಡೆಯಿಂದ ಐಸಿಸಿ ಬೆಚ್ಚಿ ಬಿದ್ದಿದೆ. ಕಾರಣ ಭಾರತ ಹಾಗೂ ಪಾಕಿಸ್ತಾನ ನಡುವಿನ ಲೀಗ್ ಪಂದ್ಯಕ್ಕೆ 4 ಲಕ್ಷ ಟಿಕೆಟ್ ಬೇಡಿಕೆ ಇದೆ. ಇದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಅಥವಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇರೋ ಬೇಡಿಕೆಗಿಂತ 4 ಪಟ್ಟು ಹೆಚ್ಚು ಎಂದು ವಿಶ್ವಕಪ್ ಟೂರ್ನಿ ಆಯೋಜನೆ ನಿರ್ದೇಶಕ ಸ್ಟೀವ್ ಎಲ್ವರ್ಥಿ ಹೇಳಿದ್ದಾರೆ.

ಇದನ್ನೂ ಓದಿ: ಪುಲ್ವಾಮಾ ದಾಳಿ: ಕಂಗಾಲಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಹತಾಶೆ ಮಾತು!

ಭಾರತ ಹಾಗೂ ಪಾಕಿಸ್ತಾನ ಪಂದ್ಯ ರದ್ದಾದರೆ ಈ ಬಾರಿಯ ವಿಶ್ವಕಪ್ ಟೂರ್ನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಪಂದ್ಯದ ಪ್ರಸಾರ, ಜಾಹೀರಾತು, ಕ್ರೀಡಾಂಗಣದಲ್ಲಿನ ಜಾಹೀರಾತು ಸೇರಿದಂತೆ ಎಲ್ಲಾ ಪ್ರಾಯೋಜಕತ್ವ ರದ್ದಾಗಲಿದೆ. ಪಾಕಿಸ್ತಾನ ವಿರುದ್ದ ಕ್ರಿಕೆಟ್ ಪಂದ್ಯವನ್ನ ಭಾರತ ಬಹಿಷ್ಕರಿಸಬಾರದು. ಇದನ್ನ ಕ್ರೀಡೆಯಾಗಿ ನೋಡಿ ಎಂದು ಸ್ಟೀವ್ ಎಲ್ವರ್ಥಿ ಹೇಳಿದ್ದಾರೆ.

click me!