
ಬೆಂಗಳೂರು(ಅ.05): ನಗರದ ಫುಟ್ಬಾಲ್ ಪ್ರತಿಭೆ ಇಶನ್ ಪಂಡಿತಾ, ಯೂರೋಪಿನ ಪ್ರತಿಷ್ಠಿತ ಲಾ ಲಿಗಾ ಫುಟ್ಬಾಲ್ ಕ್ಲಬ್‌ನ ಲೆಗಾನ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ, ಲಾ ಲಿಗಾಗೆ ಲಗ್ಗೆಯಿಟ್ಟಮೊಟ್ಟಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಮುಂದಿನ ಒಂದು ವರ್ಷದ ಅವಧಿಯವರೆಗೆ ಲೆಗಾನ್ಸ್ ತಂಡದಲ್ಲಿರುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆಂದು ‘ಇಂಡಿಯನ್ ಎಕ್ಸ್ಪ್ರೆಸ್’ ಹೇಳಿದೆ.
ಇತ್ತೀಚೆಗೆ ನಡೆದ ಸರಳ ಸ್ವಾಗತ ಸಮಾರಂಭದಲ್ಲಿ ಕಾಶ್ಮೀರ ಮೂಲದ ಇಶನ್ ಪಂಡಿತಾಗೆ 50ರ ಸಂಖ್ಯೆಯಲ್ಲಿ ಅಚ್ಚಾಗಿರುವ ಜೆರ್ಸಿಯನ್ನು ನೀಡಿದ ಫ್ರಾಂಚೈಸಿಯ ಉಪಾಧ್ಯಕ್ಷ ಹಾಗೂ ಮಾಲೀಕ ಫೆಲಿಪೆ ಮೊರೆನೊ ಅವರು, ಆರಂಭದಲ್ಲಿ ಪಂಡಿತಾ ಅವರು, ಲೆನಾಗ್ಸ್ ಕಿರಿಯರ ತಂಡವಾದ ಲೆಗಾನ್ಸ್ ಬಿ ಪರವಾಗಿ ಆಡಲಿದ್ದು, ಅವರ ಪ್ರದರ್ಶನದ ಆಧಾರದಲ್ಲಿ ಹಿರಿಯರ ತಂಡದಲ್ಲಿ ಆಡಲಿದ್ದಾರೆಂದು ತಿಳಿಸಿದ್ದಾರೆ.
ಲೆಗಾನ್ಸ್ ತಂಡಕ್ಕೆ ಸೇರ್ಪಡೆಗೊಂಡಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಇಶನ್ ‘‘ಫುಟ್ಬಾಲ್ ಕ್ರೀಡೆಯಲ್ಲಿ ಹೆಚ್ಚಿನ ಮಟ್ಟದ ತರಬೇತಿ ಪಡೆಯಲು ಮೂರು ವರ್ಷಗಳ ಹಿಂದೆಯೇ ಸ್ಪೇನ್‌ಗೆ ಆಗಮಿಸಿ ಕಠಿಣ ತರಬೇತಿ ಪಡೆದಿದ್ದೇನೆ. ಆ ತಪಸ್ಸಿಗೆ ಇಂದು ಫಲ ಸಿಕ್ಕಿದೆ’’ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.