ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶನ್ ಕಿಶನ್ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ’ಎ’ ತಂಡವು ದಕ್ಷಿಣ ಆಫ್ರಿಕಾ ’ಎ’ ತಂಡದ ವಿರುದ್ಧ 2 ವಿಕೆಟ್‌ಗಳ ಜಯ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ತಿರುವನಂತಪುರಂ[ಸೆ.01]: ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ 2ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ‘ಎ’ 2 ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದಿದೆ.
ಅನಧಿಕೃತ ಒನ್ ಡೇ: ಭಾರತ ’ಎ’ಗೆ 69 ರನ್ ಜಯ
undefined
ಮಳೆಯಿಂದಾಗಿ ಹೊರಾಂಗಣ ಮೈದಾನ ಒದ್ದೆಯಾಗಿದ್ದರಿಂದ ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಮಧ್ಯಾಹ್ನ 1.45ಕ್ಕೆ ಆರಂಭವಾಯಿತು. ಪಂದ್ಯವನ್ನು 21 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ದ.ಆಫ್ರಿಕಾ ಜಾರ್ಜ್ ಲಿಂಡೆ (52) ಅರ್ಧಶತಕದಿಂದಾಗಿ 21 ಓವರಲ್ಲಿ 5 ವಿಕೆಟ್‌ಗೆ 162 ರನ್‌ಗಳಿಸಿತು.
ಭಾರತ ’ಎ’ ಪರ ಕಣಕ್ಕಿಳಿಯಲು ರೆಡಿಯಾದ ಶಿಖರ್ ಧವನ್
ಈ ಸವಾಲಿನ ಗುರಿ ಬೆನ್ನತ್ತಿದ ಭಾರತ ಇಶಾನ್ ಕಿಶನ್ (55 ರನ್, 24 ಎಸೆತ) ನೆರವಿನಿಂದ ಇನ್ನು 6 ಎಸೆತ ಬಾಕಿ ಇರುವಂತೆ 8 ವಿಕೆಟ್‌ಗೆ 163 ರನ್‌ಗಳಿಸಿ ಜಯದ ನಗೆ ಬೀರಿತು. ಇನ್ನು ಮೂರನೇ ಏಕದಿನ ಪಂದ್ಯ ಸೆಪ್ಟೆಂಬರ್ 02ರಂದು ನಡೆಯಲಿದೆ.
ಸ್ಕೋರ್:
ದ.ಆಫ್ರಿಕಾ ‘ಎ’ 162/5,
ಭಾರತ ‘ಎ’ 163/8