ಕಾಶ್ಮೀರದಲ್ಲಿ ಹೈಅಲರ್ಟ್; ಕಣಿವೆ ರಾಜ್ಯ ತೊರೆಯಲು ಇರ್ಫಾನ್‌ಗೆ ಸೂಚನೆ!

By Web DeskFirst Published Aug 4, 2019, 2:05 PM IST
Highlights

ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ನೆಟ್ಟಗಿಲ್ಲ. ಗಡಿಯಲ್ಲಿ ಗುಂಡಿನ ಮೊರೆತ ಕೇಳಿಸುತ್ತಿದೆ.  ಹೀಗಾಗಿ ಕಣಿವೆ ರಾಜ್ಯಕ್ಕೆ ಯಾರೂ ಪ್ರವಾಸ ಮಾಡದಂತೆ ಹಾಗೂ  ಸದ್ಯ ಪ್ರವಾಸದಲ್ಲಿರುವವರನ್ನು ತಕ್ಷಣ ವಾಪಾಸ್ ಆಗಲು ಸೂಚಿಸಿದೆ. ಆದರೆ ಬರೋಡಾ ಕ್ರಿಕೆಟಿಗ ಇರ್ಫಾನ್ ಪಠಾಣ್‌ಗೂ ಭಾರತೀಯ ಸೇನೆ ಸೂಚನೆ ನೀಡಿದೆ. ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸೇನೆ ಸೂಚನೆ ನೀಡಿದ್ದೇಕೆ? ಇಲ್ಲಿದೆ ಹೆಚ್ಚಿನ ವಿವರ.

ಕಾಶ್ಮೀರ(ಆ.04): ತಕ್ಷಣವೇ ಜಮ್ಮ ಮತ್ತು ಕಾಶ್ಮೀರ ಬಿಟ್ಟು ತೆರಳುವಂತೆ ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್‌ಗೆ ಭಾರತೀಯ ಸೇನೆ ಸೂಚನೆ ನೀಡಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿಲ್ಲ. ಹೀಗಾಗಿ ಸೇನೆ  ಜಮ್ಮು ಮತ್ತು ಕಾಶ್ಮೀರ ರಣಜಿ ತಂಡದ ಆಟಗಾರ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇರ್ಫಾನ್ ಪಠಾಣ್‌ಗೆ  ಸೂಚನೆ ನೀಡಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಸೇನಾ ಕ್ರಾಂತಿ; ಆತಂಕದಲ್ಲಿ ಧೋನಿ ಫ್ಯಾನ್ಸ್!

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಶಬ್ದಗಳು ಕೇಳಿಸುತ್ತಿವೆ. ಭಾರತೀಯ ಸೇನೆ ಶಾಂತಿ ಕಾಪಾಡಲು ಎಲ್ಲಾ ರೀತಿ ಸಜ್ಜಾಗಿದೆ. ಸ್ವಾತಂತ್ರತ್ಯ ದಿನಚಾರಣೆ ಹಿನ್ನಲೆಯಲ್ಲಿ ದೇಶದೊಳಗ್ಗೆ ನುಗ್ಗಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಇನ್ನು ಕಣಿವೆ ರಾಜ್ಯದ ಪ್ರವಾಸಿಗರನ್ನು ವಾಪಾಸ್ ತೆರಳು ಸೂಚಿಸಿದೆ. ಅಮರನಾಥ ಯಾತ್ರಾರ್ಥಿಗಳಿಗೂ ಸೂಚನೆ ನೀಡಲಾಗಿದೆ. ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ರಣಜಿ ತಂಡಕ್ಕೂ ಸೂಚಿಸಲಾಗಿದೆ.

ಇದನ್ನೂ ಓದಿ:ಯೋಧರಿಗೆ ಹಾಡಿನ ಮೂಲಕ ಸ್ಫೂರ್ತಿ ತುಂಬಿದ ಸೈನಿಕ ಧೋನಿ!

ಇರ್ಫಾನ್ ಪಠಾಣ, ಕೋಚ್ , ಸಹಾಯ ಸಿಬ್ಬಂಧಿಗಳ ಹಾಗೂ ಆಟಗಾರರಿಗೆ ಸೂಚನೆ ನೀಡಲಾಗಿದೆ. ತಕ್ಷಣವೇ ತಮ್ಮ ತಮ್ಮ ಮನೆಗಳಿಗೆ ತೆರಳುವಂತೆ ಸೂಚಿಸಿದೆ. JKCA ಕ್ರೀಡಾಂಗಣದಲ್ಲಿ ಯಾವುಗೇ ಪಂದ್ಯ, ಅಭ್ಯಾಸ ಆಡದಂತೆ ಸೂಚಿಸಲಾಗಿದೆ. ಇಷ್ಟೇ ಅಲ್ಲ ಕ್ರೀಡಾಂಗಣದಲ್ಲೂ ಯಾರೂ ಉಳಿದಂತೆ ಸೂಚಿಸಲಾಗಿದೆ. ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಗೆ ಸೂಚನೆ ನೀಡಿದೆ. ಇದೀಗ JKCA ಇರ್ಫಾನ್ ಪಠಾಣ್ ಸೇರಿದಂತೆ ತಂಡಕ್ಕೆ ಮಾಹಿತಿ ರವಾನಿಸಿದೆ.

click me!