
ಬರ್ಮಿಂಗ್‌ಹ್ಯಾಮ್‌ಆ.04): ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆಶ್ಯಸ್ ಟೂರ್ನಿಯ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. 3ನೇ ದಿನದ ಮುಕ್ತಾಯಕ್ಕೆ ಆಸ್ಟ್ರೇಲಿಯಾ 34 ರನ್ ಮುನ್ನಡೆ ಪಡೆದುಕೊಂಡಿದ್ದು, ಸಮಬಲದ ಹೋರಾಟ ಮೂಡಿ ಬಂದಿದೆ. ಆದರೆ ಈ ಪಂದ್ಯದಲ್ಲಿ ತವರಿನ ಇಂಗ್ಲೆಂಡ್ ಅಭಿಮಾನಿಗಳು, ಆಸಿಸ್ ತಂಡ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್‌ರನ್ನು ಕಾಡುತ್ತಲೇ ಇದ್ದಾರೆ. ಇದೀಗ ವಾರ್ನರ್ ತಕ್ಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಸಚಿನ್,ಹೆಡನ್ ದಿಗ್ಗಜರ ಸಾಲಿಗೆ ಸೇರಿದ ಡೇವಿಡ್ ವಾರ್ನರ್!
ಟೆಸ್ಟ್ ಪಂದ್ಯದ ಮೊದಲ ದಿನ ಸ್ಟೀವ್ ಸ್ಮಿತ್ ಕಣ್ಣೀರು ಹಾಕುತ್ತಿರುವ ಮುಖವಾಡ ಧರಿಸಿ ಅವಮಾನಿಸಿದ್ದ ಅಭಿಮಾನಿಗಳು ಇದೀಗ ಸ್ಯಾಂಡ್ ಪೇಪರ್ ಬಳಸಿ ವಾರ್ನರ್‌ನ್ನು ಕಿಚಾಯಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಸ್ಯಾಂಡ್ ಪೇಪರ್ ಬಳಸಿ ಬಾಲ್ ಟ್ಯಾಂಪರ್ ಮಾಡಿದ್ದರು. ಬಳಿಕ ನಿಷೇಧಕ್ಕೆ ಒಳಗಾಗಿದ್ದರು. ಇದೀಗ ಇದೇ ಸ್ಯಾಂಡ್ ಪೇಪರ್ ಮೂಲಕ ಅಭಿಮಾನಿಗಳು ವಾರ್ನರ್ ಕುಟುಕಿದ್ದಾರೆ. ಇದಕ್ಕೆ ವಾರ್ನರ್ ಪ್ಯಾಂಟ್ ಕಿಸೆ ಖಾಲಿ ಇರುವುದಾಗಿ ತೋರಿಸಿ, ಇಂಗ್ಲೆಂಡ್ ಅಭಿಮಾನಿಗಳಿಗೆ ತಕ್ಕ ಉತ್ತರ ನೀಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.