
ಲಾರ್ಡ್ಸ್(ಜು.24): ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಇಂಗ್ಲೆಂಡ್ ಚಾಂಪಿಯನ್ ಆಗಿ ಮೆರೆದಾಡಿದೆ. ಇಂಗ್ಲೆಂಡ್ ಪ್ರಶಸ್ತಿ ಗೆದ್ದು 10 ದಿನ ಆದ ಬೆನ್ನಲ್ಲೇ ಬಹುದೊಡ್ಡ ಆಘಾತ ಅನುಭವಿಸಿದೆ. ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಕೇವಲ 85 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಬಲಿಷ್ಠ ಟೆಸ್ಟ್ ತಂಡವೊಂದು ಅಲ್ಪಮೊತ್ತ ಆಲೌಟ್ ಆದ ಅಪಖ್ಯಾತಿಗೆ ಗುರಿಯಾಗಿದೆ.
ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದ ಇಂಗ್ಲೆಂಡ್ ತೀವ್ರ ಮುಖಭಂಗ ಅನುಭವಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್‌ಗೆ ಯಾರೂ ಕೂಡ ಆಸರೆಯಾಗಲಿಲ್ಲ. ರೊರಿ ಬರ್ನ್ಸ್ 6, ಜೇಸನ್ ರಾಯ್ 5 ಸಿಡಿಸಿ ಔಟಾದರು. ಜೋ ಡೆನ್ಲಿ 23 ರನ್ ಕಾಣಿಕೆ ನೀಡಿದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಪೈಕಿ ಡೆನ್ಸಿ ಗರಿಷ್ಠ ರನ್ ಸ್ಕೋರರ್. ನಾಯಕ ಜೋ ರೂಟ್ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು.
ಜಾನಿ ಬೈರ್‌ಸ್ಟೋ, ಮೊಯಿನ್ ಆಲಿ ಹಾಗೂ ಕ್ರಿಸ್ ವೋಕ್ಸ್ ಶೂನ್ಯ ಸುತ್ತಿದರು. ಸ್ಯಾಮ್ ಕುರ್ರನ್ 18 ರನ್ ಕಾಣಿಕೆ ನೀಡಿದರೆ, ಸ್ಟುವರ್ಟ್ ಬ್ರಾಡ್ 3 ರನ್ ಸಿಡಿಸಿ ಔಟಾದರು. ಒಲ್ಲಿ ಸ್ಟೊನ್ 19 ರನ್ ಸಿಡಿಸಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 85 ರನ್‌ಗೆ ಆಲೌಟ್ ಆಗಿದೆ. ಐರ್ಲೆಂಡ್ ಪರ ಟಿಮ್ ಮಾರ್ತಾಗ್ 5 ವಿಕೆಟ್ ಕಬಳಿಸಿ ಮಿಂಚಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.