IPL ಟೂರ್ನಿಯಲ್ಲಿ ಮಹತ್ತರ ಬದಲಾವಣೆ; 8ರ ಬದಲು 10 ತಂಡ?

Published : Jul 14, 2019, 05:00 PM IST
IPL ಟೂರ್ನಿಯಲ್ಲಿ ಮಹತ್ತರ ಬದಲಾವಣೆ; 8ರ ಬದಲು 10 ತಂಡ?

ಸಾರಾಂಶ

IPL ಟೂರ್ನಿಯಲ್ಲಿ ಕೆಲ ಬದಲಾವಣೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಸದ್ಯ 8 ತಂಡವಿರುವ ಐಪಿಎಲ್ ಟೂರ್ನಿ ಇನ್ಮುಂದೆ 10 ತಂಡಗಳಾಗಿ ವಿಸ್ತರಿಸಲಿದೆ.  2020ರ ಐಪಿಎಲ್ ಟೂರ್ನಿಯಲ್ಲೇ ಬದಲಾವಣೆಗಳು ಜಾರಿಗೊಳಿಸಲು ಬಿಸಿಸಿಐ ಬ್ರೂ ಪ್ರಿಂಟ್ ರೆಡಿ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

World cup Final: ಇಂಗ್ಲೆಂಡ್ vs ನ್ಯೂಜಿಲೆಂಡ್ ಪಂದ್ಯದ ಸ್ಕೋರ್ ಎಷ್ಟು?

ಮುಂಬೈ(ಜು.14): ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬಳಿಕ ಅಭಿಮಾನಿಗಳು ಇದೀಗ ಮುಂದಿನ ಸರಣಿಗಾಗಿ ಕಾಯುತ್ತಿದ್ದಾರೆ. ಇದರ ಜೊತೆಗೆ ವಿದಾಯದ ಮಾತುಗಳ ಬೆನ್ನಲ್ಲೇ ಎಂ.ಎಸ್.ಧೋನಿ 2020ರ ಐಪಿಎಲ್ ಟೂರ್ನಿ ಆಡಲಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ. ಈ ಬೆಳವಣಿಗೆಗಳ ನಡುವೆ ಮುಂಬರುವ ಐಪಿಎಲ್ ಟೂರ್ನಿಗೆ ಹೊಸ ಟಚ್ ನೀಡಲು ಬಿಸಿಸಿಐ ಮುಂದಾಗಿದೆ.

ಇದನ್ನೂ ಓದಿ: KKR ತಂಡಕ್ಕೆ ಕೋಚ್ ಜಾಕ್ ಕಾಲಿಸ್ ಗುಡ್ ಬೈ!

ಸದ್ಯ 8 ತಂಡಗಳು ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. 2020ರ ಐಪಿಎಲ್ ಟೂರ್ನಿಯಲ್ಲಿ 8ರ ಬದಲು 10 ತಂಡಗಳನ್ನು ಕಣಕ್ಕಿಳಿಸಲು ಬಿಸಿಸಿಐ ಚಿಂತಿಸಿದೆ. ಫ್ರಾಂಚೈಸಿಗಳು ಕೂಡ ಒಲವು ತೋರಿದ್ದಾರೆ. ಇನ್ನುಳಿದ 2 ತಂಡಕ್ಕೆ ಬಿಡ್ ಮಾಡಲು ಹಲವರು ಮುಂದೆ ಬಂದಿದ್ದಾರೆ. ಅಹಮ್ಮದಾಬಾದ್ ನಗರದಿಂದ ಅದಾನಿ ಗ್ರೂಪ್, ಪುಣೆಯಿಂದ ಸಂಜೀವ್ ಗೊಯೆಂಕಾ ಗ್ರೂಪ್ ಹಾಗೂ ರಾಂಚಿ ಮತ್ತು ಜೆಮ್ಶೆಡ್‌ಪುರದಿಂದ ಟಾಟಾ ಗ್ರೂಪ್ ಐಪಿಎಲ್ ತಂಡ ಖರೀದಿಸಲು ಮುಂದೆ ಬಂದಿದೆ.

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಕೊಹ್ಲಿ,ಶಾಸ್ತ್ರಿಗೆ ಬಿಸಿಸಿಐ ಬುಲಾವ್!

ಬಿಸಿಸಿಐ ಈಗಾಗಲೇ 10 ತಂಡಗಳ ಐಪಿಎಲ್ ಟೂರ್ನಿ ಆಯೋಜಿಸಿದೆ. ಆದರೆ 2011ರಲ್ಲಿ ಹಲವು ಕಾರಣಗಳಿಂದ ಮುಂದುವರಿಯಲಿಲ್ಲ. ಇದೀಗ ಮತ್ತೆ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಶೀಘ್ರದಲ್ಲೇ ಬಿಸಿಸಿಐ ಹಾಗೂ 8 ಐಪಿಎಲ್ ಫ್ರಾಂಚೈಸಿ ಜೊತೆ ಸಭೆ ನಡೆಸಲಿದೆ. ಟೆಂಡರ್ ಪ್ರಕ್ರಿಯೆ ಬ್ಲೂ ಪ್ರಿಂಟ್ ರೆಡಿಯಾಗಿದೆ. ಫ್ರಾಂಚೈಸಿ ಜೊತೆಗಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಬಿಸಿಸಿಐ ನಿರ್ಧರಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್