ಮೊದಲ ಸುತ್ತಿನಲ್ಲಿ ಹಿರಿಯ ಆಲ್ರೌಂಡರ್ ಯುವರಾಜ್ ಸಿಂಗ್ ಖರೀದಿಸಲು ಯಾರು ಮುಂದೆ ಬರಲಿಲ್ಲ. ಆದರೆ 2ನೇ ಸುತ್ತಿನಲ್ಲಿ ಯುವಿ ಸೇಲಾಗಿದ್ದಾರೆ. ಹಾಗಾದರೆ ಯುವಿ ಯಾವ ತಂಡದ ಪಾಲಾಗಿದ್ದಾರೆ. ಇಲ್ಲಿದೆ ವಿವರ.
ಜೈಪುರ(ಡಿ.18): ಐಪಿಎಲ್ ಹರಾಜಿನ ಮೊದಲ ಸುತ್ತಿನಲ್ಲಿ ಹರಾಜಾಗದೆ ನಿರಾಸೆ ಅನುಭವಿಸಿದ್ದ ಹಿರಿಯ ಆಲ್ರೌಂಡರ್ ಯುವರಾಜ್ ಸಿಂಗ್ 2ನೇ ಸುತ್ತಿನಲ್ಲಿ ಮಾರಾಟವಾಗಿದ್ದಾರೆ. ಯುವಿಯನ್ನ ಮುಂಬೈ ಇಂಡಿಯನ್ಸ್ 1 ಕೋಟಿ ರೂಪಾಯಿಗೆ ಖರೀದಿಸಿದೆ.
ಇದನ್ನೂ ಓದಿ: ಐಪಿಎಲ್ ಹರಾಜು 2019: 16 ವರ್ಷದ ಪೋರನಿಗೆ 1.5 ಕೋಟಿ ನೀಡಿದ ಆರ್‌ಸಿಬಿ
ಫಾರ್ಮ್ ಕಳೆದುಕೊಂಡಿರುವ ಯುವರಾಜ್ ಸಿಂಗ್ ಈ ಬಾರಿಯ ಮೊದಲ ಸುತ್ತಿನ ಹರಾಜಿನಲ್ಲಿ ಯಾರು ಖರೀದಿಸಲಿಲ್ಲ. ಬಳಿಕ ಅನ್‌ಸೋಲ್ಡ್ ಆಟಗಾರರ ಎರಡನೇ ಹರಾಜಿನಲ್ಲಿ ಯುವಿಯನ್ನ ಮುಂಬೈ ಇಂಡಿಯನ್ಸ್ ಖರೀದಿಸಿತು. ಈ ಮೂಲಕ ಯುವಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು.
ಇದನ್ನೂ ಓದಿ: ಕನ್ನಡಿಗನನ್ನ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಯುವಿ ಮೂಲ ಬೆಲೆಗೆ ಮಾರಾಟವಾಗಿದ್ದಾರೆ. ಕಳೆದ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲಿದ್ದ ಯುವಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಹಲವು ಪಂದ್ಯದಿಂದ ಹೊರಗುಳಿದಿದ್ದರು. ಯುವಿ ಟೀಮ್ ಮೇಟ್ ಜಹೀರ್ ಖಾನ್ ಮುಂಬೈ ಸ್ಟಾಪ್ ಆಗಿ ಸೇರಿಕೊಂಡ ಬೆನ್ನಲ್ಲೇ ಯುವಿ ಕೂಡ ಮುಂಬೈ ಪಾಲಾಗಿರೋದು ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ.