ಬರೋಬ್ಬರಿ 5 ಕೋಟಿ ನೀಡಿ ಶಿವಂ ದುಬೆ ಖರೀದಿಸಿದ RCB

By Web Desk  |  First Published Dec 18, 2018, 6:09 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ಈವರೆಗೆ ಐವರು ಆಟಗಾರರನ್ನ ಖರೀದಿಸಿದೆ. ಇವರಲ್ಲಿ ಶಿವಂ ದುಬೆಗೆ ಗರಿಷ್ಠ ಮೊತ್ತ ನೀಡಿ ಆರ್‌ಸಿಬಿ ಖರೀದಿ ಮಾಡಿದೆ. ಆರ್‌ಸಿಬಿ ತಂಡದ ಹರಾಜು ಡೀಟೇಲ್ಸ್ ಇಲ್ಲಿದೆ.
 


ಜೈಪುರ(ಡಿ.18): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ನಡೆಯುತ್ತಿರುವ ಐಪಿಎಲ್ ಹರಾಜಿನಲ್ಲಿ ಮತ್ತೊರ್ವ ಆಟಗಾರನನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈಗಾಗಲೇ ಶಿಮ್ರೊನ್ ಹೆಟ್ಮೆಯರ್ 4.2 ಕೋಟಿ ಮೊತ್ತಕ್ಕೆ ಖರೀದಿಸಿದ್ದ ಆರ್‌ಸಿಬಿ, ಇದೀಗ ಮುಂಬೈ ಯುುವ ಕ್ರಿಕೆಟಿಗ ಶಿವಂ ದುಬೆನನ್ನ ಬರೋಬ್ಬರಿ 5 ಕೋಟಿ ರೂಪಾಯಿಗೆ ಖರೀದಿಸಿದೆ.

ಇದನ್ನೂ ಓದಿ: #IPLAuction2019: ಅಚ್ಚರಿಯ ಬೆಲೆಗೆ ಪಂಜಾಬ್ ತಂಡ ಸೇರಿದ ಆಲ್ರೌಂಡರ್..!

Tap to resize

Latest Videos

ಶಿವಂ ದುಬೆ ಮೂಲ ಬೆಲೆ 20 ಲಕ್ಷ ರೂಪಾಯಿ. ಆದರೆ ಆರ್‌ಸಿಬಿ 5 ಕೋಟಿ ನೀಡಿ ಖರೀದಿಸಿತು. ಮುಂಬೈನ ಆಲ್ರೌಂಡರ್ ಶಿವಂ ದುಬೆ ಬಲಗೈ ವೇಗಿ ಹಾಗೂ ಎಡಗೈ ಬ್ಯಾಟ್ಸ್‌ಮನ್. ಬರೋಡ ವಿರುದ್ಧ ರಣಜಿ  ಪಂದ್ಯದಲ್ಲಿ ಶವಂ ದುಬೆ 5 ಎಸೆತದಲ್ಲಿ 5 ಸಿಕ್ಸರ್ ಸಿಡಿಸಿ ಮಿಂಚಿದ್ದರು.  

ಮೊದಲ ಸೆಶನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವೆಸ್ಟ್ಇಂಡೀಸ್ ಯುವ ಬ್ಯಾಟ್ಸ್‌ಮನ್ ಶಿಮ್ರೊಮ್ ಹೆಟ್ಮೆಯರ್ ಅವರನ್ನ 4.2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇನ್ನು ಟೀಂ ಇಂಡಿಯಾ ಆಲ್ರೌಂಡರ್ ಗುರಕೀರತ್ ಸಿಂಗ್ ಮಾನ್ ಅವರನ್ನ 50 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ. ಆದರೆ ಎರಡನೇ ಸೆಶನ್‌ನಲ್ಲಿ ಆರ್‌ಸಿಬಿ ತಂಡ ಯಾರನ್ನೂ ಖರೀದಿಸಲಿಲ್ಲ. ತೃತೀಯ ಹರಾಜಿನ ಸೆಶನ್‌ನಲ್ಲಿ ಆರ್‌ಸಿಬಿ ಕನ್ನಡಿಗ ದೇವದತ್ ಪಡಿಕ್ಕಲ್‌ಗೆ 20 ಲಕ್ಷ ರೂಪಾಯಿ ಖರೀದಿಸಿದರೆ,  ಶಿವಂ ದುಬೆಯನ್ನ 5 ಕೋಟಿಗೆ ಖರೀದಿಸಿತು.

ಐಪಿಎಲ್ ಹರಾಜು 2019: 4.2 ಕೋಟಿಗೆ RCB ಪಾಲಾದ ಶಿಮ್ರೊನ್ ಹೆಟ್ಮೆಯರ್ 
ಐಪಿಎಲ್ ಹರಾಜು 2019: 50 ಲಕ್ಷಕ್ಕೆ ಗುರಕೀರತ್ ಸಿಂಗ್ ಮಾನ್ ಖರೀದಿಸಿದ RCB
ಐಪಿಎಲ್ ಹರಾಜು 2019: ಕನ್ನಡಿಗ ದೇವದತ್ ಪಡಿಕ್ಕಲ್ ಆರ್‌ಸಿಬಿ ಪಾಲು
ಐಪಿಎಲ್ ಹರಾಜು 2019: 5 ಕೋಟಿಗೆ RCB ಪಾಲಾದ ಶಿವಂ ದುಬೆ
 

click me!