ಉನದ್ಕಟ್ ಗರಿಷ್ಠ ಮೊತ್ತಕ್ಕೆ ಸೇಲ್ -ಯುವಿ ಅನ್‌ಸೋಲ್ಡ್!

Published : Dec 18, 2018, 05:17 PM IST
ಉನದ್ಕಟ್ ಗರಿಷ್ಠ ಮೊತ್ತಕ್ಕೆ ಸೇಲ್ -ಯುವಿ ಅನ್‌ಸೋಲ್ಡ್!

ಸಾರಾಂಶ

ಐಪಿಎಲ್ ಹರಾಜು ಪ್ರಕ್ರಿಯೆ ಜೈಪುರದಲ್ಲಿ ನಡೆಯುತ್ತಿದೆ. ಈವರೆಗಿನ ಹರಾಜಿನಲ್ಲಿ ಸೇಲಾದ ಆಟಗಾರರು ಯಾರು? ಮಾರಾಟವಾಗದೇ ಉಳಿದ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.  

ಜೈಪುರ(ಡಿ.18): ಐಪಿಎಲ್ 12ನೇ ಆವೃತ್ತಿಗಾಗಿ ನಡೆಯುತ್ತಿರುವ ಹರಾಜು ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದೆ. ನಿರೀಕ್ಷಿತ ಕ್ರಿಕೆಟಿಗರು ಸೇಲಾಗದೇ ಉಳಿದರೆ, ವೇಗಿ ಜಯದೇವ್ ಉನಾದ್ಕಟ್ ಮತ್ತೆ ಗರಿಷ್ಠ ಮೊತ್ತಕ್ಕೆ ಸೇಲಾಗೋ ಮೂಲಕ ದಾಖಲೆ ಬರೆದಿದ್ದಾರೆ.

ಜಯದೇವ್ ಉನಾದ್ಕಟ್ ಬರೋಬ್ಬರಿ 8.4 ಕೋಟಿ ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದಾರೆ. 2018ರಲ್ಲಿ ಮಾರಾಟವಾಗದೇ ಉಳಿದಿದ್ದ ಇಶಾಂತ್ ಶರ್ಮಾ 1.1 ಕೋಟಿಗೆ ಡೆಲ್ಲಿ ತಂಡ ಸೇರಿಕೊಂಡಿದ್ದಾರೆ. ಇನ್ನು ಲಸಿತ್ ಮಲಿಂಗಾಗೆ 2 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿತು. ಆದರೆ ಎರಡನೇ ಸೆಶನ್‌ನಲ್ಲಿ ಆರ್‌ಸಿಬಿ ತಂಡ ಯಾರನ್ನೂ ಖರೀದಿಸಲಿಲ್ಲ. ಮೊದಲ ಸೆಶನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವೆಸ್ಟ್ಇಂಡೀಸ್ ಯುವ ಬ್ಯಾಟ್ಸ್‌ಮನ್ ಶಿಮ್ರೊಮ್ ಹೆಟ್ಮೆಯರ್ ಅವರನ್ನ 4.2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇನ್ನು ಟೀಂ ಇಂಡಿಯಾ ಆಲ್ರೌಂಡರ್ ಗುರಕೀರತ್ ಸಿಂಗ್ ಮಾನ್ ಅವರನ್ನ 50 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ.

ಎರಡನೇ ಸೆಶನ್ ಆಕ್ಷನ್ ವಿವರ ಇಲ್ಲಿದೆ.

ಐಪಿಎಲ್ ಹರಾಜು 2019:  8.4 ಕೋಟಿ ಮೊತ್ತಕ್ಕೆ ರಾಜಸ್ಥಾನ ಪಾಲಾದ ಉನಾದ್ಕಟ್

ಐಪಿಎಲ್ ಹರಾಜು 2019: 1.1 ಕೋಟಿಗೆ ಡೆಲ್ಲಿ ಪಾಲಾದ ಇಶಾಂತ್ ಶರ್ಮಾ

ಐಪಿಎಲ್ ಹರಾಜು 2019:  2 ಕೋಟಿ ಮೊತ್ತಕ್ಕೆ ಲಸಿತ್ ಮಲಿಂಗಾ ಮುಂಬೈ ಪಾಲು

ಐಪಿಎಲ್ ಹರಾಜು 2019: 4.8 ಕೋಟಿಗೆ ಪಂಜಾಬ್ ಪಾಲಾದ ಮೊಹಮ್ಮದ್ ಶಮಿ 

ಐಪಿಎಲ್ ಹರಾಜು 2019: ವರುಣ್ ಆ್ಯರೋನ್ 2.4 ಕೋಟಿಗೆ ರಾಜಸ್ಥಾನ ಪಾಲು

ಐಪಿಎಲ್ ಹರಾಜು 2019: ಮೊಹಿತ್ ಶರ್ಮಾ 5 ಕೋಟಿಗೆ ಚೆನ್ನೈ ತಂಡಕ್ಕೆ ಸೇಲ್

ಐಪಿಎಲ್ ಹರಾಜು 2019:  ರಾಹುಲ್ ಶರ್ಮಾ ಅನ್‌ಸೋಲ್ಡ್

ಐಪಿಎಲ್ ಹರಾಜು 2019: ಆ್ಯಡಮ್ ಜಂಪಾ ಅನ್‌ಸೋಲ್ಡ್

ಐಪಿಎಲ್ ಹರಾಜು 2019: ಖಾರಿ ಪಿಯೆರಾ ಅನ್‌ಸೋಲ್ಡ್

ಐಪಿಎಲ್ ಹರಾಜು 2019: ಫಾವದ್ ಅಹಮ್ಮದ್ ಅನ್‌ಸೋಲ್ಡ್


ಮೊದಲ ಸೆಶನ್ ಆಕ್ಷನ್ ವಿವರ
ಪಿಎಲ್ ಹರಾಜು 2019: 2 ಕೋಟಿಗೆ ಡೆಲ್ಲಿ ಪಾಲಾದ ಹನುಮಾ ವಿಹಾರಿ

ಐಪಿಎಲ್ ಹರಾಜು 2019: 4.2 ಕೋಟಿಗೆ RCB ಪಾಲಾದ ಶಿಮ್ರೊನ್ ಹೆಟ್ಮೆಯರ್ 

ಐಪಿಎಲ್ ಹರಾಜು 2019: ಕಾರ್ಲೋಸ್ ಬ್ರಾಥ್ವೈಟ್ 5 ಕೋಟಿಗೆ ಕೆಕೆಆರ್ ತಂಡದ ಪಾಲು

ಐಪಿಎಲ್ ಹರಾಜು 2019:  ಯುವರಾಜ್ ಸಿಂಗ್ ಅನ್‌ಸೋಲ್ಡ್

ಐಪಿಎಲ್ ಹರಾಜು 2019:  1 ಕೋಟಿಗೆ ಮೊಯಿಸಿಸ್ ಹೆನ್ರಿಕೆಸ್ ಖರೀದಿಸಿದ ಪಂಜಾಬ್

ಐಪಿಎಲ್ ಹರಾಜು 2019:  5 ಕೋಟಿಗೆ ಅಕ್ಸರ್ ಪಟೇಲ್ ಡೆಲ್ಲಿ ತಂಡದ ಪಾಲು

ಐಪಿಎಲ್ ಹರಾಜು 2019: 50 ಲಕ್ಷಕ್ಕೆ ಗುರಕೀರತ್ ಸಿಂಗ್ ಮಾನ್ ಖರೀದಿಸಿದ RCB

ಐಪಿಎಲ್ ಹರಾಜು 2019: 2.2 ಕೋಟಿಗೆ ಜಾನಿ ಬೈರಿಸ್ಟೋ ಖರೀದಿಸಿದ ಸನ್‌ರೈಸರ್ಸ್

ಐಪಿಎಲ್ ಹರಾಜು 2019: 4.2 ಕೋಟಿಗೆ ನಿಕೋಲಸ್ ಪೂರನ್ ಖರೀದಿಸಿದ ಪಂಜಾಬ್

ಐಪಿಎಲ್ ಹರಾಜು 2019: ವೃದ್ಧಿಮಾನ್ ಸಾಹ 1.2 ಕೋಟಿಗೆ ಸನ್‌ರೈಸರ್ಸ್ ಪಾಲು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!