
ಜೈಪುರ(ಡಿ.18): ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿಭಾನ್ವಿತ ಆಟಗಾರರಿಗೆ ಮಣೆ ಹಾಕಿದೆ. ಜೈಪುರದಲ್ಲಿ ನಡೆದ ಹರಾಜಿನಲ್ಲಿ ಆರ್‌ಸಿಬಿ 9 ಆಟಗಾರರನ್ನ ಖರೀದಿಸಿತು. ಈ ಬಾರಿ ಆರ್‌ಸಿಬಿ ಖರೀದಿಸಿ ಆಟಗಾರರ ಪೈಕಿ ಮುಂಬೈ ಆಲ್ರೌಂಡರ್ ಶಿವಂ ದುಬೆಗೆ ಗರಿಷ್ಠ ಮೊತ್ತ ನೀಡಿ ಆರ್‌ಸಿಬಿ ಖರೀದಿ ಮಾಡಿತು.
ಇದನ್ನೂ ಓದಿ: ಐಪಿಎಲ್ ಹರಾಜು: ಸೇಲಾಗಲಿಲ್ಲ ಕರ್ನಾಟಕ ಬೌಲರ್ಸ್ !
ಶಿವಂ ದುಬೆಗೆ ಆರ್‌ಸಿಬಿ ಬರೋಬ್ಬರಿ 5 ಕೋಟಿ ರೂಪಾಯಿ ನೀಡಿತು. ಎರಡನೇ ಗರಿಷ್ಟ ಖರೀದಿಗೆ ವೆಸ್ಟ್ಇಂಡೀಸ್‌ನ ಶಿಮ್ರೊನ್ ಹೆಟ್ಮೆಯರ್ ಪಾತ್ರರಾಗಿದ್ದಾರೆ. ಶಿಮ್ರೊನ್‌ಗೆ 4.2 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು. ಈ ಬಾರಿ ಕನ್ನಡಿಗ ಆಟಗಾರನಿಗೂ ಆರ್‌ಸಿಬಿ ಮಣೆ ಹಾಕಿತು. ದೇವದತ್ ಪಡಿಕ್ಕಲ್‌ಗೆ ಮೂಲ ಬೆಲೆ 20 ಲಕ್ಷ ನೀಡ ಖರೀದಿಸಿತು.
ಇದನ್ನೂ ಓದಿ: ಕೊನೆಗೂ ಹರಾಜಾದ ಯುವರಾಜ್ ಸಿಂಗ್-ಯಾವ ತಂಡಕ್ಕೆ?
ಹರಾಜಿನಲ್ಲಿ ಖರೀದಿಸಿದ ಆಟಗಾರರು:
ಶಿವಂ ದುಬೆ - 5 ಕೋಟಿ ರೂಪಾಯಿ
ಶಿಮ್ರೊನ್ ಹೆಟ್ಮೆಯರ್ - 4.2 ಕೋಟಿ ರೂಪಾಯಿ
ಅಕ್ಷದೀಪ್ ನಾಥ್ - 3.6 ಕೋಟಿ ರೂಪಾಯಿ
ಪ್ರಯಾಸ್ ರೇ ಬರ್ಮನ್- 1.5 ಕೋಟಿ ರೂಪಾಯಿ
ಹಿಮ್ಮತ್ ಸಿಂಗ್ -65 ಲಕ್ಷ ರೂಪಾಯಿ
ಗುರಕೀರತ್ ಸಿಂಗ್ ಮಾನ್ - 50 ಲಕ್ಷ ರೂಪಾಯಿ
ಹೆನ್ರಿಚ್ ಕ್ಲಾಸೆನ್- 50 ಲಕ್ಷ ರೂಪಾಯಿ
ದೇವದತ್ ಪಡಿಕ್ಕಲ್ 20 ಲಕ್ಷ ರೂಪಾಯಿ
ಮಿಲಿಂದ್ ಕುಮಾರ್ - 20 ಲಕ್ಷ ರೂಪಾಯಿ
ರಿಟೈನ್ ಆಟಗಾರರು:
ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್,. ಪಾರ್ಥೀವ್ ಪಟೇಲ್, ಯುಜುವೇಂದ್ರ ಚೆಹಾಲ್, ವಾಶಿಂಗ್ಟನ್ ಸುಂದರ್, ಪವನ್ ನೇಗಿ, ನಥನ್ ಕೌಲ್ಟರ್ ನೈಲ್, ಮೊಯಿನ್ ಆಲಿ, ಮೊಹಮ್ಮದ್ ಸಿರಾಜ್, ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ, ಟಿಮ್ ಸೌಥಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲ್ವಂತ್ ಖೆಜ್ರೋಲಿಯಾ, ಮಾರ್ಕಸ್ ಸ್ಟೊಯ್ನಿಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.