IPL 2ನೇ ಕ್ವಾಲಿಫೈಯರ್: CSKಗೆ 148 ರನ್ ಟಾರ್ಗೆಟ್ ನೀಡಿದ ಡೆಲ್ಲಿ

By Web DeskFirst Published May 10, 2019, 9:18 PM IST
Highlights

ಫೈನಲ್ ಪ್ರವೇಶಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ಕುತೂಹಲ ಕೆರಳಿಸಿದೆ. ಡೆಲ್ಲಿ 147 ರನ್ ಸಿಡಿಸಿದೆ. ಇದೀಗ ಚೆನ್ನೇ ಸುಲಭ ಮೊತ್ತ ಚೇಸ್ ಮಾಡಲು ರೆಡಿಯಾಗಿದೆ. ಈ ಮೊತ್ತ CSK ಚೇಸ್ ಮಾಡುತ್ತಾ? ಇಲ್ಲಿದೆ ವಿವರ.

ವಿಶಾಖಪಟ್ಟಣಂ(ಮೇ.10): ಫೈನಲ್ ಪ್ರವೇಶಕ್ಕಾಗಿ ನಡೆಯುತ್ತಿರುವ 2ನೇ ಕ್ವಾಲಿಫೈಯರ್ ಪಂದ್ಯ ಇದೀಗ ಡೆಲ್ಲಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ವಿಫಲವಾಗಿದೆ. ಮಹತ್ವದ ಪಂದ್ಯದಲ್ಲಿ ಡೆಲ್ಲಿ 9 ವಿಕೆಟ್ ನಷ್ಟಕ್ಕೆ 147ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದಲ್ಲಿ ನೀಡಿದ ಪ್ರದರ್ಶನ ನೀಡಲಿಲ್ಲ. ಕ್ವಾಲಿಫೈಯರ್ ಪಂದ್ಯ ಅನ್ನೋ ಒತ್ತಡ ಹಾಗೂ ಅನುಭವದ ಕೊರತೆ ಎದ್ದು ಕಂಡಿತು.  ಪೃಥ್ವಿ ಶಾ 5 ರನ್ ಸಿಡಿಸಿ ಔಟಾದರೆ, ಶಿಖರ್ ಧವನ್ ಹೋರಾಚ ಕೇವಲ 18 ರನ್‌ಗಳಿಗೆ ಅಂತ್ಯವಾಯಿತು. ಕಾಲಿನ್ ಮುನ್ರೋ 27 ರನ್ ಸಿಡಿಸಿ ಔಟಾದರು.

ಶ್ರೇಯಸ್ ಅಯ್ಯರ್ 13 ರನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನೂ ಅಕ್ಸರ್ ಪಟೇಲ್ ಲೆಕ್ಕಕ್ಕುಂಟು ಆಟಕ್ಕಿಲ್ಲ. ರಿಷಬ್ ಪಂತ್  ಹಾಗೂ ಶೆರ್ಫಾನೆ ರುದ್‌ಫೋರ್ಡ್ ಜೊತೆಯಾಟದಿಂದ ಡೆಲ್ಲಿ ಅಲ್ಪ ಚೇತರಿಸಿಕೊಂಡಿತು. ಆದರೆ ರುದ್‌ಫೋರ್ಡ್ 10 ರನ್ ಸಿಡಿಸಿ ಔಟಾದರು. ಇನ್ನು ಕೀಮೋ ಪೌಲ್ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು.

ಪಂತ್ ಹೋರಾಟಕ್ಕೆ ಉತ್ತಮ ಸಾಥ್ ಸಿಗಲಿಲ್ಲ. ಪಂತ್ 24 ಎಸೆತದಲ್ಲಿ 38 ರನ್ ಸಿಡಿಸಿ ಔಟಾದರು. ಪಂತ್ ವಿಕೆಟ್ ಪತನದ ಬಳಿಕ ಡೆಲ್ಲಿ ರನ್ ಗಳಿಸಲಿಲ್ಲ. ಟ್ರೆಂಟ್ ಬೋಲ್ಟ್ 6 ರನ್ ಸಿಡಿಸಿ ಔಟಾದರು. ಇಶಾಂತ್ ಶರ್ಮಾ ಹಾಗೂ ಅಮಿತ್ ಮಿಶ್ರಾ ಹೋರಾಟದಿಂದ 9 ವಿಕೆಟ್ ನಷ್ಟಕ್ಕೆ ಡೆಲ್ಲಿ 147 ರನ್ ಸಿಡಿಸಿತು. 
 

click me!