IPL 2019: ಕೊಹ್ಲಿ, ABD ಜೊತೆ ಚಹಾಲ್ ಗಲ್ಲಿ ಡ್ಯಾನ್ಸ್

By Web Desk  |  First Published Mar 29, 2019, 10:29 PM IST

ಸನ್ ರೈಸರ್ಸ್ ಹೈದರಾಬಾದ್ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಿಲಾಕ್ಸ್ ಮೂಡ್‌ಗೆ ಜಾರಿದೆ. ಅಭ್ಯಾಸದ ನಡುವೆ RCB ಡ್ಯಾನ್ಸ್ ಮಾಡಿ ಗಮನಸೆಳೆದಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಯಜುವೇಂದ್ರ ಚೆಹಾಲ್ ಡ್ಯಾನ್ಸ್ ಹೇಗಿದೆ? ಇಲ್ಲಿದೆ ವಿವರ.


ಬೆಂಗಳೂರು(ಮಾ.29): ಐಪಿಎಲ್ 12ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ 2 ಪಂದ್ಯ ಸೋತು ನಿರಾಸೆ ಅನುಭವಿಸಿದೆ. ಸೋಲು RCB ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮುಂದಿನ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡೋ ಛಲ RCB ತಂಡದಲ್ಲಿದೆ. ಇದೀಗ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿರುವ RCB ಇದೀಗ ರಿಲಾಕ್ಸ್  ಮೂಡ್‌ಗೆ ಜಾರಿದೆ.

ಇದನ್ನೂ ಓದಿ: IPL 2019: ಕ್ರಿಸ್ ಗೇಲ್ ಅದ್ಭುತ ಡ್ಯಾನ್ಸ್- ನಾಚಿ ನೀರಾದ ಕೊರಿಯೋಗ್ರಾಫರ್!

Tap to resize

Latest Videos

undefined

ಅಭ್ಯಾಸದಿಂದ ಬಿಡುವು ಮಾಡಿಕೊಂಡ RCB ಪ್ರಮೋಶನಲ್ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿತ್ತು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆ ಯಜುವೇಂದ್ರ ಚೆಹಾಲ್ ಅದ್ಭುತ ಡ್ಯಾನ್ಸ್ ಮಾಡಿ ಗಮನಸೆಳೆದರು. ಗಲ್ಲಿ ಡ್ಯಾನ್ಸ್ ಸ್ಟೆಪ್ಸ್ ಹಾಕಿದ ಚಹಾಲ್, ಕೊಹ್ಲಿ ಹಾಗೂ ಎಬಿಡಿಗೆ ಸರ್ಪ್ರೈಸ್ ನೀಡಿದರು.

ಇದನ್ನೂ ಓದಿ: 12ನೇ ಆವೃತ್ತಿ IPLನಲ್ಲಿ ಚೊಚ್ಚಲ ಶತಕ- ದಾಖಲೆ ಬರೆದ ಸಂಜು ಸಾಮ್ಸನ್ !

ಕೊಹ್ಲಿ ಹಾಗೂ ಚಹಾಲ್ ಜೊತೆ ಎಬಿಡಿ ಕೂಡ  ಸ್ಟೆಪ್ಸ್ ಹಾಕಿದರು. ಆರಂಭಿಕ ಹಂತದಲ್ಲಿ ಕೊರಿಯೊಗ್ರಾಫರ್ ಹೇಳಿದ ಸ್ಟೆಪ್ ಹಾಕಿದ ಚಹಾಲ್, ಅಂತಿಮ ಹಂತದಲ್ಲಿ ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್ ಮಾಡಿದರು. ಇದು ಕೊಹ್ಲಿ ಹಾಗೂ ಎಬಿಡಿಗೆ ನಗು ತರಿಸಿತು.
 

click me!