IPL 2019: ಸಂಜು ಸಾಮ್ಸನ್ ಶತಕ- SRHಗೆ 199 ರನ್ ಟಾರ್ಗೆಟ್

Published : Mar 29, 2019, 09:51 PM ISTUpdated : Mar 29, 2019, 09:55 PM IST
IPL 2019: ಸಂಜು ಸಾಮ್ಸನ್ ಶತಕ- SRHಗೆ 199 ರನ್ ಟಾರ್ಗೆಟ್

ಸಾರಾಂಶ

ಸಂಜು ಸಾಮ್ಸನ್ ಶತಕ  ಹಾಗೂ ಅಜಿಂಕ್ಯ ರಹಾನೆ ಅರ್ಧಶತಕದಿಂದ ರಾಜಸ್ಥಾನ ರಾಯಲ್ಸ್ ,SRH ವಿರುದ್ಧ 198 ರನ್ ಸಿಡಿಸಿದೆ. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 199 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

ಹೈದರಬಾದ್(ಮಾ.29): ಸನ್ ರೈಸರ್ಸ್ ಹೈದರಾಬಾದ್ ವಿರುದ್ದದ ಐಪಿಎಲ್ 8 ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಅಬ್ಬರಿಸಿದೆ. ಸಂಜು ಸಾಮ್ಸನ್ ಭರ್ಜರಿ ಶತಕ ಹಾಗೂ ನಾಯಕ ಅಜಿಂಕ್ಯ ರಹಾನೆ ಸಿಡಿಸಿದ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ 2 ವಿಕೆಟ್ ನಷ್ಟಕ್ಕೆ 198 ರನ್ ಸಿಡಿಸಿದೆ. ಈ ಮೂಲಕ SRH ಗೆಲುವಿಗೆ 199  ರನ್ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: ಕೊನೆ ಎಸೆತ ನೋ ಬಾಲ್: ಅಂಪೈರ್ ಮೇಲೆ ಕ್ರಿಕೆಟಿಗರು ಸಿಡಿಮಿಡಿ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ಆರಂಭದಲ್ಲೇ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು.  ಬಳಿಕ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ರಾಜಸ್ಥಾನ ವಿಕೆಟ್ ಉಳಿಕೊಂಡು ಅಬ್ಬರಿಸಲು ಆರಂಭಿಸಿತು. ನಾಯಕ ಅಜಿಂಕ್ಯ ರಹಾನೆ ಹಾಗೂ ಸಂಜು ಸಾಮ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ರಾಜಸ್ಥಾನ ತಂಡಕ್ಕೆ ನೆರವಾಯಿತು.

ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ರಹಾನೆ, ಹೈದರಾಬಾದ್ ವಿರುದ್ಧ 70 ರನ್ ಸಿಡಿಸಿದರು. ಇತ್ತ ಅಬ್ಬರಿಸಿದ ಸಂಜು ಸಾಮ್ಸನ್, ಹೈದರಾಬಾದ್ ಬೌಲರ್‌ಗಳ ಬೆವರಿಳಿಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಜು ಸಾಮ್ಸನ್ ಐಪಿಎಲ್ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದರು. ಇಷ್ಟೇ ಅಲ್ಲ 12ನೇ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. 

ಇದನ್ನೂ ಓದಿ: ಯುವಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದಾಗ ಚಹಾಲ್‌ಗೆ ನೆನಾಪಾಗಿದ್ದು ಇವರು!

ಸಾಮ್ಸನ್ ಅಜೇಯ 102 ರನ್ ಸಿಡಿಸಿದರೆ, ಬೆನ್ ಸ್ಟೋಕ್ಸ್ ಅಜೇಯ 16 ರನ್ ಭಾರಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 2 ವಿಕೆಟ್ ನಷ್ಟಕ್ಕೆ 198 ರನ್ ಸಿಡಿಸಿತು. ಇದೀಗ ಸನ್ ರೈಸರ್ಸ್ ಹೈದರಾಬಾದ್ ಗೆಲುವಿಗಾಗಿ ಬೃಹತ್ ಟಾರ್ಗೆಟ್ ಚೇಸ್ ಮಾಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ಕೋಲ್ಕತಾ ಸ್ಟೇಡಿಯಂನಿಂದ ಲಿಯೋನೆಲ್ ಮೆಸ್ಸಿ ಬೇಗ ನಿರ್ಗಮನ; ಮಿತಿಮೀರಿದ ಅಭಿಮಾನಿಗಳ ದಾಂಧಲೆ!