ಮುಂಬೈ ಇಂಡಿಯನ್ಸ್ ಯಶಸ್ಸಿಗೆ 10 ದಿಗ್ಗಜರು ಕಾರಣ!

By Web DeskFirst Published May 14, 2019, 9:36 AM IST
Highlights

ಐಪಿಎಲ್ 12ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. 4ನೇ ಐಪಿಎಲ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಕಾರಣ ಯಾರು? ತಂಡದಲ್ಲಿರುವ 10 ದಿಗ್ಗಜರೇ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ರೂವಾರಿ. ಯಾರವರು? ಇಲ್ಲಿದೆ ವಿವರ.

ಬೆಂಗಳೂರು(ಮೇ.14): ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್‌ ಯಶಸ್ಸಿನಲ್ಲಿ ಆಟಗಾರರ ಪಾತ್ರ ಎಷ್ಟಿದೆಯೋ, ಅಷ್ಟೇ ದಿಗ್ಗಜ ಕೋಚ್‌ಗಳ ಪಾತ್ರವೂ ಇದೆ. ವಿಶ್ವ ಕ್ರಿಕೆಟ್‌ನಲ್ಲಿ ಆಟಗಾರರಾಗಿ ದೊಡ್ಡ ಹೆಸರು ಸಂಪಾದಿಸಿದವರು ಕೋಚ್‌ಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ಹರಾಜಿನಲ್ಲಿ ಆಟಗಾರರ ಆಯ್ಕೆಯಿಂದ ಹಿಡಿದು, ಪಂದ್ಯದಲ್ಲಿ ಯಾವ ಆಟಗಾರ ಆಡಬೇಕು, ಯಾರು ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು, ಯಾವ ಓವರ್‌ ಯಾರು ಎಸೆಯಬೇಕು, ಯಾವ ಎದುರಾಳಿ ವಿರುದ್ಧ ಯಾವ ರಣತಂತ್ರ ಕೈಹಿಡಿಯಲಿದೆ, ಹೀಗೆ ಪ್ರತಿಯೊಂದು ಅಂಶವನ್ನೂ ಪರಿಗಣಿಸಿ, ನಿರ್ಧಾರ ಕೈಗೊಳ್ಳಲು ಅತ್ಯುತ್ತಮ ವ್ಯಕ್ತಿಗಳನ್ನು ಮುಂಬೈ ಹೊಂದಿದೆ.

ಇದನ್ನೂ ಓದಿ: ಕೆಟ್ಟ ತೀರ್ಪು: ಹುಟ್ಟುಹಬ್ಬದಂದೇ ಪೊಲಾರ್ಡ್’ಗೆ ದಂಡ..!

ವರ್ಷಪೂರ್ತಿ ಪ್ರತಿಭಾನ್ವೇಷಣೆ ನಡೆಸಿ, ತಂಡಕ್ಕೆ ಸೂಕ್ತ ಆಟಗಾರರನ್ನು ಗುರುತಿಸಲು ನಾಲ್ವರು ಸದಸ್ಯರ ತಂಡವಿದೆ. ಭಾರತ ಹಾಗೂ ವಿದೇಶಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಆಟಗಾರರ ಪ್ರದರ್ಶನ ಮೇಲೆದ ಭಾರತ ತಂಡದ ಮಾಜಿ ಕೋಚ್‌ ಜಾನ್‌ ರೈಟ್‌, ಖ್ಯಾತ ಬೌಲಿಂಗ್‌ ಕೋಚ್‌ ಟಿ.ಎ.ಶೇಖರ್‌, ಮಾಜಿ ಕ್ರಿಕೆಟಿಗರಾದ ಅಭಯ್‌ ಕುರುವಿಲ್ಲಾ, ಕಿರಣ್‌ ಮೋರೆ ಕಣ್ಣಿಡಲಿದ್ದಾರೆ. ಇವರು ತಂಡದ ಆಡಳಿತಕ್ಕೆ ಯುವ ಹಾಗೂ ಪ್ರತಿಭಾನ್ವಿತ ಆಟಗಾರರ ಮಾಹಿತಿ ತಲುಪಿಸಲಿದ್ದು, ಹರಾಜಿನಲ್ಲಿ ಖರೀದಿಸಲು ಸೂಚಿಸುತ್ತಾರೆ. ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ರಾಹುಲ್‌ ಚಾಹರ್‌, ಸೂರ್ಯಕುಮಾರ್‌ ಯಾದವ್‌ ಹೀಗೆ ಅನೇಕ ಆಟಗಾರರನ್ನು ಜಾನ್‌ ರೈಟ್‌ ಹಾಗೂ ತಂಡವೇ ಹುಡುಕಿದ್ದು.

ಇದನ್ನೂ ಓದಿ: ಆರೇಂಜ್ ಕ್ಯಾಪ್ to ಫೇರ್ ಪ್ಲೇ: 2019ರ IPL ಪ್ರಶಸ್ತಿ ಗೆದ್ದ ಕ್ರಿಕೆಟರ್ಸ್!

ತಂಡದ ‘ಐಕಾನ್‌’ ಆಗಿರುವ ಸಚಿನ್‌ ತೆಂಡುಲ್ಕರ್‌, ಆಟಗಾರರಲ್ಲಿ ಸ್ಫೂರ್ತಿ ತುಂಬಲಿದ್ದಾರೆ. ಒತ್ತಡ ನಿರ್ವಹಣೆ ಸೇರಿದಂತೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ಪ್ರಧಾನ ಕೋಚ್‌ ಆಗಿ ಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಇದ್ದರೆ, ಬ್ಯಾಟಿಂಗ್‌ ಕೋಚ್‌ ಆಗಿ ರಾಬಿನ್‌ ಸಿಂಗ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಬೌಲಿಂಗ್‌ ಕೋಚ್‌ ಆಗಿ ನ್ಯೂಜಿಲೆಂಡ್‌ನ ಶೇನ್‌ ಬಾಂಡ್‌, ಫೀಲ್ಡಿಂಗ್‌ ಕೋಚ್‌ ಆಗಿ ಜೇಮ್ಸ್‌ ಪಾಮ್ಮೆಂಟ್‌, ಕ್ರಿಕೆಟ್‌ ನಿರ್ದೇಶಕರಾಗಿ ಜಹೀರ್‌ ಖಾನ್‌ ತಂಡಕ್ಕೆ ಮಾರ್ಗದರ್ಶನ ನೀಡುತ್ತಾರೆ.

click me!