
ಮುಂಬೈ(ಏ.02): ಐಪಿಎಲ್ 12ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ 2 ಪಂದ್ಯ ಸೋತು 3ನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತು. ಆರಂಭಿಕ 2 ಪಂದ್ಯಕ್ಕೆ ಅಲಭ್ಯರಾಗಿದ್ದ ಶ್ರೀಲಂಕ ವೇಗಿ ಲಸಿತ್ ಮಲಿಂಗ್ 3ನೇ ಪಂದ್ಯದಲ್ಲಿ ಕಣಕ್ಕಿಳಿದು ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಇದೀಗ 4ನೇ ಪಂದ್ಯ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಆತಂಕ ಶುರುವಾಗಿದೆ.
ಇದನ್ನೂ ಓದಿ: ಧೋನಿ CSK ಪರ ಅಬ್ಬರಿಸುವುದರ ಹಿಂದಿನ ಗುಟ್ಟೇನು..?
ಮುಂಬೈಕ್ಕೆ ಸ್ಟಾರ್ ವೇಗಿ, ಡೆತ್ ಓವರ್ ಸ್ಪೆಷಲಿಸ್ಟಿ ಲಸಿತ್ ಮಲಿಂಗ್ ಸೇವೆ ಅಲಭ್ಯಗೊಂಡಿದೆ. ಲಸಿತ್ ಮಲಿಂಗಾ ದಿಢೀರ್ ತವರಿಗೆ ವಾಪಾಸ್ಸಾಗಿದ್ದಾರೆ. ಲಂಕಾ ದೇಸಿ ಕ್ರಿಕೆಟ್ ಆಡಲು ಮಲಿಂಗ ತವರಿಗೆ ವಾಪಾಸ್ಸಾಗಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾಗೂ ಬಿಸಿಸಿಐ ಒತ್ತಡಕ್ಕೆ ಮಣಿದು ಲಸಿತ್ ಮಲಿಂಗಾಗೆ ಐಪಿಎಲ್ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅವಕಾಶ ಮಾಡಿಕೊಟ್ಟಿತು.
ಇದನ್ನೂ ಓದಿ: ಪ್ರೀತಿ ಝಿಂಟಾ ಜೊತೆ ಬಾಂಗ್ರಾ ಡ್ಯಾನ್ಸ್ ಮಾಡಿದ ಹ್ಯಾಟ್ರಿಕ್ ವಿಕೆಟ್ ಸಾಧಕ!
ವಿಶ್ವಕಪ್ 2019ರಲ್ಲಿ ಶ್ರೀಲಂಕಾ ತಂಡದ ನಾಯಕನಾಗಲು ಮಲಿಂಗ ಮತ್ತೆ ದೇಸಿ ತಂಡದ ಆಡಲು ಲಂಕಾಗೆ ತೆರಳಿದ್ದಾರೆ. ಮಲಿಂಗಾ ಅಲಭ್ಯತೆ ಮುಂಬೈ ತಂಡಕ್ಕೆ ತೀವ್ರ ಹಿನ್ನಡೆಯಾಗಲಿದೆ. ನಾಳೆ(ಏ.03)ತವರಿನಲ್ಲಿ ಮುಂಬೈ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ನಡೆಸಲಿದೆ. ಈ ಮಹತ್ವದ ಹೋರಾಟಕ್ಕೂ ಮುನ್ನ ಮುಂಬೈ ತಂಡಕ್ಕೆ ಆಘಾತವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.