
ಮುಂಬೈ: ಎಂಸಿಸಿಯೇ ಕ್ಲೀನ್‌ಚಿಟ್ ನೀಡಿದ್ದರೂ ಮಂಕಡಿಂಗ್ ವಿವಾದ ಸದ್ಯಕ್ಕಂತೂ ಆರ್.ಅಶ್ವಿನ್ ಅವರನ್ನು ಬಿಡುವಂತೆ ಕಾಣುತ್ತಿಲ್ಲ. ಈ ಸಂಬಂಧ ಭಾರೀ ವಾದ-ವಿವಾದಗಳ ಬಳಿಕ ಇದೀಗ ಇಂಗ್ಲೆಂಡ್‌ನ ತಾರಾ ಕ್ರಿಕೆಟಿಗ ಜೇಮ್ಸ್ ಆ್ಯಂಡರ್ಸನ್, ಅಶ್ವಿನ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಕಡ್ ರನೌಟ್ ಅಂದ್ರೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
ತರಕಾರಿ ಕತ್ತರಿಸುವ ಯಂತ್ರದಲ್ಲಿ ಅಶ್ವಿನ್ ಫೋಟೋ ಹಾಕಿ, ಅದನ್ನು ಕತ್ತರಿಸಿದ್ದು, ವಿಡಿಯೋ ವೈರಲ್ ಆಗಿದೆ. ಆ್ಯಂಡರ್ಸನ್ ಅವರ ಈ ವರ್ತನೆಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ಇದೇನಾ ಕ್ರೀಡಾಸ್ಫೂರ್ತಿ ಎಂದು ಹಲವರು ಪ್ರಶ್ನಿಸಿದ್ದಾರೆ. ಅನುಭವಿ ಕ್ರಿಕೆಟಿಗರಾದ ಆ್ಯಂಡರ್ಸನ್ ಇದು ನಿಮಗೆ ಶೋಭೆ ತರುವುದಿಲ್ಲ ಇನ್ನು ಕೆಲವರು ಟೀಕಿಸಿದ್ದಾರೆ.
ಆರ್ ಅಶ್ವಿನ್ ಮಂಕಡಿಂಗ್ ರನೌಟ್- ಟ್ವಿಟರ್‌ನಲ್ಲಿ ಶುರುವಾಯ್ತು ವಾರ್!
ಮಾ.25ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅನ್ನು ಪಂಜಾಬ್ ತಂಡದ ನಾಯಕ ಅಶ್ವಿನ್ ರನೌಟ್ (ಮಂಕಡಿಂಗ್) ಮಾಡಿದ್ದರು. ಇದು ಕ್ರಿಕೆಟ್’ನಲ್ಲಿ ಸಾಕಷ್ಟು-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.