
ಜೈಪುರ(ಏ.12): ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಒಂದೆಡೆ CSK ನಾಯಕ ಧೋನಿ 100ನೇ ಗೆಲುವು ಸಾಧಿಸಿದರೆ, ಪಂದ್ಯ ಅಂತಿಮ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಪಂದ್ಯದ ನಡುವೆ ಸಿಕ್ಸರ್ ಸಿಡಿಸಿದ CSK ರವೀಂದ್ರ ಜಡೇಜಾ ತಲೆಗೆ ಧೋನಿ ಬ್ಯಾಟ್‌ನಿಂದ ಬಾರಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಸ್ಯಾಂಟ್ನರ್ ಸಿಕ್ಸರ್: CSKಗೆ ಥ್ರಿಲ್ಲರ್ ಜಯ
ಬೆನ್ ಸ್ಟೋಕ್ಸ್ ಎಸೆತದಲ್ಲಿ ಕ್ರೀಸ್‌ನಲ್ಲಿದ್ದ ರವೀಂದ್ರ ಜಡೇಜಾ ಸಿಕ್ಸರ್ ಸಿಡಿಸಿದರು. ಈ ವೇಳೆ ಆಯ ತಪ್ಪಿ ಕ್ರೀಸ್ ಮೇಲೆ ಉರುಳಿದರು. ಇತ್ತ ನಾನ್ ಸ್ಟ್ರೈಕ್‌ನಲ್ಲಿದ್ದ ಧೋನಿ ರನ್‌ಗಾಗಿ ಓಡಿದರು. ಆದರೆ ಜಡೇಜಾ ಬಿದ್ದ ಸ್ಥಳದಿಂದ ಏಳಲೇ ಇಲ್ಲ. ಹೀಗಾಗಿ ಧೋನಿ ತಮಾಷೆಗೆ ಜಡೇಜಾ ಹೆಲ್ಮೆಟ್‌ಗೆ ಬ್ಯಾಟ್‌ನಿಂದ ಹೊಡೆದರು.
ಇದನ್ನೂ ಓದಿ: KKR ಎದುರಿಸುವ ಮುನ್ನವೇ ಡೆಲ್ಲಿಗೆ ಸಂಕಷ್ಠ...!
ಕ್ರೀಸ್‌ನಲ್ಲಿದ್ದ ಜಡೇಜಾ ಬ್ಯಾಟ್ ಬೀಸಿ ಆಯ ತಪ್ಪಿ ಬಿದ್ದರೆ, ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್ ಕೂಡ ನಿಯಂತ್ರಣ ತಪ್ಪಿ ಬಿದ್ದರು. ಕ್ರೀಸ್ ಮೇಲೆ ಇಬ್ಬರೂ ನೆಲಕ್ಕುರುಳಿದರೆ, ಇತ್ತ ಧೋನಿ ತಮಾಷೆಗೆ ಬ್ಯಾಟ್ ಮೂಲಕ ಜಡೇಜಾ ತಲೆ ಮೇಲೆ ಹೊಡೆಯುವ ರೀತಿ ಬ್ಯಾಟ್ ಬೀಸಿದರು.
ಇದನ್ನೂ ಓದಿ: 10 ವರ್ಷಗಳ ಬಳಿಕ IPLನಲ್ಲೊಂದು ಅಪರೂಪದ ದಾಖಲೆ..!
ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಜಡೇಜಾ, ಬೌಲಿಂಗ್‌ನಲ್ಲಿ ದಾಖಲೆ ಬರೆದಿದ್ದಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆಯೋ ಮೂಲಕ ಐತಿಹಾಸಿ ಸಾಧನೆ ಮಾಡಿದ್ದಾರೆ. ರಾಜಸ್ಥಾನ ವಿರುದ್ಧದ ರೋಚಕ ಪಂದ್ಯದಲ್ಲಿ CSK 4 ವಿಕೆಟ್ ಗೆಲುವು ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.